More

    ರಾಜ್ಯ ಬಿಜೆಪಿ ಮೇಲೆ ಹೈಕಮಾಂಡ್ ನಿಗಾ

    ಬೆಂಗಳೂರು: ರಾಜ್ಯಸಭಾ ಚುನಾವಣೆ ನಂತರದ ಬೆಳವಣಿಗೆ ಮತ್ತು ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಕೆಲ ಮಹತ್ವದ ವಿಷಯಗಳ ಬಗ್ಗೆ ಬಿಜೆಪಿ ಹೈಕಮಾಂಡ್ ಮಾಹಿತಿ ಕಲೆ ಹಾಕಿದೆ.

    ಬಿಜೆಪಿ ನಂಬಿ ಬಂದವರಿಗೆ ನೀಡಿರುವ ಭರವಸೆಯಂತೆ ಅವಕಾಶ ಸಿಗಲಿವೆ. ವಿಧಾನ ಪರಿಷತ್​ಗೆ ಆಯ್ಕೆಯಾಗಲಿರುವ ನಾಲ್ವರ ಹೆಸರನ್ನು ಕೇಂದ್ರ ಸಮಿತಿಗೆ ಶಿಫಾರಸು ಮಾಡಿದ್ದೇವೆ.
    | ಕೆ.ಎಸ್.ಈಶ್ವರಪ್ಪ ಸಚಿವ

    ರಾಜ್ಯದಲ್ಲಿ ಬಣ ರಾಜಕೀಯದ ಮೇಲೆ ನಿಗಾ ಇಡಲು ಮತ್ತು ಬಣಗಳೇ ಮುಂದೊಂದು ದಿನ ಪಕ್ಷ ಸಂಘಟನೆಗೆ ತೊಡಕಾಗಬಹುದು ಎನ್ನುವ ಕಾರಣಕ್ಕೆ ತೇಪೆ ಹಾಕುವ ಕೆಲಸಕ್ಕೆ ಮುಂದಾಗಿರುವ ಹೈಕಮಾಂಡ್, ಹಲವರಿಗೆ ಕರೆ ಮಾಡಿ ಮಾತನಾಡಿದೆ. ರಾಜ್ಯಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಪಕ್ಷ ತೀರ್ವನಿಸಿದೆ, ಇದರಲ್ಲಿ ವೈಯಕ್ತಿಕ ನಿರ್ಧಾರಗಳೇನಿಲ್ಲ.

    ಇದನ್ನೂ ಓದಿ: ಕೋವಿಡ್ ಕಂಟಕ: ಐದನೆಯ ಆರ್ಥಿಕ ಹಿಂಜರಿತ ಎದುರಿಸುತ್ತಿದೆ ಭಾರತ

    ಆದರೂ, ಹಲವು ವಿಷಯಗಳಲ್ಲಿ ನನ್ನ ಹೆಸರನ್ನು ಅನಗತ್ಯವಾಗಿ ಎಳೆತರಲಾಗುತ್ತಿದೆ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅಸಮಾಧಾನ ವ್ಯಕ್ತಪಡಿಸಿದ ಬಗ್ಗೆ ಪಕ್ಷದೊಳಗೆ ಚರ್ಚೆ ನಡೆಯುತ್ತಿದೆ. ಸಿಎಂರನ್ನು ನಿರ್ಲಕ್ಷಿಸಿ ಟಿಕೆಟ್ ಘೋಷಣೆ ಮಾಡಲಾಗಿದೆ ಅಸಮಾಧಾನ ತಣಿಸಲು ಪರಿಷತ್ ಚುನಾವಣೆಯನ್ನೇ ಸಂತೋಷ್ ವಿರುದ್ಧದ ದಾಳವಾಗಿ ಬಳಸುವ ಸಾಧ್ಯತೆಯೂ ಇದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

    ಚೀನಾ-ಭಾರತ ಸಂಘರ್ಷ: ಭಾರತದ 20 ಯೋಧರು ಹುತಾತ್ಮ, 40ಕ್ಕೂ ಹೆಚ್ಚು ಚೀನಾ ಯೋಧರೂ ಹತರಾಗಿರುವ ಶಂಕೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts