More

    ಪ್ರೊ ಕಬಡ್ಡಿ ಕಿರೀಟಕ್ಕೆ ಇಂದು ಪಟನಾ ಪೈರೇಟ್ಸ್-ದಬಾಂಗ್ ಡೆಲ್ಲಿ ಕಾದಾಟ

    ವಿಜಯವಾಣಿ ಸುದ್ದಿಜಾಲ ಬೆಂಗಳೂರು
    ಲೀಗ್ ಹಂತದಲ್ಲಿ ಮೊದಲೆರಡು ಸ್ಥಾನ ಪಡೆದಿದ್ದ ಪಟನಾ ಪೈರೇಟ್ಸ್ ಮತ್ತು ದಬಾಂಗ್ ದೆಹಲಿ ತಂಡಗಳು ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿಯಲ್ಲಿ ಶುಕ್ರವಾರ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಮುಖಾಮುಖಿ ಆಗಲಿವೆ. ಕರೊನಾ ವೈರಸ್ ಹಾವಳಿಯ ನಡುವೆಯೂ ಉದ್ಯಾನನಗರಿಯ ಖಾಸಗಿ ಹೋಟೆಲ್ ಆವರಣದ ಬಯೋಬಬಲ್‌ನಲ್ಲಿ ಯಶಸ್ವಿಯಾಗಿ ಟೂರ್ನಿ ಸಾಗಿದ್ದು, 136 ಪಂದ್ಯಗಳ ಬಳಿಕ ಇದೀಗ ಟೂರ್ನಿಯ 137ನೇ ಪಂದ್ಯದಲ್ಲಿ ಚಾಂಪಿಯನ್ ತಂಡದ ನಿರ್ಧಾರವಾಗಲಿದೆ. ಇದು ಟೂರ್ನಿ ಇತಿಹಾಸದಲ್ಲೇ ಅತ್ಯಂತ ಸ್ಪರ್ಧಾತ್ಮಕವೆನಿಸಿದ ಆವೃತ್ತಿಯಾಗಿದೆ.

    ಸೆಮೀಸ್‌ನಲ್ಲಿ ಪಟನಾ ತಂಡ ಯುಪಿ ಯೋಧಾ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ತಂಡ ಬೆಂಗಳೂರು ಬುಲ್ಸ್ ತಂಡದ ಸವಾಲು ಹಿಮ್ಮೆಟ್ಟಿಸಿತ್ತು. ಉಭಯ ತಂಡಗಳು ಟ್ಯಾಕಲ್‌ನಲ್ಲಿ ಅತ್ಯಂತ ಬಲಿಷ್ಠವಾಗಿರುವುದರಿಂದ ಪ್ರಶಸ್ತಿ ಸುತ್ತಿನ ಹಣಾಹಣಿ ಅತ್ಯಂತ ಕುತೂಹಲ ಕೆರಳಿಸಿದೆ. ಕನ್ನಡಿಗ ಪ್ರಶಾಂತ್ ಕುಮಾರ್ ರೈ ಸಾರಥ್ಯದ ಪಟನಾ ತಂಡ 4ನೇ ಬಾರಿ ಪ್ರಶಸ್ತಿ ಜಯಿಸುವ ಹಂಬಲದಲ್ಲಿದೆ. ಈ ಮುನ್ನ ಪ್ರದೀಪ್ ನರ್ವಾಲ್ ಅವರ ಬಲಿಷ್ಠ ರೈಡಿಂಗ್ ಬಲದಿಂದ 2016ರಲ್ಲಿ 2 ಬಾರಿ ಮತ್ತು 2017ರಲ್ಲಿ ಪ್ರಶಸ್ತಿ ಜಯಿಸಿತ್ತು. ಈ ಬಾರಿ ಪ್ರದೀಪ್ ನರ್ವಾಲ್ ಬೇರೆ ತಂಡದ ಪಾಲಾಗಿದ್ದರೂ, ಪಟನಾ ಹಿಂದಿನ ಲಯಕ್ಕೆ ಮರಳಿದೆ. ಕಳೆದ ವರ್ಷದ ೈನಲ್‌ನಲ್ಲಿ ಬೆಂಗಾಲ್ ವಾರಿಯರ್ಸ್‌ ಎದುರು ನಿರಾಸೆ ಅನುಭವಿಸಿದ್ದ ಡೆಲ್ಲಿ ಈ ಬಾರಿ ಚೊಚ್ಚಲ ಪ್ರಶಸ್ತಿ ಒಲಿಸಿಕೊಳ್ಳುವ ನಿರೀಕ್ಷೆಯಲ್ಲಿದೆ.

    ಲೀಗ್‌ನಲ್ಲಿ ಡೆಲ್ಲಿ ಮೇಲುಗೈ
    ಟೂರ್ನಿಯ ಲೀಗ್ ಹಂತದಲ್ಲಿ ಪಟನಾ ತಂಡ ಡೆಲ್ಲಿ ವಿರುದ್ಧದ ಎರಡೂ ಮುಖಾಮುಖಿಗಳಲ್ಲಿ ಸೋಲು ಕಂಡಿತ್ತು. ಸೆಮೀಸ್‌ನಲ್ಲಿ ಟೂರ್ನಿಯ ದುಬಾರಿ ಆಟಗಾರ ಪ್ರದೀಪ್ ನರ್ವಾಲ್‌ಗೆ ಕಡಿವಾಣ ಹಾಕಿ ಗೆದ್ದಂತೆ ಪಟನಾ ತಂಡ ಈ ಬಾರಿ ಡೆಲ್ಲಿ ತಂಡದ ಸ್ಟಾರ್ ರೈಡರ್ ನವೀನ್ ಕುಮಾರ್ ಅವನ್ನೂ ಟ್ಯಾಕಲ್ ಮಾಡುವುದು ನಿರ್ಣಾಯಕವಾಗಲಿದೆ. ಜೋಗಿಂದರ್ ನರ್ವಾಲ್ ನೇತೃತ್ವದ ಡೆಲ್ಲಿ ತಂಡಕ್ಕೂ ಪಟನಾ ತಂಡದ ಇರಾನ್ ಆಲ್ರೌಂಡರ್ ಮೊಹಮ್ಮದ್ರೆಜಾ ಚಿಯಾನೇ ಪ್ರಮುಖ ಸವಾಲಾಗಿದ್ದಾರೆ.

    ಪಂದ್ಯ ಆರಂಭ: ರಾತ್ರಿ 8.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

    3: ಚಾಂಪಿಯನ್ ತಂಡ 3 ಕೋಟಿ ರೂ. ಬಹುಮಾನ ಪಡೆಯಲಿದ್ದರೆ, ರನ್ನರ್‌ಅಪ್ ತಂಡ 1.8 ಕೋಟಿ ರೂ. ಗಳಿಸಲಿದೆ. ಸೆಮೀಸ್‌ನಲ್ಲಿ ಸೋತ ತಂಡಗಳು ತಲಾ 90 ಲಕ್ಷ ರೂ.ಗೆ ತೃಪ್ತಿಪಟ್ಟಿವೆ.

    ಏಷ್ಯನ್ ಗೇಮ್ಸ್ ಸಿದ್ಧತೆಗೆ ನೆರವು
    ಪ್ರೊ ಕಬಡ್ಡಿ ಲೀಗ್ 8ನೇ ಆವೃತ್ತಿ ಭಾರತದ ಆಟಗಾರರಿಗೆ ಮುಂಬರುವ ಏಷ್ಯನ್ ಗೇಮ್ಸ್ ಸಿದ್ಧತೆಗೆ ನೆರವಾಗಿದೆ ಎಂದು ಮಾಷಲ್ ಸ್ಪೋರ್ಟ್ಸ್ ಸಿಇಒ ಅನುಪಮ್ ಗೋಸ್ವಾಮಿ ಹೇಳಿದ್ದಾರೆ. ಕರೊನಾದಿಂದಾಗಿ ಕಳೆದ 2 ವರ್ಷಗಳಿಂದ ಕಬಡ್ಡಿ ಸ್ಪರ್ಧೆ ನಡೆದಿರಲಿಲ್ಲ. ಹೀಗಾಗಿ ಆ ಟೂರ್ನಿ ಆಟಗಾರರಿಗೆ ಲಯಕ್ಕೆ ಮರಳಲು ನೆರವಾಗಿದೆ ಎಂದಿದ್ದಾರೆ. ಏಷ್ಯಾಡ್ ಸೆಪ್ಟೆಂಬರ್ 1ರಿಂದ ಚೀನಾದಲ್ಲಿ ನಡೆಯಲಿದೆ.

    VIDEO: ಅಂಪೈರ್‌ಗೆ ರ‌್ಯಾಕೆಟ್‌ನಿಂದ ಹೊಡೆಯಲು ಯತ್ನಿಸಿದ ಟೆನಿಸ್ ಆಟಗಾರ, ಮುಂದೇನಾಯ್ತು?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts