More

    ಬೆಂಗಳೂರಿನಲ್ಲಿ ಮತ್ತೆ ಚಿರತೆ ಪ್ರತ್ಯಕ್ಷ; ಮನೆ ಬಾಗಿಲು ಬಳಿ ಬಂದು ನಿಂತ ಚಿರತೆ

    ಬೆಂಗಳೂರು : ಕಳೆದ ಕೆಲ ದಿನಗಳ ಹಿಂದೆ ಬೆಂಗಳೂರಿನ ಹೊಸೂರು ರಸ್ತೆಯ ಕೂಡ್ಲುಗೇಟ್‌ ಸುತ್ತ ಮುತ್ತ ಚಿರತೆ ಓಡಾಡುತ್ತಿತ್ತು. ಇಲ್ಲಿನ ಪ್ರತಿಷ್ಠಿತ cadenza ಅಪಾರ್ಟ್ ಮೆಂಟ್‌ನಲ್ಲಿ ಚಿರತೆ ಕಾಣಿಸಿಕೊಂಡಿತ್ತು. ಅರಣ್ಯಾಧಿಕಾರಿಗಳು ಚಿರತೆ ಸೆರೆ ಹಿಡಿಯುವಾಗ ಸಿಬ್ಬಂದಿ ಗುಂಡೇಟಿಗೆ ಚಿರತೆ ಮೃತಪಟ್ಟಿತ್ತು. ಆದರೆ ಇತ್ತ ಬೆಂಗಳೂರು ನಗರ ನಿವಾಸಿಗಳಿಗೆ ಮತ್ತೆ ಚಿರತೆ ಆತಂಕ ಶುರುವಾಗಿದೆ.

    ನೈಸ್ ರಸ್ತೆ ಸಮೀಪದ ಚಿಕ್ಕತೋಗೂರು ಬಳಿ ನಿನ್ನೆ (ನ.04) ರ ಸಂಜೆ 7.40ರ ಸಮಯದಲ್ಲಿ ಚಿರತೆ ಕಾಣಿಸಿಕೊಂಡಿದೆ. ಶನಿವಾರ ಸಂಜೆ ಚಿರತೆ ಮನೆ ಕಂಪೌಂಡ್​​ ಒಳಗೆ ನುಗ್ಗಿದ್ದು, ಬಾಗಿಲು ಬಳಿ ಬಂದ ಚಿರತೆ ಕಂಡು ಬಾಲಕ ಕಿರುಚಾಡಿದ್ದಾನೆ ಕಿರುಚಾಟಕ್ಕೆ ಚಿರತೆ ಓಡಿ ಹೋಗಿದೆ. ಕೆ.ಆರ್.ಪುರಂ ಅರಣ್ಯ ವಲಯ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

    ಅರಣ್ಯ ಸಿಬ್ಬಂದಿ ಸ್ಥಳದಲ್ಲೇ ಬೀಡು ಬಿಟ್ಟಿದ್ದಾರೆ. ಶನಿವಾರ ಮಳೆ ಬಂದ ಹಿನ್ನೆಲೆಯಲ್ಲಿ ಹೆಜ್ಜೆ ಗುರುತು ಪತ್ತೆಯಾಗಿದೆ. ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ನಡೆಸಲು ಎಲ್ಲಾ ತಯಾರಿ ನಡೆಸಿದ್ದಾರೆ.

    12 ರೂ. ಕೊಟ್ಟರೆ ನಿಮಗೂ ಸಿಗುತ್ತದೆ ‘ಪಾಪ ಮುಕ್ತ’ ಸರ್ಟಿಫಿಕೇಟ್​!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts