More

    VIDEO| ಗಾನಗಂಧರ್ವನಿಗೆ 80ರ ಸಂಭ್ರಮ: ಕನ್ನಡದಲ್ಲಿ ಮೋಡಿ ಮಾಡಿದ ಯೇಸುದಾಸ್​ ಹಾಡುಗಳಿವು!

    ನವದೆಹಲಿ: ಇಂದು 80ನೇ ವಸಂತಕ್ಕೆ ಕಾಲಿಟ್ಟಿರುವ ಗಾನಗಂಧರ್ವ ಕೆ.ಜೆ.ಯೇಸುದಾಸ್​ ಅವರಿಗೆ ಎಲ್ಲೆಡೆ ಶುಭಾಶಯಗಳ ಸುರಿಮಳೆಯೇ ಹರಿದುಬರುತ್ತಿದೆ. ಯೇಸುದಾಸ್​ ಮೂಲತಃ ಕೇರಳದವರಾದರೂ ವಿಶ್ವವಿಖ್ಯಾತಿಯನ್ನು ಹೊಂದಿದ್ದಾರೆ. ಅದಕ್ಕೆ ಕಾರಣ ಅವರ ಸುಮಧುರ ಕಂಠ. ಕನ್ನಡದಲ್ಲೂ ಅನೇಕ ಹಾಡುಗಳನ್ನು ಹಾಡಿರುವ ಯೇಸುದಾಸ್​ ಕನ್ನಡಿಗರ ಮನದಲ್ಲೂ ಮನೆ ಮಾಡಿದ್ದಾರೆ.

    ಸುಮಾರು 25 ಸಾವಿರ ಸಿನಿಮಾ ಹಾಡುಗಳು, ಕರ್ನಾಟಕ ಸಂಗೀತ ಭಜನ ಹಾಗೂ ಭಕ್ತಿಗೀತೆಗಳು ಸೇರಿದಂತೆ ವಿವಿಧ ಬಗೆಯ 80 ಸಾವಿರ ಹಾಡುಗಳನ್ನು ಯೇಸುದಾಸ್​ ಹಾಡಿದ್ದಾರೆ. ಬಹುತೇಕ ಭಾರತೀಯ ಎಲ್ಲ ಭಾಷೆಗಳಲ್ಲಿಯೂ ಗಾನ ಗಂಧರ್ವ ತಮ್ಮ ಸುಮಧುರ ಕಂಠವನ್ನು ಪರಿಚಯಿಸಿದ್ದಾರೆ.

    ವಿದೇಶಿ ಭಾಷೆಯಲ್ಲಿಯೂ ಮೋಡಿ
    ಮಲಯಾಳಂ, ಕನ್ನಡ, ತಮಿಳು, ತೆಲುಗು, ಹಿಂದಿ, ಬೆಂಗಾಳಿ ಮತ್ತು ಒಡಿಯಾದಂತೆ ಭಾರತೀಯ ಭಾಷೆಗಳನ್ನು ಹೊರತುಪಡಿಸಿದರೆ, ಅರೇಬಿಕ್​, ಇಂಗ್ಲಿಷ್​, ಲ್ಯಾಟಿನ್​ ಮತ್ತು ರಷಿಯನ್​ ಭಾಷೆಗಳಲ್ಲಿಯೂ ತಮ್ಮ 6 ದಶಕಗಳ ಸಂಗೀತ ಜರ್ನಿಯಲ್ಲಿ ಧ್ವನಿ ನೀಡಿದ್ದಾರೆ.

    ಇಂದಿಗೂ ಅಯ್ಯಪ್ಪ ಭಕ್ತರಿಗೆ ಫೇವರಿಟ್ ಆಗಿರುವ “ಹರಿವರಾಸನಂ” ಸೇರಿ
    ಯೇಸುದಾಸ್​ ಅಯ್ಯಪ್ಪಸ್ವಾಮಿ ಕುರಿತು ಸಾಕಷ್ಟು ಭಕ್ತಿಗೀತೆಗಳನ್ನು ಹಾಡಿದ್ದಾರೆ. ಅದರಲ್ಲಿ ಹರಿವರಾಸನಂ ಗೀತೆ ಸಾಕಷ್ಟು ಪ್ರಸಿದ್ಧಿ ಪಡೆದಿದ್ದು, ಇಂದಿಗೂ ಈ ಹಾಡನ್ನು ಅಯ್ಯಪ್ಪ ಭಕ್ತರು ಸದಾ ಗುನುಗುತ್ತಿರುತ್ತಾರೆ.

    ಕನ್ನಡದಲ್ಲಿ ಸಾಕಷ್ಟು ಹಾಡುಗಳುನ್ನು ಹಾಡಿರುವ ದಿಗ್ಗಜ ಗಾಯಕ
    ಯೇಸುದಾಸ್​ ಅವರಿಗೆ ಕನ್ನಡ ಚಿತ್ರರಂಗಕ್ಕೂ ಸಾಕಷ್ಟು ನಂಟಿದೆ. ವಿಷ್ಣುವರ್ಧನ್​, ರವಿಚಂದ್ರನ್​ ಹಾಗೂ ಅಂಬರೀಷ್​ ಸೇರಿದಂತೆ ಅನೇಕರ ಚಿತ್ರಕ್ಕೆ ಯೇಸುದಾಸ್​ ಧ್ವನಿಗೂಡಿಸಿದ್ದಾರೆ. ವಿಷ್ಣುವರ್ಧನ್​ ಅವರ “ಮಲಯ ಮಾರುತ” ಚಿತ್ರದ ಎಲ್ಲ ಹಾಡುಗಳಿಗೂ ಯೇಸುದಾಸ್​ ಧ್ವನಿ ನೀಡಿದ್ದಾರೆ. ರವಿಚಂದ್ರನ್​ ಅವರ “ಸೋನೆ ಸೋನೆ”, “ಬಂಗಾರದಿಂದ ಬಣ್ಣಾನ ತಂದ” ಹಾಗೂ ಅಂಬರೀಷ್​ ಅವರ “ಅಂದವೋ ಅಂದವೋ ಕನ್ನಡ ನಾಡು” ಹಾಡುಗಳು ಇಂದಿಗೂ ಸಂಗೀತ ಪ್ರಿಯರ ಫೇವರಿಟ್​ ಆಗಿದೆ. ಇದನ್ನು ಹೊರತುಪಡಿಸಿ ಅನೇಕ ಭಕ್ತಿಗೀತೆಗಳನ್ನು ಕನ್ನಡದಲ್ಲಿಯೂ ಹಾಡಿದ್ದಾರೆ. ತಮ್ಮ ಸುಮಧುರ ಕಂಠದಿಂದ ಇಷ್ಟು ಕಾಲ ರಂಜಿಸಿರುವ ಯೇಸುದಾಸ್​ ಮತ್ತಷ್ಟು ಕಾಲ ನಮ್ಮನ್ನು ರಂಜಿಸಲಿ ಹಾಗೂ ಅವರಿಗೆ ಒಳ್ಳೆಯ ಆಯುರ್​ ಆರೋಗ್ಯ ಲಭಿಸಲಿ ಎಂದು ಪಾರ್ಥೀಸೋಣ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts