More

    ನ್ಯಾಯಸಮ್ಮತ ಚುನಾವಣೆಗೆ ಕೈ ಜೋಡಿಸಿ – ಡಾ. ಕೆ. ಹರೀಶಕುಮಾರ

    ಬೆಳಗಾವಿ: ಮಾಹಿತಿ ಒದಗಿಸುವಲ್ಲಿ ಮಾಧ್ಯಮಗಳ ಪಾತ್ರ ಪ್ರಮುಖವಾಗಿದೆ. ಚುನಾವಣಾ ವೇಳೆ ಪಕ್ಷಪಾತ ಮಾಡದೆ ಎಲ್ಲ ಪಕ್ಷ ಮತ್ತು ಅಭ್ಯರ್ಥಿಗಳ ಸುದ್ದಿ ಪ್ರಕಟಿಸಲು ಒತ್ತು ನೀಡಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿ ಡಾ. ಕೆ. ಹರೀಶಕುಮಾರ ಹೇಳಿದ್ದಾರೆ.

    ನಗರದ ಡಿಸಿ ಕಚೇರಿಯಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಮಾಧ್ಯಮ ಪ್ರಮಾಣೀಕರಣ ಹಾಗೂ ಕಣ್ಗಾವಲು ಸಮಿತಿ, ಪೇಡ್ ನ್ಯೂಸ್ ಕುರಿತ ಸಭೆಯಲ್ಲಿ ಮಾತನಾಡಿ, ಬಡವ-ಶ್ರೀಮಂತ ಎನ್ನದೆ ಚುನಾವಣಾ ಕಣದಲ್ಲಿರುವ ಎಲ್ಲ ಅಭ್ಯರ್ಥಿಗಳಿಗೆ ಸಮಾನ ಅವಕಾಶ ಸಿಗಬೇಕು. ಹೀಗಾಗಿ ಮಾಧ್ಯಮಗಳು ಮುಕ್ತ ಹಾಗೂ ನ್ಯಾಯಸಮ್ಮತ ಚುನಾವಣೆಗೆ ಕೈ ಜೋಡಿಸಬೇಕು.

    ಚುನಾವಣೆಗೆ ಸಂಬಂಧಿಸಿದಂತೆ ಧ್ವನಿ ಹಾಗೂ ಚಿತ್ರ ಪ್ರಚಾರ ಕೈಗೊಳ್ಳುವುದಕ್ಕಿಂತ ಮುನ್ನ ಎಂಸಿಎಂಸಿಯಿಂದ ಅನುಮತಿ ಪಡೆಯಬೇಕು. ಚುನಾವಣೆ ಪ್ರಚಾರಕ್ಕಾಗಿ ಪೋಸ್ಟರ್, ಪಾಂಪ್ಲೆಟ್ಸ್ ಮತ್ತಿತರ ಸಾಮಗ್ರಿ ಮುದ್ರಿಸುವಂತಹ ಮುದ್ರಣಾಲಯದ ಮಾಲೀಕರು ನಿಗದಿತ ಅಪೆಂಡಿಕ್ಸ್-ಎ, ಅಪೆಂಡಿಕ್ಸ್-ಬಿ ನಮೂನೆ ಭರ್ತಿ ಮಾಡಿ ಸಲ್ಲಿಸಬೇಕು.

    ಚುನಾವಣೆಗೆ ಸಂಬಂಧಿಸಿದಂತೆ ಟಿವಿ, ಕೇಬಲ್ ಟಿವಿ, ಎಲ್‌ಇಡಿ ವಾಹನಗಳ ಮೂಲಕ ಪ್ರಚಾರ, ಆಡಿಯೋ ಪ್ರಚಾರ, ಬಲ್ಕ್ ಎಸ್‌ಎಂಎಸ್, ವಾಟ್ಸ್ ಆ್ಯಪ್, ಸಾಮಾಜಿಕ ಜಾಲತಾಣಗಳ ಮೂಲಕ ಪ್ರಚಾರ ನಡೆಸಬೇಕಾದರೆ ಕಡ್ಡಾಯವಾಗಿ ಎಂಸಿಎಂಸಿನಿಂದ ಅನುಮತಿ ಪಡೆಯಬೇಕು.

    ಚುನಾವಣೆಗಿಂತ 48 ಗಂಟೆ ಮೊದಲು ಮುದ್ರಣ ಮಾಧ್ಯಮಗಳಲ್ಲಿ ಜಾಹೀರಾತು ಪ್ರಕಟಿಸಬೇಕಾದರೆ ಅರ್ಜಿ ಸಲ್ಲಿಸಿ ಅನುಮತಿ ಪಡೆಯಬೇಕು ಎಂದರು. ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಪ್ರೀತಂ ನಸಲಾಪುರೆ, ನಗರಾಭಿವೃದ್ಧಿ ಪ್ರಾಧಿಕಾರದ ಭೂಸ್ವಾಧೀನ ಅಧಿಕಾರಿ ರವೀಂದ್ರ ಕರಲಿಂಗಣ್ಣವರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts