More

    VIDEO| ಗಾಳಿಯ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವಿರಮ್ಮ: ಚಿಕ್ಕಮಗಳೂರಿನಲ್ಲಿ ಪವಾಡ!

    ಚಿಕ್ಕಮಗಳೂರು: ಕಾಫಿ ನಾಡಿನ ಆದಿಶಕ್ತಿ ದೇವಿರಮ್ಮನ ದೇವಾಲಯವೂ ಪವಾಡಕ್ಕೆ ಸಾಕ್ಷಿಯಾಗಿದೆ. ಏಳುಗಿರಿ, ಎಪ್ಪತ್ತು ಗಿರಿ, ದೇವಿರಮ್ಮನ ಪಾದಕ್ಕೆ ಉಘೇ ಉಘೇ ಎಂದು ಭಕ್ತರು ಹೇಳುತ್ತಿದ್ದಂತೆ ಗಾಳಿಯ ರೂಪದಲ್ಲಿ ಪರದೆಯನ್ನು ದಾಟಿ ದೇವಿರಮ್ಮ ದೇವಸ್ಥಾನ ಪ್ರವೇಶಿಸಿದಳು.

    VIDEO| ಗಾಳಿಯ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವಿರಮ್ಮ: ಚಿಕ್ಕಮಗಳೂರಿನಲ್ಲಿ ಪವಾಡ!

    ಸಮುದ್ರ ಮಟ್ಟದಿಂದ ನಾಲ್ಕು ಸಾವಿರ ಅಡಿ ಎತ್ತರದ ಬೆಟ್ಟದಲ್ಲಿ ಮಲ್ಲೇನಹಳ್ಳಿ ಗ್ರಾಮಸ್ಥರಿಗಷ್ಟೆ ನರಕಚರ್ತುದಶಿಯ ಎರಡನೇ ದಿನದಂದು ದೇವಿರಮ್ಮನ ದರ್ಶನ ಭಾಗ್ಯ ಸಿಕ್ಕಿತ್ತು. ಭಾನುವಾರ ಮುಂಜಾನೆ ಮೂರು ಗಂಟೆಯಿಂದಲೂ ದೇವಾಲಯದಲ್ಲಿ ದೇವಿರಮ್ಮನಿಗೆ ವಿಶೇಷ ಅಲಂಕಾರಗೊಳಿಸಿ ಗರ್ಭಗುಡಿಯ ಮುಂಭಾಗಕ್ಕೆ ಪರದೇ ಹಾಕಲಾಗಿತ್ತು. ಏಳುಗಿರಿ, ಎಪ್ಪತ್ತು ಗಿರಿ, ದೇವಿರಮ್ಮನ ಪಾದಕ್ಕೆ ಉಘೇ ಉಘೇ ಎನ್ನುತ್ತಿದ್ದಂತೆ ಗಾಳಿಯ ರೂಪದಲ್ಲಿ ಪರದೆಯನ್ನು ದಾಟಿ ದೇವಿರಮ್ಮ ದೇವಸ್ಥಾನ ಪ್ರವೇಶಿಸಿದಳು.

    ಇದನ್ನೂ ಓದಿ: ರಜೆ ಇಲ್ಲದೆ ಬಸವಳಿದ ಖಾಕಿ: ಪೊಲೀಸರ ತೀವ್ರ ಅಸಮಾಧಾನ, ಅಧಿಕಾರಿಗಳ ಸಮರ್ಥನೆ ಹೀಗಿದೆ…

    ಪ್ರತಿವರ್ಷ ಗ್ರಾಮಸ್ಥರು ಸೇರಿ ಚಿಕ್ಕಮಗಳೂರಿನ ಭಕ್ತರು ದೇವಿರಮ್ಮ ದೇವಾಲಯ ಪ್ರವೇಶಿಸುವ ಕ್ಷಣಕ್ಕೆ ಸಾಕ್ಷೀಯಾಗುತ್ತಿದ್ದರು. ಆದರೆ, ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಸಂಪ್ರದಾಯಕ್ಕೆ ಧಕ್ಕೆಯಾಗದಂತೆ, ಸರ್ಕಾರದ ನಿಯಮಗೂ ಅಡ್ಡಿಯಾಗದಂತೆ ಪೂಜಾ ಕೈಂಕರ್ಯ ನಡೆಸಲಾಯಿತು. ದೇವಸ್ಥಾನ ಅಡಳಿತ ಮಂಡಳಿ ಹಾಗೂ ಕೆಲವೇ ಕೆಲವು ಸ್ಥಳೀಯರು ಮಾತ್ರ ಭಾಗಿಯಾದ್ದರು.

    VIDEO| ಗಾಳಿಯ ರೂಪದಲ್ಲಿ ದೇವಸ್ಥಾನ ಪ್ರವೇಶಿಸಿದ ದೇವಿರಮ್ಮ: ಚಿಕ್ಕಮಗಳೂರಿನಲ್ಲಿ ಪವಾಡ!

    ವರ್ಷಪೂರ್ತಿ ಬೆಟ್ಟವನ್ನೇರಿ ದೇವಿರಮ್ಮ ದರ್ಶನ ಪಡೆಯೋಕೆ ಕಷ್ಟ ಆಗಿರುವುದರಿಂದ ವರ್ಷಕ್ಕೊಮ್ಮೆ ಬೆಟ್ಟದ ಮೇಲೆ ಭಕ್ತರಿಗೆ ದರ್ಶನ ಭಾಗ್ಯ ಕಲ್ಪಿಸಿ ಇನ್ನುಳಿದ 364 ದಿನ ಮಲ್ಲೇನಹಳ್ಳಿಯ ಬಿಂಡಿಗ ದೇವಿರಮ್ಮ ದೇವಾಲಯದಲ್ಲಿಯೇ ಭಕ್ತರಿಗೆ ಸಂಕಷ್ಟ ನಿವಾಸಿರೋಕೆ ಬಂದು ನೆಲೆಸ್ತಾಳೆ ಅನ್ನೋ ನಂಬಿಕೆ ಭಕ್ತರದ್ದು. ಅದರಂತೆ ವಾರ್ಷಿಕ ಜಾತ್ರಾಮಹೋತ್ಸವದ ಎರಡನೇ ದಿನವಾದ ಇಂದು ಗಾಳಿಯ ರೂಪದಲ್ಲಿ ದೇವಿರಮ್ಮ ಬೆಟ್ಟದಿಂದ ಇಳಿದು ಬಂದಳು ಎಂದು ನಂಬಲಾಗಿದೆ. (ದಿಗ್ವಿಜಯ ನ್ಯೂಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts