More

    ಎನ್‌ಸಿಎಗೀಗ ಹೊಸ ಮೇಷ್ಟ್ರು, ಅಧಿಕಾರ ಸ್ವೀಕರಿಸಿದ ವಿವಿಎಸ್

    ಬೆಂಗಳೂರು: ಭಾರತ ತಂಡದ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್, ಸೋಮವಾರ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ (ಎನ್‌ಸಿಎ) ಮುಖ್ಯಸ್ಥರಾಗಿ ಅಧಿಕಾರ ವಹಿಸಿಕೊಂಡರು. 47 ವರ್ಷದ ವಿವಿಎಸ್ ಲಕ್ಷ್ಮಣ್ ಅವರನ್ನು ರಾಹುಲ್ ದ್ರಾವಿಡ್ ಅವರ ಉತ್ತರಾಧಿಕಾರಿಯಾಗಿ ಎನ್‌ಸಿಎ ನಿರ್ದೇಶಕ ಸ್ಥಾನಕ್ಕೆ ಬಿಸಿಸಿಐ ಎಜಿಎಂನಲ್ಲಿ ನೇಮಿಸಲಾಗಿತ್ತು. ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆದ ಹಿನ್ನೆಲೆಯಲ್ಲಿ ಈ ಹುದ್ದೆಗೆ ಖುದ್ದು ಬಿಸಿಸಿಐ ಮುಖ್ಯಸ್ಥ ಸೌರವ್ ಗಂಗೂಲಿ ಅವರೇ ವಿವಿಎಸ್ ಲಕ್ಷ್ಮಣ್ ಅವರನ್ನು ಆಯ್ಕೆ ಮಾಡಿದ್ದರು.

    ‘ಮೊದಲ ದಿನ ಕಚೇರಿಯಲ್ಲಿ ಕಾಲಕಳೆದೆ, ಹೊಸ ಸವಾಲಿಗೆ ಸಿದ್ಧವಾಗಿದ್ದು, ಭವಿಷ್ಯದ ಭಾರತ ಕ್ರಿಕೆಟ್‌ಗೆ ಯೋಜನೆ ರೂಪಿಸುವುದೇ ನನ್ನ ಉದ್ದೇಶ’ ಎಂದು ಲಕ್ಷ್ಮಣ್ ಟ್ವೀಟಿಸಿದ್ದಾರೆ. ಇದಕ್ಕೂ ಮೊದಲು ಲಕ್ಷ್ಮಣ್ ಐಪಿಎಲ್ ಫ್ರಾಂಚೈಸಿ ಸನ್‌ರೈಸರ್ಸ್‌ ಹೈದರಾಬಾದ್‌ಗೆ ಮೆಂಟರ್ ಆಗಿದ್ದರು. ಅಲ್ಲದೆ, ಬಂಗಾಳ ರಾಜ್ಯ ತಂಡದ ಬ್ಯಾಟಿಂಗ್ ಸಲಹೆಗಾರರಾಗಿ ಆರು ವರ್ಷಗಳ ಕಾಲ ಕಾರ್ಯನಿರ್ವಹಿಸಿದ್ದಾರೆ.

    ಅಲ್ಲದೆ, ‘ವಿಷನ್ 2020’ ಕಾರ್ಯಕ್ರಮ ರೂಪಿಸಿದ್ದರು. ಜತೆಗೆ ವೀಕ್ಷಕ ವಿವರಣೆಗಾರರಾಗಿಯೂ ಲಕ್ಷ್ಮಣ್ ಗಮನಸೆಳೆದಿದ್ದಾರೆ. ಲಕ್ಷ್ಮಣ್ ಜತೆಗೆ ಅವರ ಪತ್ನಿ ಮತ್ತು ಮಕ್ಕಳು ಕೂಡ ಬೆಂಗಳೂರಿಗೆ ಸ್ಥಳಾಂತರಗೊಂಡಿದ್ದಾರೆ. ರಾಹುಲ್ ದ್ರಾವಿಡ್ ರಾಷ್ಟ್ರೀಯ ತಂಡದ ಕೋಚ್ ಆಯ್ಕೆಯಾಗುತ್ತಿದ್ದಂತೆ, ಎನ್‌ಸಿಎ ಮುಖ್ಯಸ್ಥ ಹುದ್ದೆಗೆ ಲಕ್ಷ್ಮಣ್ ಹೆಸರೇ ಮೊದಲಿಗೆ ಕೇಳಿ ಬಂದಿತ್ತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts