More

    ಕಲಿಕೆಯಲ್ಲಿ ನಿಷ್ಠೆ, ಆಸಕ್ತಿ ಅಗತ್ಯ

    ಕೊಪ್ಪಳ: ಕಲಿಯುವ ವಿಷಯದ ಮೇಲೆ ನಿಷ್ಠೆ, ಆಸಕ್ತಿ ಇರಬೇಕು. ಬುದ್ಧಿ ಸದುಪಯೋಗ ಪಡಿಸಿಕೊಂಡು ಜ್ಞಾನ ಸಂಪಾದಿಸಿಕೊಳ್ಳಬೇಕು ಎಂದು ಹೈ-ಕೋರ್ಟ್‌ನ ಹಿರಿಯ ನ್ಯಾಯವಾದಿ ಮತ್ತು ಹುಬ್ಬಳ್ಳಿ ಕಾನೂನು ಮಹಾವಿದ್ಯಾಲಯದ ಸಿಂಡಿಕೇಟ್ ಸದಸ್ಯ ಎಸ್.ಎನ್.ಪರಾಂಡೆ ಹೇಳಿದರು.

    ಇದನ್ನೂ ಓದಿ:ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ

    ನಗರದ ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾದ ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಕಾನೂನು ಮಹಾವಿದ್ಯಾಲಯದಲ್ಲಿ ಶನಿವಾರ ಹಮ್ಮಿಕೊಂಡಿದ್ದ ವಾರ್ಷಿಕೋತ್ಸವ ಮತ್ತು ತೃತೀಯ ವರ್ಷದ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಿದರು.

    ಕಠಿಣ ಪರಿಶ್ರಮದಿಂದ ಮಾತ್ರ ಯಶಸ್ಸು ಸಾಧ್ಯ ಎಂಬುದನ್ನು ಮನಗಾಣಬೇಕು. ವಿದ್ಯೆ ಎಂದಿಗೂ ಕಳೆದುಕೊಳ್ಳದ ಸಂಪತ್ತು. ಗೌರವ ಮತ್ತು ಅಸ್ತಿತ್ವವನ್ನು ಸಾಬೀತುಪಡಿಸಲು ಉತ್ತಮ ವ್ಯಕ್ತಿತ್ವ ರೂಢಿಸಿಕೊಳ್ಳಿ. ಸಾಮಾಜಿಕ ಜೀವನದಲ್ಲಿ ಅವಿಭಾಜ್ಯ ಅಂಗವಾಗಿ. ಸಮಯ ಪಾಲನೆ, ಸಂಯಮ ಹಾಗೂ ಶಿಸ್ತು ರೂಢಿಸಿಕೊಳ್ಳಬೇಕು ಎಂದರು.

    ಡಿಬಿಎಚ್‌ಪಿ ಸಲಹಾ ಸಮಿತಿ ಮುಖ್ಯಸ್ಥ ಹಾಗೂ ಹುಬ್ಬಳ್ಳಿ-ಧಾರವಾಡ ಮಾಜಿ ಮೇಯರ್ ಬಿ.ಈರೇಶ ಅಂಚಟಗೇರಿ, ಕಿಮ್ಸ್‌ನ ಸಹಾಯಕ ಪ್ರಾಧ್ಯಾಪಕ ಡಾ.ಎಸ್.ಅಜಯಕುಮಾರ, ಡಿಬಿಎಚ್‌ಪಿ ಸಭಾದ ಕಾರ್ಯದರ್ಶಿ ಎಸ್.ರಾಧಾಕೃಷ್ಣನ್,
    ಪ್ರಾಚಾರ್ಯೆ ಉಷಾದೇವಿ ಹಿರೇಮಠ, ಉಪಪ್ರಾಚಾರ್ಯ ಎಸ್.ಎಂ.ಬಸವರಾಜ,
    ವಿದ್ಯಾರ್ಥಿ ಒಕ್ಕೂಟದ ಮುಖ್ಯ ಕಾರ್ಯದರ್ಶಿ ಬಿ.ಸುಜಾತಾ,
    ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳ ಅಧ್ಯಕ್ಷ ಬಿ.ವೈ.ಅಳ್ಳಳ್ಳಿ,
    ಉಪನ್ಯಾಸಕರಾದ ಕೆ.ಶೇಷಾದ್ರಿ, ಶಿಲ್ಪಾ ಬಿರಾದಾರ,
    ಯು.ಎಸ್.ಸೊಪ್ಪಿಮಠ, ಸಯ್ಯದ್ ಅಮೀರ್ ಖುಸ್ರೋ, ಲತಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts