More

    ಆತಂಕ ತಂದ ಗುಲಾಬಿ ನೇತ್ರ

    ಲಕ್ಷ್ಮೇಶ್ವರ: ವಾರದಿಂದ ಸುರಿಯುತ್ತಿರುವ ಜಿಟಿಜಿಟಿ ಮಳೆ, ಶೀತಗಾಳಿಗೆ ಜನರು ನೆಗಡಿ, ಜ್ವರ, ತಲೆನೋವಿನ ಸಮಸ್ಯೆಗಳಿಗೆ ತುತ್ತಾಗುತ್ತಿದ್ದಾರೆ. ಇದರ ಜತೆಗೆ ಈಗ ಗುಲಾಬಿ ಕಣ್ಣಿನ ಸಮಸ್ಯೆ (ಕಾಂಜೆಕ್ಟಿವಿಟಿ) ಸೋಂಕಿತರ ಸಂಖ್ಯೆ ಪಟ್ಟಣದಲ್ಲಿ ಹೆಚ್ಚುತ್ತಿದೆ.
    ಪಟ್ಟಣ ಹಾಗೂ ಸುತ್ತಲಿನ ಗ್ರಾಮಗಳಲ್ಲಿ 5-6 ದಿನಗಳಿಂದ ಕಣ್ಣಿನ ಸೋಂಕಿನ ಪ್ರಕರಣಗಳು ಕಂಡುಬರುತ್ತಿದೆ. ವೈದ್ಯರಲ್ಲಿ ಚಿಕಿತ್ಸೆ ಪಡೆಯಲು ಬರುತ್ತಿದ್ದಾರೆ.
    ಯುವಕರಲ್ಲಿ ಹೆಚ್ಚು: ವಿದ್ಯಾರ್ಥಿಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುತ್ತಿದ್ದು, ಸೋಂಕು ಬೇರೆ ವಿದ್ಯಾರ್ಥಿಗಳಿಗೆ ಹರಡಬಾರದು ಎಂದು ಬಾಧಿತರಿಗೆ ರಜೆ ನೀಡಲಾಗುತ್ತಿದೆ. ಪಟ್ಟಣವಷ್ಟೇ ಅಲ್ಲದೇ ಗ್ರಾಮೀಣ ಭಾಗದಲ್ಲೂ ಕಾಣಿಸಿಕೊಳ್ಳುತ್ತಿದೆ. ಲಕ್ಷ್ಮೇಶ್ವರದ ಸಮುದಾಯ ಆರೋಗ್ಯ ಕೇಂದ್ರದ ಹಿರಿಯ ಆರೋಗ್ಯ ಸಹಾಯಕ ಬಿ.ಎಸ್. ಹಿರೇಮಠ, ಸೋಂಕು ಕಂಡು ಬಂದಿರುವ ವಾರ್ಡ್ ಮತ್ತು ಶಾಲೆಗಳಿಗೆ ಭೇಟಿ ನೀಡಿ ಸಲಹೆ, ಸೂಚನೆಗಳನ್ನು ನೀಡುತ್ತಿದ್ದಾರೆ.
    ಲಕ್ಷಣಗಳು ಏನು?: ಕಣ್ಣಿನಲ್ಲಿ ಅಲರ್ಜಿ, ಕೆಂಪಾಗುವಿಕೆ, ಊತ, ಪಿಸುರು, ದೃಷ್ಟಿ ಮಂಜಾಗುವಿಕೆೆ. ಈ ಸಮಸ್ಯೆಯು ಒಬ್ಬರಿಂದ ಬೇರೆಯವರಿಗೆ ಹರಡುತ್ತದೆ. ಇದು ಶಮನವಾಗಲು ಸಾಮಾನ್ಯವಾಗಿ 5ರಿಂದ 7 ದಿನಗಳು ಬೇಕು.


    ಕಣ್ಣನ್ನು ಪದೇಪದೆ ಉಜ್ಜಿಕೊಳ್ಳಬಾರದು. ಶುದ್ಧ ನೀರಿನಿಂದ ನೇತ್ರಗಳನ್ನು ಸ್ವಚ್ಛಗೊಳಿಸಬೇಕು. ಸೋಂಕಿತರು ಶುಭ್ರ ಬಟ್ಟೆ ಬಳಕೆ ಮಾಡುವ ಮೂಲಕ ಸೋಂಕು ಹರಡದಂತೆ ಎಚ್ಚರಿಕೆ ವಹಿಸಬೇಕು. ಕನ್ನಡಕ ಧರಿಸುವುದು, ಕಣ್ಣಿನ ಸುರಕ್ಷತೆ, ನೈರ್ಮಲ್ಯವನ್ನು ಅನುಸರಿಸುವ ಮೂಲಕ ಸಮಸ್ಯೆ ತಡೆಗಟ್ಟಬಹುದು. ಅದಕ್ಕಾಗಿ ವೈದ್ಯರನ್ನು ಸಂಪರ್ಕಿಸಿ ಔಷಧೋಪಚಾರ ಮಾಡಿಸಿಕೊಳ್ಳಬೇಕು. ಕಾಯಿಲೆ ಗುಣವಾಗುವವರೆಗೆ ಹೊರಗೆ ತಿರುಗಾಡುವುದು ಕಡಿಮೆ ಮಾಡಬೇಕು.
    ಡಾ. ಶ್ರೀಕಾಂತ ಕಾಟೇವಾಲೆ
    ವೈದ್ಯಾಧಿಕಾರಿ, ಲಕ್ಷ್ಮೇಶ್ವರ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts