More

    ಸೆ. 13 ರಿಂದ 24 ಮುಂಗಾರು ಅಧಿವೇಶನ; ಚರ್ಚೆಗೆ ಬರಲಿವೆ 18 ಹೊಸ ವಿಧೇಯಕಗಳು

    ಬೆಂಗಳೂರು: ಸೆಪ್ಟೆಂಬರ್ 13 ರಿಂದ 24 ರವರೆಗೆ ಹತ್ತು ದಿನಗಳ ಕಾಲ ಕರ್ನಾಟಕದ 15ನೇ ವಿಧಾನಸಭೆಯ 10ನೇ ಅಧಿವೇಶನ ನಡೆಯಲಿದೆ ಎಂದು ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ತಿಳಿಸಿದ್ದಾರೆ. ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿಧಾನಸಭೆಯ ಈ ಮಳೆಗಾಲದ ಅಧಿವೇಶನ ಯಶಸ್ವಿಯಾಗಿ ನಡೆಯಲು ಎಲ್ಲರ ಸಹಕಾರ ಕೋರುತ್ತೇನೆ ಎಂದರು.

    ಅಧಿವೇಶನದಲ್ಲಿ ಚರ್ಚೆಯಾಗಲು ಇದುವರೆಗೂ 18 ಬಿಲ್‌ಗಳು ಬಂದಿವೆ. ನಾಲ್ಕು ಪೆಂಡಿಂಗ್​ ಇರುವ ಬಿಲ್​ಗಳಿವೆ. ಕಾರ್ಯದರ್ಶಿಗಳಿಗೆ ಪತ್ರ ಬರೆದು ಎಲ್ಲಾ ಸದಸ್ಯರಿಗೂ ಬಿಲ್ ಕಾಪಿ ಕೊಡಲು ಹೇಳಿದ್ದೇನೆ. ಇನ್ನು ಮೇಲೆ ಬರುವ ಬಿಲ್‌ಗಳ ಬಗ್ಗೆ ಏನು ಮಾಡಬೇಕು ಅಂತ ಸಂಬಂಧಿಸಿದವರ ಜೊತೆ ಚರ್ಚಿಸುತ್ತೇನೆ ಎಂದರು. ಸಭಾಧ್ಯಕ್ಷನಾಗಿ ಮೊದಲೇ ಬರಬೇಕು. ಎಲ್ಲಾ ವಿಧೇಯಕಗಳು ಸದನದಲ್ಲಿ ಮಂಡನೆಯಾಗುವಂತೆ ಮಾಡಬೇಕು. ಸರ್ಕಾರವೂ ಸಹ ಅಷ್ಟೇ ಕಾಳಜಿಯಿಂದ ಸ್ಪಂದಿಸಬೇಕು ಎಂದರು.

    ಇದನ್ನೂ ಓದಿ: ಡ್ರಗ್ಸ್‌ ಕೇಸ್‌ ಆರೋಪಿಗಳಿರುವ ಜೈಲಿಗೆ ಬೆಂಕಿ; ಅಗ್ನಿಗೆ ಸಿಲುಕಿ ಸುಟ್ಟು ಕರಕಲಾದ ಕೈದಿಗಳು

    ಸೆ. 24 ರಂದು, ಅಧಿವೇಶನದ ಕೊನೆಯ ದಿನ, ಸಂಸದೀಯ ಮೌಲ್ಯಗಳ ಬಗ್ಗೆ ವಿಶೇಷ ಅಧಿವೇಶನ ನಡೆಸಲು ತೀರ್ಮಾನಿಸಲಾಗಿದೆ. ಅರ್ಧ ದಿನದ ವಿಶೇಷ ಜಂಟಿ ಅಧಿವೇಶನ ಮಾಡಲಾಗುವುದು. ಕೇಂದ್ರದ ಸ್ಪೀಕರ್ ಓಂ ಬಿರ್ಲಾ ಅವರು ಬರಲಿದ್ದು, ನಮ್ಮನ್ನು ಕುರಿತು ಕೆಲವು ಮಾತನಾಡಲಿದ್ದಾರೆ. ಈ ಬಗ್ಗೆ ಸಿಎಂ ಬಳಿ ಮನವಿ ಮಾಡಿದ್ದೇನೆ. ಸೋಮವಾರ ಬ್ಯುಸಿನೆಸ್ ಅಡ್ವೈಸರಿ ಕಮಿಟಿ ಜತೆ ಕೂಡ ಮಾತನಾಡುವೆ ಎಂದು ತಿಳಿಸಿದರು.

    18 ವಿಧೇಯಕಗಳು: ಬಿಡಬ್ಲ್ಯೂಎಸ್​​ಎಸ್​ಬಿ ಬಿಲ್, ಗೂಂಡಾ, ಕೊಳಚೆ ಪ್ರದೇಶ ಕಬಳಿಸುವವರ ವಿಧೇಯಕ 2021, ದಂಡ ಪ್ರಕ್ರಿಯೆ, ಬಂದೀಖಾನೆ, ಸ್ಟಾಂಪ್ ತಿದ್ದುಪಡಿ, ಪೌರಸಭೆ ಕಾನೂನು ತಿದ್ದುಪಡಿ, 4 ಆದ್ಯಾ ಆದೇಶ ಬಿಲ್, ಸಿವಿಲ್ ಸೇವೆ ಶಿಕ್ಷಕರ ಬಿಲ್ ತಿದ್ದುಪಡಿ, ಪಟ್ಟಣ ಮತ್ತು ಗ್ರಾಮಾಂತರ ಆದ್ಯ ಆದೇಶ – ಹೀಗೆ ಸದ್ಯ ಒಟ್ಟು 18 ಬಿಲ್‌ಗಳು ಬಂದಿವೆ. ತಡೆ ಹಿಡಿದಿರುವ 4 ಬಿಲ್‌‌ಗಳು ಬಾಕಿ ಇವೆ. ಇವುಗಳ ಬಗ್ಗೆ ಚರ್ಚೆ ಮಾಡಲಾಗುವುದು. ಜೊತೆಗೆ ಸ್ಟಾರ್ಡ್​​, ಅನ್​ಸ್ಟಾರ್ಡ್​ ಮತ್ತು ಗಮನ ಸೆಳೆಯುವ ಪ್ರಶ್ನೆಗಳಿಗೆ ಅವಕಾಶ ಇರಲಿದೆ ಎಂದರು.

    ಇದನ್ನೂ ಓದಿ: ಬಾಲಿವುಡ್​ ನಟ ಅಕ್ಷಯ್ ಕುಮಾರ್​ ತಾಯಿ ನಿಧನ: ಅಮ್ಮನ ಕಳೆದುಕೊಂಡ ನೋವನ್ನು ಅಕ್ಷರಕ್ಕಿಳಿಸಿದ ನಟ

    ಈ ಬಾರಿ ನಮ್ಮ ವೆಬ್​​ಸೈಟ್​​ನಲ್ಲಿ, ಚುಕ್ಕಿ ಮತ್ತು ಇತರ ಪ್ರಶ್ನೆಗಳನ್ನು ಅಪ್​​ಲೋಡ್ ಮಾಡಲಾಗುವುದು. ಸಾರ್ವಜನಿಕರ ಸೇವೆಗೂ ಪ್ರಶ್ನೆಗಳು ಲಭ್ಯವಿರಲಿದೆ. ನಮ್ಮ ಸಚಿವಾಲಯದಲ್ಲಿ ವೆಬ್​​ಸೈಟ್ ಮಾಡಿ ಉತ್ತಮ ಕೆಲಸ ಮಾಡಿದ್ದಾರೆ ಎಂದು ಕಾಗೇರಿ ಪ್ರಶಂಸಿಸಿದರು.

    ಕ್ಯಾಮ್ಸ್ ಶಶಿಕುಮಾರ್ ಹತ್ಯೆಗೆ ಸುಪಾರಿ: ಕಾಡಿನಲ್ಲಿ ಅಡಗಿಕುಳಿತಿದ್ದ ಆರೋಪಿ ಆರ್​​​ಟಿಐ ರವಿ!

    ಒತ್ತಡ ನಿಯಂತ್ರಣಕ್ಕೆ ‘ವಜ್ರಾಸನದಲ್ಲಿ ಪರ್ವತಾಸನ’ ಮಾಡಿ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts