More

    ಅಲ್ಪಸಂಖ್ಯಾತರಿಗೆ ಮೇಲ್ಮನೆ ಅನುಮಾನ

    ಬೆಂಗಳೂರು: ರಾಜ್ಯದ ಚಿಂತಕರ ಚಾವಡಿ ಎಂದೇ ಕರೆಯಲಾಗುವ ಮೇಲ್ಮನೆ ಯಲ್ಲಿ ಐದು ಸ್ಥಾನಗಳು ತೆರವಾಗಿದ್ದು, ಸರ್ಕಾರ ನಾಮನಿರ್ದೇಶನ ಮಾಡುವ ಈ ಐದು ಸ್ಥಾನಗಳಿಗೆ ತೀವ್ರ ಪೈಪೋಟಿ ಶುರುವಾಗಿದೆ. ವೃತ್ತಿಪರ ರಾಜಕಾರಣಿಗಳಷ್ಟೇ ಅಲ್ಲ, ಪಕ್ಷದಲ್ಲಿ ದಶಕಗಳ ಕಾಲ ಯಾವುದೇ ಸ್ಥಾನಮಾನವಿಲ್ಲದೆ ದುಡಿದ ಕಾರ್ಯಕರ್ತರೂ ವರಿಷ್ಠರಿಗೆ ದುಂಬಾಲು ಬಿದ್ದಿದ್ದಾರೆ. ಜಯಮಾಲಾ ರಾಮಚಂದ್ರ, ಐವಾನ್ ಡಿ’ಸೋಜಾ, ಇಕ್ಬಾಲ್ ಅಹಮದ್ ಸರಡಗಿ, ಅಬ್ದುಲ್ ಜಬ್ಬಾರ್, ತಿಪ್ಪಣ್ಣ ಕಮಕನೂರು ಅವರ ಅವಧಿ ಜೂ. 23ರಂದು ಮುಕ್ತಾಯವಾಗಿದೆ. ತೆರವಾದ 5 ಸ್ಥಾನಗಳ ಪೈಕಿ ಮೂರರಲ್ಲಿ ಅಲ್ಪಸಂಖ್ಯಾತರಿದ್ದರು. ಆದರೆ, ಈ ಬಾರಿ ಅಧಿಕಾರದಲ್ಲಿರುವ ಬಿಜೆಪಿ ಅಲ್ಪಸಂಖ್ಯಾತರಿಗೆ ಒಂದು ಸ್ಥಾನ ನೀಡುವುದೂ ಅನುಮಾನ ಎನ್ನಲಾಗುತ್ತಿದೆ. ರಾಜ್ಯಸಭೆಗೆ ನಿಷ್ಠಾವಂತ ಕಾರ್ಯ ಕರ್ತರಿಬ್ಬರನ್ನು ಆರಿಸಿದ್ದರಿಂದ ಕಾರ್ಯಕರ್ತರ ಒತ್ತಡ ಈ ಬಾರಿ ಹಿಂದಿಗಿಂತ ಹೆಚ್ಚಿದೆ.

    ಅಲ್ಪಸಂಖ್ಯಾತರ ಓಲೈಕೆ ಅನಿವಾರ್ಯ: ಕೇಂದ್ರ ಸರ್ಕಾರ ಜಾರಿಗೆ ತಂದ ಪೌರತ್ವ ತಿದ್ದುಪಡಿ ಕಾಯ್ದೆ, ಜಮ್ಮು-ಕಾಶ್ಮೀರದಲ್ಲಿ 370ನೇ ವಿಧಿ ರದ್ದು, ರಾಜ್ಯದಲ್ಲಿ ಶಾದಿಭಾಗ್ಯ ಯೋಜನೆಯಲ್ಲಿ ಉಂಟಾದ ಗೊಂದಲ, ಪ್ರತಿಪಕ್ಷ ಹಾಗೂ ಎಡಪಕ್ಷಗಳ ಅಲ್ಪಸಂಖ್ಯಾತ ಸಮುದಾಯ ವಿರೋಧಿ ಎಂಬ ಆರೋಪ ಸೇರಿ ನಾನಾ ಕಾರಣಗಳಿಂದ ಬಿಜೆಪಿ ಬಗ್ಗೆ ಅಲ್ಪಸಂಖ್ಯಾತರಲ್ಲಿದ್ದ ವಿಶ್ವಾಸ ತಗ್ಗುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಹಾಗಾಗಿ ಹಿಂದೆ ಇದ್ದ 3 ಅಲ್ಪಸಂಖ್ಯಾತ ಸ್ಥಾನಗಳ ಪೈಕಿ ಒಂದನ್ನಾದರೂ ಕೊಡಬೇಕು ಎಂಬ ಆಗ್ರಹ ಬಿಜೆಪಿಯಲ್ಲಿ ಕೇಳಿಸುತ್ತಿದೆ. ಆದರೆ, ಸರ್ಕಾರ ಅಧಿಕಾರಕ್ಕೆ ಬರಲು ಕಾರಣರಾದ ಎಚ್. ವಿಶ್ವನಾಥ್, ಸಿ.ಪಿ. ಯೋಗೇಶ್ವರ ಸೇರಿ ರಾಜಕಾರಣಿಗಳ ದಂಡೇ ಈ ಸ್ಥಾನಗಳ ಮೇಲೆ ಕಣ್ಣಿಟ್ಟಿದ್ದರಿಂದ ಬಿಜೆಪಿ ವರಿಷ್ಠರು ಉಭಯ ಸಂಕಟಕ್ಕೆ ಸಿಲುಕಿದ್ದಾರೆ.

    ಇದನ್ನೂ ಓದಿ: ಜೈಲಲ್ಲೇ ಯೂಸುಫ್ ಮೆಮೋನ್ ಸಾವು: 1993 ಮುಂಬೈ ಸರಣಿ ಸ್ಪೋಟದ ಅಪರಾಧಿ

    ರೆಕ್ಕೆ ಬಿಚ್ಚದ ಹಳ್ಳಿಹಕ್ಕಿ: ವಿಧಾನಸಭೆಯಿಂದ ವಿಧಾನಪರಿಷತ್​ಗೆ ನಡೆದ ಚುನಾವಣೆಯಲ್ಲಿ ಅವಕಾಶವಂಚಿತ ಎಚ್. ವಿಶ್ವನಾಥ್ ಈಗಾಗಲೇ ಸಿಎಂ ತಮ್ಮನ್ನು ಸಾಹಿತಿಗಳ ಕೋಟಾದಲ್ಲಿ ನಾಮನಿರ್ದೇಶನ ಮಾಡುವ ಭರವಸೆ ನೀಡಿದ್ದಾರೆ ಎಂದಿದ್ದಾರೆ. ಯೋಗೇಶ್ವರ್ ತೆರೆಮರೆಯಲ್ಲಿ ಪ್ರಯತ್ನಿಸಿ ದ್ದಾರೆ. ಅಲ್ಪಸಂಖ್ಯಾತರ ಕೋಟಾದಲ್ಲಿ ಅನ್ವರ್ ಮಾಣಿಪ್ಪಾಡಿ, ರಹೀಂ ಉಚ್ಚಿಲ್ ಹೆಸರು ಪ್ರಮುಖವಾಗಿ ಕೇಳಿಬರುತ್ತಿವೆ.

    ಒಳಚರಂಡಿಯಲ್ಲೂ ಕರೊನಾ ವೈರಸ್ ಪತ್ತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts