More

    ಕೆಂಪನಪಾಳ್ಯ ಸುತ್ತಮುತ್ತ ಚಿರತೆ ಸಂಚಾರ

    ಕೊಳ್ಳೇಗಾಲ: ತಾಲೂಕಿನ ಕೆಂಪನಪಾಳ್ಯ ಗ್ರಾಮದ ಸುತ್ತಮುತ್ತಲ ಜಮೀನುಗಳಲ್ಲಿ ಕಳೆದ 10 ದಿನಗಳಿಂದ ಚಿರತೆ ಓಡಾಡುತ್ತಿದ್ದು, ಗ್ರಾಮಸ್ಥರಲ್ಲಿ ಆತಂಕ ಎದುರಾಗಿದೆ.

    ರಾತ್ರಿ ವೇಳೆ ಜಮೀನುಗಳಲ್ಲಿ ಚಿರತೆ ಸಂಚರಿಸಿರುವ ಹೆಜ್ಜೆ ಗುರುತುಗಳನ್ನು ಕಂಡ ರೈತರು ಭಯ ಭೀತರಾಗಿದ್ದಾರೆ. ಗ್ರಾಮದ ಚೆನ್ನಬಸವ ಆರಾಧ್ಯ ಹಾಗೂ ಮಹೇಶ್ ಅವರ ಜಮೀನಿನಲ್ಲಿ ಚಿರತೆ ಹೆಜ್ಜೆ ಗುರುತುಗಳು ಮೂಡಿದ್ದು, ಇದು ಚಿರತೆ ಚಲನವಲನವಿರುವುದಕ್ಕೆ ಪುಷ್ಟಿ ನೀಡುತ್ತಿದೆ. 2 ಚಿರತೆ, 1 ಮರಿ ಚಿರತೆ ಸಂಚರಿಸುತ್ತಿವೆ ಎಂದು ಗ್ರಾಮಸ್ಥರು ಹೇಳುತ್ತಿದ್ದಾರೆ.


    ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ತಿಳಿಸಿದರೂ ಚಿರತೆ ಸೆರೆಗೆ ಕ್ರಮ ಕೈಗೊಂಡಿಲ್ಲ. ಆತಂಕದಲ್ಲಿಯೇ ಜೀವಿಸುತ್ತಿದ್ದೇವೆ ಎಂದು ರೈತರು ಅಳಲು ತೋಡಿಕೊಳ್ಳುತ್ತಿದ್ದಾರೆ.


    ಅದಲ್ಲದೆ ರಾತ್ರಿ ವೇಳೆ ಜಮೀನು ಕಾವಲಿಗೆ ಹೋಗುವುದಕ್ಕೆ ರೈತರ ಹೆದರುವ ವಾತಾವರಣ ನಿರ್ಮಾಣವಾಗಿದೆ. ಜಮೀನುಗಳಲ್ಲಿ ಕಾಣಿಸಿಕೊಳ್ಳುತ್ತಿರುವ ಚಿರತೆ ಗ್ರಾಮದ ಕಡೆ ಬಂದು ಜನರಿಗೆ ಸಮಸ್ಯೆ ಮಾಡಿದರೆ ಏನು ಮಾಡುವುದು ಎಂದು ಅರಣ್ಯ ಇಲಾಖೆ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
    ಮನೆಯ ಅಂಗಳ, ಕೊಟ್ಟಿಗೆಯಲ್ಲಿ ದನ ಕರು, ಕುರಿಗಳನ್ನು ಕಟ್ಟಿರುತ್ತೇವೆ, ರಾತ್ರಿ ವೇಳೆ ಚಿರತೆ ದಾಳಿ ಮಾಡುವ ಸಾಧ್ಯತೆ ಇದೆ. ಆದ್ದರಿಂದ ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಚಿರತೆಗಳನ್ನು ಸೆರೆ ಹಿಡಿಯುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts