More

    ಸಾರಿಗೆ ಸಿಬ್ಬಂದಿಯ 2 ತಿಂಗಳ ವೇತನ ಬಿಡುಗಡೆಗೆ ಸಿಎಂ ಒಪ್ಪಿಗೆ: ಟಿಕೆಟ್ ದರ ಹೆಚ್ಚಳ ಬಗ್ಗೆ ಸಚಿವರು ಹೇಳಿದ್ದೇನು?

    ಬೆಂಗಳೂರು: ಸಾರಿಗೆ ಸಿಬ್ಬಂದಿ ವೇತನ ಬಿಡುಗಡೆಗೆ ಮುಖ್ಯಮಂತ್ರಿ ಬಿ.ಎಸ್​. ಯಡಿಯೂರಪ್ಪ ಅವರು ಸೂಚಿಸಿದ್ದಾರೆಂದು ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ತಿಳಿಸಿದರು.

    ಸಿಎಂ ಬಿಎಸ್​ವೈ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ನಾಲ್ಕು ಸಾರಿಗೆ ನಿಗಮಗಳ ಅಧ್ಯಕ್ಷರ ಜತೆ ಸಿಬ್ಬಂದಿ ವೇತನ ಕುರಿತಾಗಿ ಸಿಎಂ ಭೇಟಿ ಮಾಡಿ ಚರ್ಚಿಸಿದ್ದೇನೆ. 234 ಕೋಟಿ ರೂ. ಕೊಡಲು ಸಿಎಂ ಒಪ್ಪಿಗೆ ನೀಡಿದ್ದು, ತಕ್ಷಣ ಎರಡು ತಿಂಗಳ ವೇತನ ಬಿಡುಗಡೆಗೆ ಸಿಎಂ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಡಿಸೆಂಬರ್ ತಿಂಗಳ ವೇತನ ನಂತರ ಬಿಡುಗಡೆ ಮಾಡುವುದಾಗಿ ಹೇಳಿದ್ದಾರೆ ಎಂದರು.

    ಇದನ್ನೂ ಓದಿ: ತನ್ನ ಮೊಮ್ಮಗಳಿಗೆ ತಾನೇ ಜನ್ಮ ನೀಡಿದ 51 ವರ್ಷದ ಮಹಿಳೆ: ವಿರಳ ಘಟನೆ ಹಿಂದಿದೆ ಮನಕಲಕುವ ಕತೆ!

    ಸದ್ಯ ಏನೂ ಚರ್ಚೆ ಆಗಿಲ್ಲ
    ಇದೇ ವೇಳೆ ಟಿಕೆಟ್ ದರ ಹೆಚ್ಚಳ ಕುರಿತು ಮಾತನಾಡಿದ ಅವರು ಸದ್ಯ ಏನೂ ಚರ್ಚೆ ಆಗಿಲ್ಲ. ಹೆಚ್ಚಳದ ಪ್ರಸ್ತಾಪ ಸದ್ಯ ನಮ್ಮ ಮುಂದೆ ಇಲ್ಲ ಎಂದು ಲಕ್ಷ್ಮಣ್ ಸವದಿ ಸ್ಪಷ್ಟನೆ ನೀಡಿದರು.

    ನೌಕರರಿಗೆ ವೇತನ ನೀಡಿಲ್ಲ
    ಬಿಎಂಟಿಸಿ ಅಧ್ಯಕ್ಷ ನಂದೀಶ್ ರೆಡ್ಡಿ ಮಾತನಾಡಿ, ಕಾವೇರಿ ನಿವಾಸದಲ್ಲಿ ಸಿಎಂ ಜತೆ ಚರ್ಚಿಸಿದ್ದೇವೆ. ಕಳೆದ ಕೆಲ ತಿಂಗಳಿಂದ ಸಾರಿಗೆ ನೌಕರರಿಗೆ ವೇತನ ನೀಡಿಲ್ಲ. ಸರ್ಕಾರದಿಂದ 400.50 ಕೋಟಿ ರೂ. ಅನುದಾನ ಕೇಳಲಾಗಿದೆ. ಕರೊನಾ ಸಂಕಷ್ಟದಿಂದಾಗಿ ಸಾರಿಗೆ ಇಲಾಖೆ ಆದಾಯ‌ಕ್ಕೆ ಹೊಡೆತ ಬಿದ್ದಿದೆ. ಹೀಗಾಗಿ ಸಿಬ್ಬಂದಿಗೆ ವೇತನ ಕೊಡಲಾಗದ ಸ್ಥಿತಿಯಲ್ಲಿ ಸಾರಿಗೆ ಇಲಾಖೆ ಇದೆ ಎಂದರು. (ದಿಗ್ವಿಜಯ ನ್ಯೂಸ್​)

    ಇದನ್ನೂ ಓದಿ: VIDEO| ಗಾಳಿಯ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವಿರಮ್ಮ: ಚಿಕ್ಕಮಗಳೂರಿನಲ್ಲಿ ಪವಾಡ!

    VIDEO| ಪೂಜೆ ಮಾಡುತ್ತಿರುವಾಗಲೇ ಪ್ರಾಣ ಬಿಟ್ಟ ಕಾಂಗ್ರೆಸ್ ಮಾಜಿ ​ಶಾಸಕ: ಸಿಸಿಟಿವಿಯಲ್ಲಿ ದೃಶ್ಯ ಸೆರೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts