More

    ಮನಸೂರಿನಲ್ಲಿ ಕಾಣಿಸಿಕೊಂಡ ಚಿರತೆ; ಆಕಳ ಕರುವನ್ನು ಅರೆಬರೆ ತಿಂದು ಪರಾರಿ

    ಧಾರವಾಡ: ನಗರದ ಕರ್ನಾಟಕ ವಿಶ್ವವಿದ್ಯಾಲಯದ ಹಿಂಭಾಗದಲ್ಲಿ ಇತ್ತೀಚೆಗೆ ಕಾಣಿಸಿಕೊಂಡಿದ್ದ ಚಿರತೆ, ತಾಲೂಕಿನ ಮನಸೂರ ಗ್ರಾಮದಲ್ಲಿ ಗುರುವಾರ ರಾತ್ರಿ ಮತ್ತೆ ಕಾಣಿಸಿಕೊಂಡಿದೆ. ಗ್ರಾಮ ಹೊರವಲಯದ ಜಮೀನಿನ ಶೆಡ್‌ಗೆ ನುಗ್ಗಿದ ಚಿರತೆ ಆಕಳ ಕರುವನ್ನು ಅರೆಬರೆ ತಿಂದು ಪರಾರಿಯಾಗಿದೆ.
    ಮನಸೂರ ಗ್ರಾಮದ ರೈತ ಕುಬೇರಪ್ಪ ಮಡಿವಾಳರ ತನ್ನ ಜಮೀನಿನ ಮನೆ ಬಳಿಯ ಬಣವೆಯ ಮೇಲೆ ಮಲಗಿದ್ದರು. ಶೆಡ್‌ನಲ್ಲಿ ಎತ್ತು ಹಾಗೂ ಆಕಳ ಕರು ಇದ್ದವು. ಅಲ್ಲಿಗೆ ನುಗ್ಗಿದ ಚಿರತೆ, ಆಕಳ ಕರುವಿನ ಮೇಲೆ ದಾಳಿ ಮಾಡಿದೆ. ಗಾಬರಿಗೊಂಡ ಕರುವಿನ ಧ್ವನಿ ಕೇಳಿದ ಕುಬೇರಪ್ಪ ಚಿರತೆಯನ್ನು ಕಂಡು ಬಣವೆ ಮೇಲಿಂದ ಜಿಗಿದು ಮನೆಯತ್ತ ಓಡಿದ್ದಾರೆ. ಹತ್ತಿರದಲ್ಲೇ ಮದುವೆ ಸಮಾರಂಭಕ್ಕೆ ರಾತ್ರಿಯೂಟ ಸಿದ್ಧಪಡಿಸುತ್ತಿದ್ದ ಜನರಿಗೆ ವಿಷಯ ತಿಳಿಸಿದ್ದಾರೆ.
    ಚಿರತೆ ಇರುವ ವಿಷಯ ತಿಳಿದ ಗ್ರಾಮಸ್ಥರು ರೈತನ ಶೆಡ್‌ನತ್ತ ಹೋಗಿ ನೋಡುವಷ್ಟರಲ್ಲಿ ಕಾಲ್ಕಿತ್ತಿದೆ. ಚಿರತೆ ದಾಳಿಯಿಂದ ತೀವ್ರ ಗಾಯಗೊಂಡಿದ್ದ ಆಕಳ ಕರು ಒದ್ದಾಡಿ ಪ್ರಾಣ ಬಿಟ್ಟಿದೆ.
    ಆರ್‌ಎಫ್‌ಒ ಪ್ರದೀಪ ಪವಾರ ಹಾಗೂ ಸಿಬ್ಬಂದಿ ಮತ್ತು ಗಸ್ತು ವನಪಾಲಕರು ಸ್ಥಳಕ್ಕೆ ತೆರಳಿ ಪರಿಶೀಲಿಸಿದ್ದಾರೆ. ರೈತನ ಹೇಳಿಕೆ ಹಾಗೂ ಕರುವಿನ ಗಾಯವನ್ನು ಪರಿಶೀಲಿಸಿ ಚಿರತೆ ಬಂದಿದ್ದನ್ನು ಖಚಿತಪಡಿಸಿದ್ದಾರೆ. ಸುತ್ತಲೂ ಹುಡುಕಾಡಿದರೂ ಚಿರತೆ ಪತ್ತೆಯಾಗಿಲ್ಲ. ಚಿರತೆಯನ್ನು ಸೆರೆ ಹಿಡಿಯಲು ಬೋನು ಇಡಲಾಗುವುದು ಎಂದು ಆರ್‌ಎಫ್‌ಒ ಪ್ರದೀಪ ಪವಾರ `ವಿಜಯವಾಣಿ’ಗೆ ಪ್ರತಿಕ್ರಿಯಿಸಿದ್ದಾರೆ.
    ರೈತನಿಗೆ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಅರಣ್ಯ ಇಲಾಖೆ ಅಽಕಾರಿಗಳಿಗೆ ಮನವಿ ಮಾಡಿದ್ದಾರೆ. ಮನಸೂರ ಹಾಗೂ ಸುತ್ತಲಿನ ಗ್ರಾಮಗಳ ಜನ ಕೆಲ ದಿನ ರಾತ್ರಿ ವೇಳೆ ಒಬ್ಬೊಬ್ಬರೇ ಸಂಚರಿಸಬಾರದು ಎಂದು ಅರಣ್ಯಾಽಕಾರಿಗಳು ಎಚ್ಚರಿಕೆ ನೀಡಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts