More

    ಈ ಬಾರಿಯ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಹಿಂದಿಗಿಂತಲೂ ಬಹಳ ವಿಭಿನ್ನವಾಗಿರಲಿದೆ!

    ನವದೆಹಲಿ: ಜೂನ್​ 21ರಂದು ನಡೆಯಲಿರುವ 6ನೇ ಅಂತಾರಾಷ್ಟ್ರೀಯ ಯೋಗ ದಿನದ ಪ್ರಮುಖ ಕಾರ್ಯಕ್ರಮದ ಆತಿಥ್ಯವನ್ನು ಈ ಬಾರಿ ಕೇಂದ್ರಾಡಳಿತ ಪ್ರದೇಶ ಲಡಾಖ್​ ರಾಜಧಾನಿ ಲೇಹ್​ ವಹಿಸಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಅದ್ಧೂರಿ ಸಮಾರಂಭ ನಡೆಯಲಿದೆ ಎಂದು ಆಯುಷ್​ ಸಚಿವಾಲಯ ಬುಧವಾರ ತಿಳಿಸಿದೆ.

    ಜೂನ್​ 21ರಂದು ಪ್ರಧಾನಿ ಮೋದಿ ಅವರು ಸಾಮಾನ್ಯ ಯೋಗಾ ಶಿಷ್ಠಾಚಾರ ಅಡಿಯಲ್ಲಿ ಯೋಗಾಸನ ಪ್ರದರ್ಶಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಸುಮಾರು 15 ರಿಂದ 20 ಸಾವಿರ ಮಂದಿ ಭಾಗವಹಿಸಲಿದ್ದಾರೆ.

    ಈ ಬಗ್ಗೆ ಮಾತನಾಡಿರುವ ಆಯುಷ್ ಸಚಿವ ಶ್ರೀಪಾದ್​ ನಾಯಕ್​, ಇದುವರೆಗೂ ನಡೆದಂತಹ ಯೋಗ ದಿನಾಚರಣೆಗಿಂತಲೂ ಈ ಬಾರಿ ತುಂಬಾ ವಿಭಿನ್ನ ಹಾಗೂ ವಿಶೇಷವಾಗಿರಲಿದೆ ಎಂದು ಭರವಸೆ ನೀಡುತ್ತೇವೆ. ಇದೇ ಮೊದಲ ಬಾರಿಗೆ ಅತ್ಯಂತ ಎತ್ತರದ ಸ್ಥಳ ಲೇಹ್​ನಲ್ಲಿ ಹೆಚ್ಚಿನ ಸಂಖ್ಯೆಯ ಜನರೊನ್ನೊಳಗೊಂಡ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನೆರವೇರಲಿದೆ ಎಂದು ತಿಳಿಸಿದ್ದಾರೆ.

    ಈಗಾಗಲೇ ಜೂನ್​ 21ರ ಸಮಾರಂಭಕ್ಕೆ ಸಿಐಐ, ಎಫ್​ಐಸಿಸಿಐ, ಇನ್ಸ್ಟಿಟ್ಯೂಟ್​ ಆಫ್​ ಕಂಪನಿ ಸೆಕ್ರೆಟರಿಯಂತಹ ಕೈಗಾರಿಕ ಸಂಸ್ಥೆಗಳು ಮತ್ತು ಸಿಬಿಎಸ್​ಇ, ಎನ್​ಸಿಇಆರ್​ಟಿ, ಯುಜಿಸಿ ಮತ್ತು ಡಿಎವಿಯಂತಹ ಶಿಕ್ಷಣ ಸಂಸ್ಥೆಗಳು ಕಾರ್ಯಕ್ರಮ ನೀಡಲು ತಯಾರಿ ನಡೆಸುತ್ತಿವೆ ಎಂದು ಮಾಹಿತಿ ನೀಡಿದರು.

    ಕಳೆದ ವರ್ಷ ಜಾರ್ಖಂಡ್​ನ ರಾಂಚಿಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ನಡೆದಿತ್ತು.

    ಪ್ರಧಾನಿ ಮೋದಿ ಅವರ ಮನವಿಯಿಂದಾಗಿ 2015ರಿಂದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಪ್ರಾರಂಭವಾಯಿತು. ಪ್ರತಿ ವರ್ಷ ಜೂನ್​ 21ರಂದು ನಡೆಯುವ ವಾರ್ಷಿಕ ಕಾರ್ಯಕ್ರಮವನ್ನು ಆಯುಷ್​ ಸಚಿವಾಲಯದ ಅಡಿಯಲ್ಲಿ ನಡೆಯುತ್ತದೆ. (ಏಜೆನ್ಸೀಸ್​)

    ನೀವು ಎಸ್​ಬಿಐ ಗ್ರಾಹಕರೇ..? ಹಾಗಿದ್ದರೆ ನಿಮಗೊಂದು ಸಿಹಿ ಸುದ್ದಿ ಇಲ್ಲಿದೆ ನೋಡಿ..

    ಹುಟ್ಟುಹಬ್ಬ ಆಚರಣೆ ವೇಳೆ ಕೇಕ್​ ತಿಂದು 8 ಮಂದಿ ಅಸ್ವಸ್ಥ: ಕೇಕ್​ ಪರಿಶೀಲಿಸಿದಾಗ ಕಾದಿತ್ತು ಆಘಾತ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts