More

    ಪುರುಷರಕಟ್ಟೆಯಲ್ಲಿ ಚಿರತೆ ಪ್ರತ್ಯಕ್ಷ

    ಪುತ್ತೂರು /ಈಶ್ವರಮಂಗಲ: ಇಲ್ಲಿನ ಪುರುಷರಕಟ್ಟೆಯ ನಡುಗುಡ್ಡೆ ಚಂದಪ್ಪ ಪೂಜಾರಿ ಅವರ ಜಾಗದಲ್ಲಿ ಚಿರತೆ ಹಾದುಹೋಗಿದ್ದನ್ನು ಸಾರ್ವಜನಿಕರು ಕಂಡಿದ್ದು, ಭಯದಿಂದ ಸ್ಥಳೀಯ ಪೊಲೀಸರು ಹಾಗೂ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.

    ಸ್ಥಳದಲ್ಲಿ ಪೊಲೀಸ್ ಇಲಾಖೆ, ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಮೊಕ್ಕಾಂ ಹೂಡಿದ್ದಾರೆ. ಹಲವಾರು ದಿನಗಳಿಂದ ಸರ್ವೆ, ಮುಂಡೂರು, ಬನ್ನೂರು, ಪಡೀಲ್, ಕೋಡಿಂಬಾಡಿ ಹಾಗೂ ಕಡಬ ತಾಲೂಕಿನ ಪಾಲ್ತಾಡಿ, ಚೆನ್ನಾವರ, ಬಂಬಿಲದಲ್ಲಿ ಚಿರತೆ ಪ್ರತ್ಯಕ್ಷವಾಗುತ್ತಿತ್ತು. ಈ ಹಿನ್ನೆಲೆ ಅರಣ್ಯ ಇಲಾಖೆ ವತಿಯಿಂದ ಮಂಗಳವಾರ ನರಿಮೊಗರು ಗ್ರಾಪಂ ವ್ಯಾಪ್ತಿಯ ಮುಕ್ವೆ ಮೊಗೇರಡ್ಕ ಎಂಬಲ್ಲಿ ಬೋನು ಅಳವಡಿಸಿದ್ದಾರೆ.

    ಕಾಡುಕೋಣಗಳ ಹಾವಳಿ: ಅರಿಯಡ್ಕ ಗ್ರಾಮದ ಬಪ್ಪಪುಂಡೇಲು ಪ್ರದೇಶದಲ್ಲಿ ಕಾಡುಕೋಣಗಳ ಹಿಂಡು ಕೃಷಿ ಪ್ರದೇಶಕ್ಕೆ ನುಗ್ಗಿ ಬೆಳೆ ನಾಶಮಾಡುತ್ತಿವೆ. 10ಕ್ಕೂ ಅಧಿಕ ಸಂಖ್ಯೆಯಲ್ಲಿರುವ ಕಾಡುಕೋಣಗಳ ಹಿಂಡು ರಾತ್ರಿ ವೇಳೆ ಭತ್ತದ ಗದ್ದೆಗಳಿಗೆ ದಾಳಿಯಿಟ್ಟು ಬೆಳೆದ ಭತ್ತದ ಪೈರನ್ನು ನಾಶ ಮಾಡುತ್ತಿವೆ ಎಂದು ಅಲ್ಲಿನ ರೈತರು ಅರಣ್ಯ ಇಲಾಖೆಗೆ ದೂರು ನೀಡಿದ್ದಾರೆ. ಬಪ್ಪಪುಂಡೇಲು ನಿವಾಸಿ ಹೊನ್ನಪ್ಪ ನಾಯ್ಕ ಅವರು 1 ಎಕರೆಯಲ್ಲಿ ಬೆಳೆದ ಭತ್ತದ ಪೈರು ತೆನೆ ಬಿಡುವ ಹಂತದಲ್ಲಿದ್ದು, ಈ ಗದ್ದೆಗೆ ಕಾಡುಕೋಣಗಳು ಲಗ್ಗೆಯಿಟ್ಟು ಮುಕ್ಕಾಲು ಭಾಗ ಪೈರನ್ನು ತಿಂದು ನಾಶ ಮಾಡಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts