More

    ಮೂರ್ನಾಡಿನಲ್ಲಿ ಭವ್ಯ ರಾಮಮಂದಿರ ನಿಮಾಣಕ್ಕೆ ಶಿಲಾನ್ಯಾಸ

    ಮಡಿಕೇರಿ: ಸುಮಾರು ೧೦೦ ವರ್ಷಗಳ ಇತಿಹಾಸ ಹೊಂದಿರುವ ಮೂರ್ನಾಡು ಪಟ್ಟಣದ ಶ್ರೀರಾಮಮಂದಿರವನ್ನು ಪುನರ್ ನಿರ್ಮಾಣ ಮಾಡಲಾಗುತ್ತಿದ್ದು, ನೂತನ ಭವ್ಯ ರಾಮಮಂದಿರ ನಿರ್ಮಾಣಕ್ಕೆ ಶನಿವಾರ ಶಿಲಾನ್ಯಾಸ ನೆರವೇರಿಸಲಾಯಿತು.


    ಮೊದಲ ಹಂತದಲ್ಲಿ ಸುಮಾರು ೧.೫೦ ಕೋಟಿ ರೂ. ವೆಚ್ಚದಲ್ಲಿ ರಾಮಮಂದಿರ ನಿರ್ಮಾಣಗೊಳ್ಳಲಿದೆ. ೨ನೇ ಹಂತದಲ್ಲಿ ಸಭಾ ಭವನ ಹಾಗೂ ೩ನೇ ಹಂತದಲ್ಲಿ ವಾಣಿಜ್ಯ ಸಂಕೀರ್ಣವನ್ನು ನಿರ್ಮಿಸಲಾಗುತ್ತದೆ. ಒಟ್ಟು ಯೋಜನಾ ವೆಚ್ಚ ೪ ಕೋಟಿ ರೂ. ಎಂದು ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ ತಿಳಿಸಿದೆ. ವಿಶ್ವ ಹಿಂದೂ ಪರಿಷತ್ ವತಿಯಿಂದ ಅಯೋಧ್ಯೆ, ತಲಕಾವೇರಿ, ಇರ್ಪುವಿನ ಮೃತ್ತಿಕೆ(ಮಣ್ಣು), ಕಾವೇರಿ, ಗಂಗಾ ಮತ್ತು ಕಾಶಿ ತೀರ್ಥವನ್ನು ಶಿಲಾನ್ಯಾಸದ ಸಂದರ್ಭ ಸಮರ್ಪಿಸಲಾಯಿತು.


    ಭೂಮಿಪೂಜೆ ಸಂದರ್ಭ ಮೂರ್ನಾಡು ಶ್ರೀರಾಮಮಂದಿರ ಟ್ರಸ್ಟ್, ಶ್ರೀರಾಮಮಂದಿರ ಜೀರ್ಣೋದ್ಧಾರ ಸಮಿತಿ, ವಿಶ್ವ ಹಿಂದೂ ಪರಿಷತ್, ಮೂರ್ನಾಡುವಿನ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಗ್ರಾಮಸ್ಥರು ಹಾಗೂ ಭಕ್ತರು ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts