More

    ಪೌರಕಾರ್ಮಿಕರಿಗೆ ಪುಷ್ಪವೃಷ್ಠಿಯಿಂದ ಗೌರವ

    ಯಾದಗಿರಿ: ದೇಶಕ್ಕೆ ಬೆಂಬಿಡದೆ ಕಾಡುತ್ತಿರುವ ಕರೊನಾ ವೈರಸ್ ನಿಯಂತ್ರಣಕ್ಕಾಗಿ ಹಗಲಿರುಳು ಶ್ರಮಿಸುತ್ತಿರುವ ಪೌರ ಕಾರ್ಮಿಕರಿಗೆ ಮಂಗಳವಾರ ನಗರದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ತಾಲೂಕು ವೀರಶೈವ ಮಹಾ ಸಭಾದಿಂದ ಪುಷ್ಪವೃಷ್ಠಿಯ ಮೂಲಕ ಗೌರವ ಸಲ್ಲಿಸಲಾಯಿತು.

    ನಗರದ ಸರ್ಕಾರಿ ಪದವಿಪೂರ್ವ ಮಹಾವಿದ್ಯಾಲಯದ ಮೈದಾನದಲ್ಲಿ ಪೌರಕಾರ್ಮಿಕರಿಗೆ ಸೀರೆ, ಮಾಸ್ಕ್, ಸ್ಯಾನಿಟೈಜರ್ ನೀಡಿ ಶಾಲು ಹೊದಿಸಿ ಸನ್ಮಾನಿಸಿದ ಶಾಸಕ ವೆಂಕಟರಡ್ಡಿ ಮುದ್ನಾಳ್, ದೇಶ ಸಧ್ಯ ಆಪತ್ತಿನ ಕಾಲದಲ್ಲಿದ್ದು, ನಾಗರಿಕರು ಮನೆಯಲ್ಲಿದ್ದಾರೆ. ಆದರೆ ಪೌರ ಕಾರ್ಮಿಕರು ಪ್ರತಿನಿತ್ಯ ಬೆಳಗಿನ ಜಾವ ನಗರವನ್ನು ಸ್ವಚ್ಛ ಮಾಡುವ ಮಹತ್ತರ ಕಾರ್ಯ ಮಾಡುತ್ತಿದ್ದಾರೆ ಎಂದು ಶ್ಲಾಘಿಸಿದರು.

    ಕೊರನಾ ವೈರಸ್ ನಿಯಂತ್ರಣಕ್ಕೆ ವೈದ್ಯರು, ವೈದ್ಯಕೀಯ ಸಿಬ್ಬಂದಿ, ಪೊಲೀಸರು ಮತ್ತು ಪೌರ ಕಾರ್ಮಿಕರು ತಮ್ಮ ಮನೆ, ವೈಯಕ್ತಿಕ ಜೀವನ ಮುಡಿಪಾಗಿಟ್ಟು ಸೇವೆ ಮಾಡುತ್ತಿದ್ದಾರೆ. ಕೇಂದ್ರ ಸಕರ್ಾರ 14 ದಿನಗಳ ಲಾಕ್ಡೌನ್ ಘೋಷಣೆ ಮಾಡಿದ್ದು, ವೈರಸ್ ಸಂಪೂರ್ಣ ನಿಯಂತ್ರಣಕ್ಕೆ ಬರುವವರೆಗೂ ವಿನಾಃಕಾರಣ ಯಾರೂ ಮನೆಯಿಂದ ಹೊರಗಡೆ ಬರಕೂಡದು ಎಂದು ಸಲಹೆ ನೀಡಿದರು.

    ಪ್ರತಿಯೊಬ್ಬರು ಕಡ್ಡಾಯವಾಗಿ ಮಾಸ್ಕ್ ಧರಿಸಿಕೊಳ್ಳಬೇಕು. ಅಗತ್ಯ ವಸ್ತುಗಳ ಖರೀದಿಗೆ ಮನೆಯಿಂದ ಓರ್ವ ಆರೋಗ್ಯ ವ್ಯಕ್ತಿ ಮಾತ್ರ ಹೊರಗಡೆ ಬರಬೇಕು. ಈಗಾಗಲೇ ಜಿಲ್ಲಾದ್ಯಂತ ನಿಷಾಧಾಜ್ಞೆ ಜಾರಿಗೊಳಿಸಿದೆ. ಅದನ್ನು ಪ್ರತಿಯೊಬ್ಬರೂ ಚಾಚೂ ತಪ್ಪದೆ ಪಾಲಿಸಬೇಕು ಒಂದು ವೇಳೆ ಸಕರ್ಾರದ ಆದೇಶ ಉಲ್ಲಂಘನೆ ಮಾಡಿದರೆ ಅಂಥವರ ಮೇಲೆ ಅನಿವಾರ್ಯ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಕೆ ಸಹ ನೀಡಿದರು.

    ಪೌರಾಯುಕ್ತ ರಮೇಶ ಸುಣಗಾರ ಸಿಬ್ಬಂದಿವರ್ಗ, ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಸಿದ್ದಪ್ಪ ಹೊಟ್ಟಿ, ನಗರ ವೀರಶೈವ ಸಮಾಜ ಅಧ್ಯಕ್ಷ ಅಯ್ಯಣ್ಣ ಹುಂಡೇಕಾರ್, ಡಾ. ಸುಭಾಶ್ಚಂದ್ರ ಕೌಲಗಿ, ಸುಭಾಷ ಆಯಾರಕರ್, ಬಸವರಾಜ ಮೋಟ್ನಳ್ಳಿ, ಡಾ. ಭೀಮರಾಯ ಲಿಂಗೇರಿ, ಡಾ. ಎಸ್.ಎಸ್. ನಾಯಕ, ನಗರಸಭೆ ಸದಸ್ಯರಾದ ಹಣಮಂತ ಇಟಗಿ, ವಿಲಾಸ ಪಾಟೀಲ, ಸ್ವಾಮಿದೇವ ದಾಸನಕೇರಿ, ಮಾರುತಿ ಕಲಾಲ್, ಖಂಡಪ್ಪ ದಾಸನ್, ಭೀಮಣ್ಣಗೌಡ ಕ್ಯಾತನಾಳ, ಶರಣಗೌಡ ಬಾಡಿಯಾಲ, ಬಸಣ್ಣ ಗೌಡ ಕನ್ಯೆಕೌಳೂರು, ನಾಗೇಂದ್ರ ಜಾಜಿ, ದೇವಿಂದ್ರ ಸೇಡಂಕರ್, ಬಸವರಾಜ ದೇವದುರ್ಗ, ಮಲ್ಲಪ್ಪ ಹಳ್ಳಿಕಟ್ಟಿ ಇನ್ನಿತರರು ಇದ್ದರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts