More

    ತಂತಿ ಬೇಲಿಗೆ ಸಿಲುಕಿದ್ದ ಚಿರತೆ ರಕ್ಷಣೆ

    ಎಚ್.ಡಿ.ಕೋಟೆ: ತಾಲೂಕಿನ ಮಲಾರ ಗ್ರಾಮದಲ್ಲಿ ಚಿರತೆಯೊಂದು ತಂತಿ ಬೇಲಿಗೆ ಸಿಲುಕಿ ನರಳಾಡುತ್ತಿದ್ದ ವೇಳೆ ಅರಣ್ಯ ಇಲಾಖೆಯ ಸಿಬ್ಬಂದಿ ಶುಕ್ರವಾರ ರಕ್ಷಣೆ ಮಾಡಿ ಮತ್ತೆ ಅರಣ್ಯಕ್ಕೆ ಬಿಟ್ಟಿದ್ದಾರೆ.

    ಮಲಾರ ಗ್ರಾಮದ ಆರ್ಮುಗ ಅವರ ಜಮೀನಿನಲ್ಲಿ ಎರಡು ವರ್ಷದ ಚಿರತೆಯು ಜಮೀನಿನ ರಕ್ಷಣೆಗಾಗಿ ಅಳವಡಿಸಿದ್ದ ತಂತಿ ಬೇಲಿಗೆ ಸಿಲುಕಿ ನರಳಾಡುತ್ತಿದ್ದುದನ್ನು ಕಂಡ ಜಮೀನಿನ ಮಾಲೀಕರು ಅರಣ್ಯ ಇಲಾಖೆಗೆ ತಿಳಿಸಿದ್ದಾರೆ.

    ಈ ವೇಳೆ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ವೈದ್ಯರು ಚಿರತೆಯನ್ನು ರಕ್ಷಣೆ ಮಾಡಿ ಪ್ರಥಮ ಚಿಕಿತ್ಸೆ ನೀಡಿ ಗ್ಲುಕೋಸ್ ನೀಡಿ ತಪಾಸಣೆ ನಡೆಸಿದರು. ಸುಧಾರಿಸಿದ ನಂತರ ಚಿರತೆಯನ್ನು ನಾಗರಹೊಳೆ ಅಭಯಾರಣ್ಯಕ್ಕೆ ಬಿಡಲಾಯಿತು.

    ಅರಣ್ಯ ಇಲಾಖೆಯ ಸರಗೂರು ವಲಯ ಅರಣ್ಯಾಧಿಕಾರಿ ಹನುಮಂತರಾಜು, ಉಪ ವಲಯ ಅರಣ್ಯಾಧಿಕಾರಿಗಳಾದ ಪೆಮ್ಮಯ್ಯ, ಚಂದನ್ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts