More

    ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿ ನನೆಗುದಿಗೆ

    ಸಾಗರ: ಕ್ಷೇತ್ರ ವ್ಯಾಪ್ತಿಯಲ್ಲಿ ಹಲವು ಯೋಜನೆಗಳು ನನೆಗುದಿಗೆ ಬಿದ್ದಿವೆ. ಅಭಿವೃದ್ಧಿಗೆ ವ್ಯಾಪಕ ಹಿನ್ನಡೆಯಾಗಿದೆ ಎಂದು ಆರೋಪಿಸಿ ಸಾಗರ ಕ್ಷೇತ್ರ ಅಭಿವೃದ್ಧಿ ಹೋರಾಟ ಸಮಿತಿ ಪದಾಧಿಕಾರಿಗಳು ಉಪವಿಭಾಗಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿದರು.

    ಸಮಿತಿ ಸಂಚಾಲಕ ತೀ.ನ.ಶ್ರೀನಿವಾಸ್ ಮಾತನಾಡಿ, ಕಾಗೋಡು ತಿಮ್ಮಪ್ಪ ಅವರ ಅವಧಿಯಲ್ಲಿ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ್ದರು. ಆದರೆ ಈಗ ಶಾಸಕ ಹರತಾಳು ಹಾಲಪ್ಪ ಅವರಿಗೆ ಕ್ರಿಯಾಶೀಲತೆ ಇಲ್ಲದ್ದರಿಂದ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.

    ಶಾಸಕರು ಎಂಎಸ್​ಐಎಲ್ ಅಧ್ಯಕ್ಷರಾದ ನಂತರ ಮದ್ಯದಂಗಡಿ, ಬಾರ್ ತೆರೆಯಲು ಆಸಕ್ತಿ ವಹಿಸುತ್ತಿದ್ದಾರೆ. ಲಂಚದ ಹಾವಳಿ ಹೆಚ್ಚಾಗಿದೆ. ಆಡಳಿತ ನಿರ್ವಹಣೆಯಲ್ಲಿ ವಿಫಲರಾಗಿದ್ದಾರೆ. ಖಾಸಗಿ ಬಸ್ ನಿಲ್ದಾಣ, ಹೊಸ ಸಂತೆ ಮಾರುಕಟ್ಟೆ ಉದ್ಘಾಟನೆಯಾಗಿಲ್ಲ. ಮೀನು ಮಾರುಕಟ್ಟೆ ಕಾಮಗಾರಿ ಅರ್ಧಕ್ಕೆ ನಿಂತಿದೆ. ವಿಜಯನಗರ ಬಡಾವಣೆಯ ಈಜುಕೊಳ ಮತ್ತು ಸ್ಟೇಡಿಯಂ ಪಕ್ಕದ ಒಳಾಂಗಣ ಕ್ರೀಡಾಂಗಣ ಕಾಮಗಾರಿ ಕಳಪೆಯಾಗಿದೆ. ತನಿಖೆ ಮಾಡಿಸುತ್ತೇನೆ ಎಂದ ಶಾಸಕರು ಮೌನವಾಗಿದ್ದಾರೆ ಎಂದು ಆಪಾದಿಸಿದರು.

    ಒಳಚರಂಡಿ ಕಾಮಗಾರಿ ಅಪೂರ್ಣವಾಗಿದ್ದು, ಕೆಲ ವಾರ್ಡ್​ಗಳಲ್ಲಿ ಸಂಚಾರವೇ ಕಷ್ಟವಾಗುತ್ತಿದೆ. ತಾಲೂಕು ಕಚೇರಿ ನಿರ್ವಣಕ್ಕೆ 10 ಕೋಟಿ ರೂ. ಮಂಜೂರಾದರೂ ಕಾಮಗಾರಿ ಆರಂಭಗೊಂಡಿಲ್ಲ. ಬಗರ್​ಹುಕುಂ, ಆಶ್ರಯ, 94ಸಿ, 94 ಸಿಸಿ ಅಡಿ ಹಕ್ಕಪತ್ರ ನೀಡಿಲ್ಲ ಎಂದು ದೂರಿದರು.

    ನಗರಸಭೆ ಸದಸ್ಯರಾದ ಎನ್.ಲಲಿತಮ್ಮ, ಸೈಯದ್ ಜಾಕೀರ್, ಸಮಿತಿ ಪ್ರಮುಖರಾದ ಮಹ್ಮದ್ ಖಾಸಿಂ, ಎಲ್.ಟಿ.ತಿಮ್ಮಪ್ಪ ಹೆಗಡೆ, ಕೆ.ಸಿದ್ದಪ್ಪ, ಕಾಶಿನಾಥ್ ಚೌಧರಿ, ರವಿ ಜಂಬಗಾರು, ಎಲ್.ವಿ.ಸುಭಾಷ್, ಪರಮೇಶ್ವರ ದೂಗೂರು, ಡಿ.ದಿನೇಶ್, ವಸಂತ್ ಶೇಟ್, ಷಣ್ಮುಖ, ಜಿ.ಪುಟ್ಟಪ್ಪ, ಗೋಪಾಲಕೃಷ್ಣ, ರಾಜಣ್ಣ, ಪಾರ್ವತಮ್ಮ, ಶ್ರೀಧರ್ ಇದ್ದರು.

    ಕೊಪ್ಪಲಗದ್ದೆ ಜಮೀನಿನಲ್ಲಿ ಸಿಂಥೆಟಿಕ್ ಟ್ರ್ಯಾಕ್ ನಿರ್ವಣಕ್ಕೆ ಭೂಸ್ವಾಧೀನ ಮಾಡಿಕೊಳ್ಳಲು 5 ಕೋಟಿ ರೂ. ಇದೆ ಎನ್ನುತ್ತಿದ್ದಾರೆ. ಆದರೆ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿಲ್ಲ. ಬಿ.ಎಚ್.ರಸ್ತೆ ಅಗಲೀಕರಣಕ್ಕೆ 90 ಕೋಟಿ ರೂ. ಬಿಡುಗಡೆಯಾಗಿದೆ ಎಂದು ಶಾಸಕರು ಹೇಳಿದರೆ, ಅಧಿಕಾರಿಗಳು ಇಲ್ಲ ಎನ್ನುತ್ತಿದ್ದಾರೆ. ಮಹಿಳಾ ಕಾಲೇಜಿನ ಹಾಸ್ಟೆಲ್ ಉದ್ಘಾಟನೆಗೂ ಮá-ನ್ನವೇ ದá-ರಸ್ತಿಗೆ ಬಂದಿದೆ.

    | ತೀ.ನ.ಶ್ರೀನಿವಾಸ್, ಸಮಿತಿ ಸಂಚಾಲಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts