More

    ವಿದ್ಯಾರ್ಥಿಗಳಲ್ಲಿ ಆಸಕ್ತಿ ಮೂಡಿಸಿ

    ವಿಜಯವಾಣಿ ಸುದ್ದಿಜಾಲ ಧಾರವಾಡ
    ಲ್ಯಾಬ್‌ಗಳು ವಿದ್ಯಾರ್ಥಿಗಳು, ಪೋಷಕರಿಗೆ ಮಾತ್ರವಲ್ಲದೆ ಇಡೀ ಸಮುದಾಯಕ್ಕೆ ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದ ಶಿಕ್ಷಣ ನೀಡಲು ಸಹಕಾರಿ ಎಂದು ವೈಶುದೀಪ ಫೌಂಡೇಶನ್ ಅಧ್ಯಕ್ಷೆ ಶಿವಲೀಲಾ ಕುಲಕರ್ಣಿ ಹೇಳಿದರು.
    ತಾಲೂಕಿನ ಕರಡಿಗುಡ್ಡ ಗ್ರಾಮದ ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಸ್ಪೇಸ್ ಇ ಸ್ಕಾಲರ್ ಹಿಮಾಲಯನ್ ಬಾಹ್ಯಾಕಾಶ ಕೇಂದ್ರದ ಹಾಗೂ ಶಾಲಾ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆರಂಭಿಸಿರುವ ಬಾಹ್ಯಾಕಾಶ ಮತ್ತು ಖಗೋಳವಿಜ್ಞಾನ ಪ್ರಯೋಗಾಲಯವನ್ನು ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
    ಶಿಕ್ಷಕರು ತಮ್ಮ ಶೈಕ್ಷಣಿಕ ಮತ್ತು ವೃತ್ತಿಪರ ಬೆಳವಣಿಗೆಗೆ ಸಹಾಯ ಮಾಡುವ ವಿದ್ಯಾರ್ಥಿಗಳಲ್ಲಿ ಜಾಗೃತಿ ಮತ್ತು ಆಸಕ್ತಿ ಮೂಡಿಸಬೇಕು ಎಂದರು.
    ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಎಸ್.ಎಸ್.ಕೆಳದಿಮಠ ಮಾತನಾಡಿ, ವಿದ್ಯಾರ್ಥಿಗಳು ಗುರಿ ಹೊಂದಬೇಕು. ಬಾಹ್ಯಾಕಾಶ ಮತ್ತು ಖಗೋಳಶಾಸ್ತ್ರದಲ್ಲಿ ವೃತ್ತಿ ಜೀವನ ಮುಂದುವರೆಸಲು ಶ್ರಮಿಸಬೇಕು. ಸಾಕಷ್ಟು ಸಾಮರ್ಥ್ಯ ಹೊಂದಿರುವ ಗ್ರಾಮೀಣ ಪ್ರದೇಶದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಕೆಲಸವಾಗಬೇಕು ಎಂದರು.
    ಧಾರವಾಡ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕ ಡಾ. ವಿ.ಡಿ. ಬೋಳಿಶೆಟ್ಟಿ ಮಾತನಾಡಿ, ಬಾಹ್ಯಾಕಾಶ ವಿದ್ವಾಂಸರಿಂದ ಇದೊಂದು ಉತ್ತಮ ಉಪಕ್ರಮವಾಗಿದೆ. ನಾವು ದೊಡ್ಡ ಸಾಮರ್ಥ್ಯ ಹೊಂದಿದ್ದೇವೆ. ಬಾಹ್ಯಾಕಾಶದ ಕುರಿತು ಇನ್ನಷ್ಟು ಅನ್ವೇಷಣೆ ನಡೆಸಲು ಇದು ಸರಿಯಾದ ಸಮಯವಾಗಿದೆ ಎಂದರು.
    ಎಸ್.ಎಂ. ಹುಡೇದಮನಿ ಮಾತನಾಡಿದರು. ಜಿ.ಎನ್. ಮಠಪತಿ, ಶಿವಲೀಲಾ ಕಳಸಣ್ಣವರ, ಪ್ರಕಾಶ ಭೂತಾಳಿ, ಪೂರ್ಣಿಮಾ ಮುಕ್ಕುಂದಿ, ಸಂಜಯ ಮಾಳಿ, ಬಸವರಾಜ ದುಬ್ಬನಮರಡಿ, ಓಟಿಲಿ ಅನ್ಬುಕುಮಾರ, ಉಷಾ ಕುಲಕರ್ಣಿ, ಶ್ರೀದೇವಿ ರೂಗಿ, ವೀರೇಶ ಪಾಟೀಲ, ಪಾಂಡುರಂಗ ಅಂಜಲಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts