More

    ಕ್ರಿಕೆಟ್​ಗೆ ದೈಹಿಕ ಸಾಮರ್ಥ್ಯ ಅತಿಮುಖ್ಯ

    ಸಾಗರ: ಲೆದರ್​ಬಾಲ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಯಶಸ್ಸು ಸಾಧಿಸಬೇಕಾದ ಕ್ರಿಕೆಟ್ ಪಟುಗಳು ಬದ್ಧತೆ ಜತೆಗೆ ದೈಹಿಕ ಸಾಮರ್ಥ್ಯ ಕಾಪಾಡಿಕೊಳ್ಳುವುದು ಅಗತ್ಯ ಎಂದು ಅಂತಾರಾಷ್ಟ್ರೀಯ ವೀಕ್ಷಕ ವಿವರಣೆಗಾರ ಎಂ.ರಾಘವೇಂದ್ರ ಹೇಳಿದರು.

    ನಗರದ ಶಾಂತಾವೇರಿ ಗೋಪಾಲಗೌಡ ಕ್ರೀಡಾಂಗಣದಲ್ಲಿ ಸಾಗರ ಸ್ಪೋರ್ಟ್ಸ್ ಅಕಾಡೆಮಿ ಮತ್ತು ಬೆಂಗಳೂರಿನ ಮಾರುತಿ ಕ್ರಿಕೆಟ್ ಕ್ಲಬ್ ಆಯೋಜಿಸಿರುವ 18 ವರ್ಷದೊಳಗಿನ ಸೀಮಿತ ಓವರ್​ಗಳ ಲೆದರ್​ಬಾಲ್ ಕ್ರಿಕೆಟ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.

    ಗ್ರಾಮೀಣ ಭಾಗದಲ್ಲಿ ಸಹಜ ಪ್ರತಿಭಾವಂತರು ಇರುತ್ತಾರೆ. ಅಂಥವರಿಗೆ ಸೂಕ್ತ ತರಬೇತಿ ನೀಡುವ ಕೆಲಸವನ್ನು ಸಾಗರ ಸ್ಪೋರ್ಟ್ಸ್ ಅಕಾಡೆಮಿ ಮಾಡಿಕೊಂಡು ಬರುತ್ತಿದೆ. ಬೆಂಗಳೂರಿನಂತಹ ನಗರ ಪ್ರದೇಶಗಳಿಂದ ಬಂದು ಇಲ್ಲಿನ ಕ್ರೀಡಾಪಟುಗಳ ಜತೆಗೆ ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ಪರಸ್ಪರ ಹೆಚ್ಚಿನ ಕೌಶಲ್ಯ ಕಲಿತುಕೊಳ್ಳಲು ಸಾಧ್ಯ ಎಂದು ತಿಳಿಸಿದರು.

    ಸಾಗರ ಸ್ಪೋರ್ಟ್ಸ್ ಅಕಾಡೆಮಿ ಅಧ್ಯಕ್ಷ ರವಿನಾಯ್ಡು ಮಾತನಾಡಿ, ಮಕ್ಕಳಲ್ಲಿರುವ ಕ್ರೀಡಾಪ್ರತಿಭೆ ಗುರುತಿಸಿ ಅವರನ್ನು ಉತ್ತಮ ಕ್ರೀಡಾಪಟುಗಳಾಗಿ ಮಾಡುವಲ್ಲಿ ಇಂತಹ ಪಂದ್ಯಾವಳಿಗಳ ಆಯೋಜನೆ ಅಗತ್ಯ. ಇತ್ತೀಚಿನ ವರ್ಷಗಳಲ್ಲಿ ಐಪಿಎಲ್, ಕೆಪಿಎಲ್ ಇತರೆ ಕ್ರಿಕೆಟ್ ರಂಗ ಪ್ರವೇಶಿಸಿದ ಮೇಲೆ ಕ್ರಿಕೆಟ್ ಕಲಿಯಲು ಯುವಜನರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ ಎಂದು ಹೇಳಿದರು.

    ಪತ್ರಕರ್ತರಾದ ದೀಪಕ್ ಸಾಗರ, ಮಹೇಶ್ ಹೆಗಡೆ, ಸಾಗರ ಸ್ಪೋರ್ಟ್ಸ್ ಅಕಾಡೆಮಿ ಗೌರವಾಧ್ಯಕ್ಷ ಐ.ಎನ್.ಸುರೇಶ್​ಬಾಬು, ಪ್ರಧಾನ ಕಾರ್ಯದರ್ಶಿ ಡಿ.ಗಣೇಶ್, ಬೆಂಗಳೂರು ಮಾರುತಿ ಕ್ರಿಕೆಟ್ ಕ್ಲಬ್​ನ ಸೈಯದ್, ಮಿಥನ್, ಪ್ರಸನ್ನ, ಸಿದ್ದರಾಜು, ಹರ್ಷ, ಕಿರಣ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts