More

    ನಿಂಬೆಹಣ್ಣು ಬೆಲೆ ಹೆಚ್ಚಿದರೂ ತಗ್ಗದ ಬೇಡಿಕೆ

    ಕೊಟ್ಟೂರು: ಬಿಸಿಲಿನ ತಾಪಮಾನ ಏರುತ್ತಿರುವಂತೆ ದೇಹಕ್ಕೆ ತಂಪು ನೀಡುವ ನಿಂಬೆಹಣ್ಣಿನ ಬೆಲೆಯೂ ಗಗನಕ್ಕೇರಿದೆ. ಒಂದಕ್ಕೆ 5 ರಿಂದ 10 ರೂ. ದರವಿದ್ದರೂ ಆರೋಗ್ಯ ದೃಷ್ಟಿಯಿಂದ ಗ್ರಾಹಕರು ಅನಿವಾರ್ಯವಾಗಿ ಖರೀದಿಸುತ್ತಿದ್ದಾರೆ.

    ಅಡುಗೆಗೆ ಪ್ರತಿದಿನ ನಿಂಬೆರಸ ಬಳಸುವವರಿದ್ದಾರೆ. ಬೆಸಿಗೆಯಲ್ಲಂತೂ ನಿಂಬೆ ಶರಬತ್ತು ಬೇಕೆ ಬೇಕು. ತಂಪುಪಾನೀಯಗಳು ತಾತ್ಕಾಲಿಕವಾಗಿ ದೇಹಕ್ಕೆ ತಂಪು ನೀಡುತ್ತವೆ. ಆರೋಗ್ಯಕ್ಕೆ ಪೂರಕವಲ್ಲ. ಆದ್ದರಿಂದ ನಿಂಬೆಹಣ್ಣು ದುಬಾರಿಯಾದರೂ ಬಹುತೇಕರು ಬಳಸುತ್ತಿರುವುದರಿಂದ ಬೇಡಿಕೆ ತಗ್ಗಿಲ್ಲ.

    ಮೊದಲು ಕೊಟ್ಟೂರು ತಾಲೂಕಿನ ತಿಮ್ಮಲಾಪುರ ಹಾಗೂ ಜಗಳೂರು ತಾಲೂಕಿನ ಚಿಕ್ಕಬಂಟನಹಳ್ಳಿಯಲ್ಲಿ ನಿಂಬೆಹಣ್ಣಿನ ತೋಟಗಳು ಇದ್ದವು. ಅಂತರ್ಜಲ ಕೊರತೆ ಹಾಗೂ ಇತರ ಕಾರಣಗಳಿಂದ ರೈತರು ನಿಂಬೆ ಬದಲಿಗೆ ಆದಾಯ ತರುವ ಬೆಳೆಗಳಿಗೆ ಮೊರೆ ಹೋಗಿದ್ದಾರೆ.

    ಇದರಿಂದಾಗಿ ಕೊಟ್ಟೂರಿನಲ್ಲಿ ನಿಂಬೆಹಣ್ಣಿಗೆ ಬೇಡಿಕೆ ಹೆಚ್ಚಾಗಿದೆ. ದಿನಕ್ಕೆ ಒಂದು ಕ್ವಿಂಟಾಲ್ ನಿಂಬೆಹಣ್ಣು ಮಾರಾಟವಾಗುತ್ತದೆ. ಬೇಸಿಗೆಯಲ್ಲಿ ಆರೋಗ್ಯ ರಕ್ಷಕ ನಿಂಬೆಹಣ್ಣಿನ ಬೆಲೆ ಹೆಚ್ಚಾದರೂ ಬೇಡಿಕೆ ಮಾತ್ರ ಕಡಿಮೆಯಾಗಿಲ್ಲ.

    ನಮ್ಮ ಭಾಗದಲ್ಲಿ ನಿಂಬೆಹಣ್ಣು ಬೆಳೆಯುತ್ತಿಲ್ಲ. ತಿರುಪತಿ, ರಾಯದುರ್ಗ, ರಾಯಚೂರಿನಿಂದ ಹೊಸಪೇಟೆ ಮಾರುಕಟ್ಟೆಗೆ ಬರುತ್ತದೆ. ಪ್ರತಿ ದಿನ ಹರಾಜಿನಲ್ಲಿ ಖರೀದಿಸಿ ಇಲ್ಲಿ ತಂದು ಮಾರಾಟ ಮಾಡುತ್ತೇವೆ. ಆದ್ದರಿಂದ ಬೆಲೆ ಹೆಚ್ಚಾಗಿದೆ. ವರ್ಷದಲ್ಲಿ ಏಪ್ರಿಲ್, ಮೇನಲ್ಲಿ ನಿಂಬೆ ಹಣ್ಣಿಗೆ ಬೇಡಿಕೆ ಹೆಚ್ಚು. ಬೇರೆ ದಿನಗಳಲ್ಲಿ ಇಷ್ಟು ದರವಿಲ್ಲ.
    ಎಚ.ಪಿ.ರಮೇಶ ಹೆಗ್ಡಾಳ್
    ನಿಂಬೆಹಣ್ಣಿನ ವ್ಯಾಪಾರಿ, ಕೊಟ್ಟೂರು

    ನಿಂಬೆಹಣ್ಣಿನ ಬೆಲೆ ಹೆಚ್ಚಾಗಿದೆ. ಅಡುಗೆಗೆ ಮತ್ತು ಮನೆಗೆ ಅತಿಥಿಗಳು ಬಂದರೆ ಶರಬತ್ತು ಮಾಡಿಕೊಡಲು ಹಾಗೂ ಅಮಾವಾಸ್ಯೆಗೆ ನಿಂಬೆಹಣ್ಣು ಬೇಕೇಬೇಕು. ಬೆಲೆ ಹೆಚ್ಚಾದರೂ ಖರೀದಿಸುವುದು ಅನಿವಾರ್ಯವಾಗಿದೆ.
    ರಮ್ಯಾ, ಸುಚಿತ್ರಾ
    ಗ್ರಾಹಕರು, ಕೊಟ್ಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts