More

    ಮಂಗನ ಹಿಂದೆ ಮರದಿಂದ ಮರಕ್ಕೆ ಜಿಗಿದ ಚಿರತೆ; ಐಎಫ್​ಎಸ್​ ಅಧಿಕಾರಿಯ ವಿಡಿಯೋ ವೈರಲ್

    ನವದೆಹಲಿ: ಚಿರತೆ ಮರದಿಂದ ಮರಕ್ಕೆ ಹಾರುವುದನ್ನು ನೀವು ಎಂದಾದರೂ ನೋಡಿದ್ದೀರಾ? ನಿಮಗೆ ಚಿರತೆಯ ಆಶ್ಚರ್ಯಕರ ಕೌಶಲ್ಯಗಳ ಬಗ್ಗೆ ತಿಳಿದಿಲ್ಲದಿದ್ದರೆ ನೀವು ಈ ವೀಡಿಯೊವನ್ನು ನೋಡಬೇಕು.

    ಈ ಚಿರತೆ ಕಥೆ ವಿಚಿತ್ರ ಆದರೂ ಸತ್ಯ!

    ಭಾರತೀಯ ಅರಣ್ಯ ಸೇವೆಯ ಅಧಿಕಾರಿ ಸುಸಂತ ನಂದಾ ಈ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಚಿರತೆ ಕೋತಿಯನ್ನು ಒಂದು ಮರದಿಂದ ಇನ್ನೊಂದು ಮರಕ್ಕೆ ಅಟ್ಟಿಸಿಕೊಂಡು ಹೋಗುವುದನ್ನು ಈ ವಿಡಿಯೋದಲ್ಲಿ ಕಾಣಬಹುದು. ಇದು ನಿಮಗೆ ನಿತ್ಯವೂ ನೋಡಲು ಸಿಗದ ದೃಶ್ಯವಾಗಿದೆ. ಈ ಕ್ಲಿಪ್​ಅನ್ನು ಟ್ವಿಟರ್‌ನಲ್ಲಿ ಹಂಚಿಕೊಳ್ಳಲಾಗಿದ್ದು ಸರಿಸುಮಾರು 2 ಲಕ್ಷ ವೀಕ್ಷಣೆಗಳನ್ನು ಪಡೆದಿದೆ.

    ಚಿರತೆಯಿಂದ ತಪ್ಪಿಸಿಕೊಳ್ಳಲು ಮಂಗಗಳು ಮರದಿಂದ ಮರಕ್ಕೆ ಜಿಗಿಯುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ, ಚಿರತೆ ನಂಬಲಾಗದಷ್ಟು ದೀರ್ಘವಾದ ಜಿಗಿತವನ್ನು ಮಾಡಿ ಮಂಗ ಒಂದನ್ನು ಹಿಡಿಯುವಲ್ಲಿ ಯಶಸ್ವಿಯಾಗಿದೆ.

    “ಚಿರತೆಗಳು ಅವಕಾಶವಾದಿಗಳು ಮಾತ್ರವಲ್ಲದೆ ಬಹು ಸಾಮರ್ಥ್ಯದ ಬೇಟೆಗಾರರು” ಎಂದು ವಿಡಿಯೋಗೆ ಶೀರ್ಷಿಕೆ ನೀಡಲಾಗಿದೆ.

    ಈ ವಿಡಿಯೋ ನೋಡಿದ ನೆಟಿಜನ್‌ಗಳು ಹಲವು ಪ್ರಶ್ನೆಗಳನ್ನು ಕೇಳಿದ್ದಾರೆ. “ಅವು ಅಷ್ಟು ಎತ್ತರದಿಂದ ಬಿದ್ದಾಗ ಗಾಯವಾಗುವುದಿಲ್ಲವೇ?” ಎಂದು ಆಂಧ್ರಪ್ರದೇಶ ಸರ್ಕಾರದ ಸಲಹೆಗಾರ ಎಸ್ ರಾಜೀವ್ ಕೃಷ್ಣ ಕೇಳಿದ್ದಾರೆ.

    ಅದಕ್ಕೆ ಒಬ್ಬರು “ಇವುಗಳ ದೇಹ ತುಂಬಾ ಫ್ಲೆಕ್ಸಿಬಲ್​. ಆದ್ದರಿಂದ ಅವುಗಳಿಗೆ ಹೆಚ್ಚಿನ ಗಾಯ ಆಗುವುದಿಲ್ಲ” ಎಂದು ವಿವರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts