More

    ಹಳ್ಳಿ ಮೇಷ್ಟ್ರು 244 | ಕನ್ನಡದಲ್ಲಿ ಇಂಗ್ಲಿಷ್ ಕಲಿಯಿರಿ…

    ಅಲೆಗಳು ತೀರಕ್ಕೆ ಬಂದು ಬಂದು ಅಪ್ಪಳಿಸುತ್ತಿದ್ದವು.

    Waves were breaking against the shore.

    ಹೆಚ್ಚು ಕೂಲಿ ಪಡೆಯುವುದಕ್ಕಾಗಿ ಆತ ಬೆನ್ನು ಮುರಿದು ಕೆಲಸ ಮಾಡುತ್ತಾನೆ.

    Every day he breaks his back to earn maximum wages.

    ಈ ಬೂಟುಗಳು ಹೊಸದಿರುವುದರಿಂದ ಬಿಗಿ ಇರುತ್ತವೆ, ಸ್ವಲ್ಪ ಕಾಲ ಧರಿಸಿದ ನಂತರ ಸಡಿಲವಾಗಿ ಸರಿಯಾಗಿ ಒಪ್ಪುತ್ತವೆ.

    Of course, as these shoes are new, they’ll be a bit uncomfortable
    now; But they will be comfortable once you break them in.

    ಮಕ್ಕಳೆ, ನೆನಪಿಡಿ, ಯಾರೂ ನಮ್ಮ ಗುಂಪಿನಿಂದ ಬೇರಾಗಿ / ದೂರ ಹೋಗಬಾರದು, ಅದರಿಂದ ನಿಮ್ಮನ್ನು ಮತ್ತೆ ಹುಡುಕಲು ತುಂಬಾ ತೊಂದರೆಯಾಗುತ್ತದೆ.

    Children, remember, never break away from the group as it will cause number of problems to us in finding you.

    ಅವಳು ಅವನ ಹಿಡಿತದಿಂದ ತಪ್ಪಿಸಿಕೊಂಡು ಓಡಲು ಯತ್ನಿಸಿದಳು ಆದರೆ ಅವನು ಇನ್ನೂ ಗಟ್ಟಿಯಾಗಿ ಹಿಡಿದುಕೊಂಡ.

    She tried to break his grip and run away but he clasped her hand a bit more tightly.

    ಮೂವರು ಪಾಲುದಾರರು ಪಾಲುದಾರಿಕೆಯಿಂದ ಹೊರ ಹೋಗಿ ಹೊಸ ಸಂಸ್ಥೆಯನ್ನು ಆರಂಭಿಸಿದರು.

    3 of the partners broke away from the partnership and started a new firm.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts