More

    ಎಲ್ಲ ಗ್ರಾಪಂಗಳು ಆಕ್ಷೇಪಣೆ ಸಲ್ಲಿಸಲಿ

    ಜೊಯಿಡಾ: ಕಾಂಗ್ರೆಸ್ ಸರ್ಕಾರ ಇದ್ದಾಗ ಸಚಿವ ಸಂಪುಟದ ಉಪ ಸಮಿತಿ ಮಾಡಿ ಈ ಕಸ್ತೂರಿ ರಂಗನ್ ವರದಿ ವಿರೋಧಿಸುವ ನಿರ್ಣಯ ಮಾಡಲಾಗಿತ್ತು. ಇದು ವೈಜ್ಞಾನಿಕ ವರದಿ ಅಲ್ಲ. ಸ್ಥಳಕ್ಕೆ ಬಂದು ಮಾಡಿದ್ದು ಅಲ್ಲ. ಹೀಗಾಗಿ ಈ ವರದಿಯನ್ನು ಸಂಪೂರ್ಣವಾಗಿ ವಿರೋಧಿಸುತ್ತಿದ್ದೇವೆ ಎಂದು ಶಾಸಕ ಆರ್.ವಿ. ದೇಶಪಾಂಡೆ ಹೇಳಿದರು.

    ಜೊಯಿಡಾದಲ್ಲಿ ಕಸ್ತೂರಿ ರಂಗನ್ ವರದಿಯಂತೆ ಪರಿಸರ ಸೂಕ್ಷ್ಮ ವಲಯ ಘೊಷಣೆ ವಿರೋಧಿಸಿ ಕಾಂಗ್ರೆಸ್ ಪಕ್ಷದ ವತಿಯಿಂದ ಸೋಮವಾರ ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

    ಈ ಅಧಿಸೂಚನೆ ಜಾರಿಯಾದರೆ ಇಲ್ಲಿನ ಪ್ರವಾಸೋದ್ಯಮಕ್ಕೆ ತೊಂದರೆಯಾಗಲಿದೆ. ಉಸುಕು, ಜಲ್ಲಿ ಸೇರಿ ಗಣಿಗಾರಿಗೆ ನಿಷೇಧವಾಗಲಿದ್ದು, ಮೂಲಸೌಕರ್ಯ ಬೆಳವಣಿಗೆಗೆ ತೀವ್ರ ತೊಂದರೆಯಾಗಲಿದೆ. ಉತ್ತರ ಕನ್ನಡ ಜಿಲ್ಲೆಯ 9 ತಾಲೂಕಿನಲ್ಲಿ ಈ ಕಸ್ತೂರಿ ರಂಗನ್ ವರದಿಯಿಂದ ತೊಂದರೆಯಾಗಲಿದೆ ಎಂದ ಅವರು, ಪ್ರತಿ ಗ್ರಾಮ ಪಂಚಾಯಿತಿಯಿಂದ ಈ ವರದಿಗೆ ಆಕ್ಷೇಪಣೆ ಸಲ್ಲಿಸಬೇಕು ಎಂದರು.

    ಶಿವಾಜಿ ಸರ್ಕಲ್​ನಿಂದ ತಹಲಸೀಲ್ದಾರ್ ಕಚೇರಿವರೆಗೆ ಮೆರವಣಿಗೆ ನಡೆಸಿದ ಕೈ ಕಾರ್ಯಕರ್ತರು ತಹಸೀಲ್ದಾರ್ ಸಂಜಯ ಕಾಂಬಳೆ ಮೂಲಕ ರಾಷ್ಟಪತಿಗೆ ಮನವಿ ಸಲ್ಲಿಸಿದರು. ಜಿಪಂ ಮಾಜಿ ಸದಸ್ಯರಾದ ರಮೇಶ ನಾಯ್ಕ, ಸಂಜಯ ಹಣಬರ, ತಾಪಂ ಮಾಜಿ ಸದಸ್ಯ ವಿಜಯ ಪಂಡಿತ, ಅಣಶಿ ಗ್ರಾಪಂ ಅಧ್ಯಕ್ಷ ಅರುಣ ನಾಯ್ಕ, ಉಳವಿ ಗ್ರಾಪಂ ಉಪಾಧ್ಯಕ್ಷ ಮಂಜುನಾಥ ಮೊಕಾಶಿ, ಮಗೇಶ ಕಾಮತ, ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಸದಾನಂದ ದಬ್ಗಾರ, ಕೃಷ್ಣಾ ದೇಸಾಯಿ,ಗೋಪಾಲ ಭಟ್ಟ ಸೇರಿ ಸಾರ್ವಜನಿಕರು, ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts