More

    ಸಿನಿಕಾರ್ಮಿಕರಿಗೆ ನೆರವಾಗುವ ಮಾನವೀಯತೆ; ವೆಬ್​ ಮೂಲಕ ಸಿನಿಮಾ ಬಿಡುಗಡೆಗೆ ಮುಂದಾದ ಬಾಲಿವುಡ್​ ಮಂದಿ

    ನವದೆಹಲಿ: ಕೋವಿಡ್​ ಲಾಕ್​ಡೌನ್​ನಿಂದಾಗಿ ದೇಶದಾದ್ಯಂತ ಚಿತ್ರಮಂದಿರಗಳು, ಚಿತ್ರೀಕರಣ ಕಾರ್ಯಗಳು ಸೇರಿ ಸಿನಿ ಚಟುವಟಿಕೆ ಸಂಪೂರ್ಣವಾಗಿ ಸ್ತಬ್ಧಗೊಂಡಿದೆ. ಇದರಿಂದಾಗಿ ಒಪ್ಪತ್ತಿನ ಊಟಕ್ಕೂ ಚಿತ್ರರಂಗವನ್ನೇ ನೆಚ್ಚಿಕೊಂಡಿರುವ ಸಿನಿಕಾರ್ಮಿಕರು ಪರದಾಡುತ್ತಿದ್ದಾರೆ. ಇವರ ಸಂಕಷ್ಟವನ್ನು ಅರ್ಥ ಮಾಡಿಕೊಂಡಿದ್ದು, ಇವರಿಗೆ ನೆರವಾಗುವ ಉದ್ದೇಶದಿಂದ ಬಾಲಿವುಡ್​ ಮಂದಿ ತಮ್ಮ ಚಿತ್ರಗಳನ್ನು ವೆಬ್​ನಲ್ಲಿ ಬಿಡುಗಡೆ ಮಾಡಲು ಮುಂದಾಗುತ್ತಿದ್ದಾರೆ.

    ಲಾಕ್​ಡೌನ್​ ತೆರವಾದ ನಂತರದಲ್ಲೂ ತಕ್ಷಣವೇ ಚಿತ್ರಮಂದಿರಗಳು ತೆರೆಯುವ ಸಾಧ್ಯತೆ ಕಡಿಮೆ ಇದೆ. ಈ ಹಿನ್ನೆಲೆಯಲ್ಲಿ ಈಗಾಗಲೆ ಬಿಡುಗಡೆ ದಿನಾಂಕ ನಿಗದಿಪಡಿಸಿಕೊಂಡಿದ್ದರೂ ಚಿತ್ರಗಳನ್ನು ಬಿಡುಗಡೆ ಮಾಡಲು ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ವೆಬ್​ ಮೂಲಕವೇ ಚಿತ್ರವನ್ನು ಬಿಡುಗಡೆ ಮಾಡಿ, ಬರುವ ಹಣವನ್ನು ಸಿನಿಕಾರ್ಮಿಕರ ನೆರವಿಗೆ ಕೊಡುವುದು ಬಾಲಿವುಡ್​ ಮಂದಿಯ ನಿರ್ಧಾರ ಎನ್ನಲಾಗಿದೆ.

    ವೆಬ್​ನಲ್ಲಿ ಬಿಡುಗಡೆಗೊಂಡ ಮೊದಲ ಚಿತ್ರ ಎಂಬ ಹೆಗ್ಗಳಿಕೆ ಅಕ್ಷಯ್​ ಕುಮಾರ್​ ಮತ್ತು ಕಿಯಾರಾ ಅಡ್ವಾಣಿ ಮುಖ್ಯಭೂಮಿಕೆಯಲ್ಲಿರುವ ಲಕ್ಷ್ಮೀ ಬಾಂಬ್​ ಚಿತ್ರದ್ದಾಗುವ ಸಾಧ್ಯತೆ ಹೆಚ್ಚಾಗಿದೆ. ತಮಿಳಿನ ಮುನಿ2: ಕಾಂಚನಾ ಚಿತ್ರದ ರಿಮೇಕ್​ ಇದಾಗಿದೆ.

    ಎಲ್ಲ ಅಂದುಕೊಂಡಂತೆ ಆಗಿದ್ದರೆ ಈ ಚಿತ್ರ ಮೇ 22ರಂದು ದೇಶಾದ್ಯಂತ ಬಿಡುಗಡೆಯಾಗಬೇಕಿತ್ತು. ಆದರೆ ಲಾಕ್​ಡೌನ್​ ಹಾಗೂ ಲಾಕ್​ಡೌನ್​ ತೆರವು ನಂತರದಲ್ಲಿ ಚಿತ್ರಮಂದಿರಗಳು ತಕ್ಷಣವೇ ತೆರೆಯುವ ಸಾಧ್ಯತೆಗಳಿಲ್ಲದ ಕಾರಣ, ವೆಬ್​ನಲ್ಲೇ ಈ ಚಿತ್ರವನ್ನು ಬಿಡುಗಡೆ ಮಾಡಲು ಚಿತ್ರದ ನಿರ್ಮಾಪಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಈ ಚಿತ್ರವೇನಾದರೂ ವೆಬ್​ ಬಿಡುಗಡೆಯಲ್ಲಿ ಭಾರಿ ಯಶಸ್ಸು ದಾಖಲಿಸಿದರೆ, ಇನ್ನೂ ಹಲವು ಚಿತ್ರಗಳು ವೆಬ್​ನಲ್ಲೇ ಬಿಡುಗಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

    ಅಜ್ಜಿಯ ಬೇಸರ ನೀಗಿಸಲು ಡಾನ್ಸ್​ ಮಾಡಿದ ಮೊಮ್ಮಗ, ಟಿಕ್​ಟಾಕ್​ನಲ್ಲಿ ಭಾರಿ ವೈರಲ್​; ಇದನ್ನು ವೀಕ್ಷಿಸಿದವರ ಸಂಖ್ಯೆ ಎಷ್ಟು ಗೊತ್ತಾ?

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts