More

    ಹೆಂಡತಿಯನ್ನು 11 ವರ್ಷ ಮನೆಯಲ್ಲಿ ಕೂಡಿ ಹಾಕಿದ ಲಾಯರ್!

    ಆಂಧ್ರಪ್ರದೇಶ: ಮಹಿಳೆಯೊಬ್ಬಳನ್ನು ಆಕೆಯ ಗಂಡ ಮತ್ತು ಅತ್ತೆ ಬರೋಬ್ಬರಿ 11 ವರ್ಷಗಳ ಕಾಲ ಕೋಣೆಯೊಂದರಲ್ಲಿ ಅತ್ತೆ ಕೂಡಿ ಹಾಕಿದ್ದ ಅಮಾನವೀಯ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ವಿಜಯನಗರದ ಮನೆಯೊಂದರಲ್ಲಿ ಬಂಧನವಾಗಿದ್ದ 35 ವರ್ಷದ ಸುಪ್ರಿಯಾ ಎಂಬ ಮಹಿಳೆಯನ್ನು ಸದ್ಯ ಪೊಲೀಸರು ಬಿಡುಗಡೆ ಮಾಡಿ ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.

    ಸಂತ್ರಸ್ತೆ ಸುಪ್ರಿಯಾಳನ್ನು ಆಕೆಯ ಪತಿ ವಕೀಲನಾಗಿರುವ ಮಧುಸೂದನ್ ಹಾಗೂ ಅತ್ತೆ, ಮನೆಯ ಕೋಣೆಯಲ್ಲಿ ಬೀಗ ಹಾಕಿ ಇರಿಸಿದ್ದರು ಎನ್ನಲಾಗಿದೆ. ಮಗಳನ್ನು ಮನೆಯಿಂದ ಹೊರಗೆ ಕಳುಹಿಸದೇ ಇರುವ ಕಾರಣದಿಂದ ಸುಪ್ರಿಯಾಳ ಪಾಲಕರು ನ್ಯಾಯಾಲಯದ ಮೊರೆ ಹೋಗಿದ್ದರು. ಇದೀಗ ನ್ಯಾಯಾಲಯದ ಆದೇಶದಂತೆ ಪೊಲೀಸರ ಸಹಕಾರದೊಂದಿಗೆ ಸುಪ್ರಿಯಾಳನ್ನು ಕೊಠಡಿಯಿಂದ ಬಿಡುಗಡೆ ಮಾಡಲಾಗಿದೆ.

    ಅನಂತಪುರ ಜಿಲ್ಲೆಯಲ್ಲಿ ಸುಪ್ರಿಯಾ, 2008ರಲ್ಲಿ ಗೋದಾವರಿಯ ಮಧುಸೂದನ್ ಎಂಬಾತನೊಂದಿಗೆ ವಿವಾಹವಾಗಿದ್ದಳು. ಈ ದಂಪತಿ ಬೆಂಗಳೂರಿನಲ್ಲಿ ಐಟಿ ಕಂಪೆನಿಯೊಂದರಲ್ಲಿ ಕೆಲಸ ಮಾಡಿದ್ದರು. ಮೊದಲ ಮಗುವಿನ ಜನನದ ಬಳಿಕ ದಂಪತಿ ವಿಜಯನಗರಕ್ಕೆ ಬಂದಿದ್ದರು. ಮಧುಸೂದನ್ 2011ರಲ್ಲಿ ಇಲ್ಲಿ ಕಾನೂನು ವ್ಯಾಸಂಗ ಆರಂಭಿಸಿದ್ದ.

    ವಿಜಯನಗರಕ್ಕೆ ಬಂದ ಬಳಿಕ ಸುಪ್ರಿಯಾ ಜೀವನ ನರಕವಾಗಿದೆ. ಪತಿ ಮಧುಸೂದನ್ ಮತ್ತು ಅವನ ಕುಟುಂಬಸ್ಥರು ಮನೆಯಲ್ಲಿ ಬಂಧಿಸಿದ್ದರು. ಆಕೆಯ ಮನೆಯವರೊಂದಿಗೂ ಮಾತನಾಡಲು ಅವಕಾಶ ಕೊಟ್ಟಿಲ್ಲ. ಜತೆಗೆ ತನ್ನ ಮಗುವಿನೊಂದಿಗೂ ಇರಲು ಬಿಟ್ಟಿಲ್ಲ. 2011ರಲ್ಲಿ ವಿಜಯನಗರಕ್ಕೆ ಬಂದ ನಂತರ ಸುಪ್ರಿಯಾ ಕೆಲವೇ ಬಾರಿ ಅತ್ತೆಯ ಮನೆಯಿಂದ ಹೊರಗೆ ಹೋಗಿದ್ದರು.

    ಆಘಾತಕಾರಿ ವಿಷಯವೆಂದರೆ ಸುಪ್ರಿಯಾಳನ್ನು ಗೃಹ ಬಂಧನದಿಂದ ಹೊರತರಲು ಬಂದಾಗ ಮಧುಸೂಧನ್ ಮನೆಯವರು ಪೊಲೀಸರು ಒಳ ಬಿಟ್ಟಿಲ್ಲ. ಸರ್ಚ್ ವಾರೆಂಟ್ ನೀಡುವಂತೆ ಒತ್ತಾಯಿಸಿದ್ದಾರೆ. ಇದಾದ ನಂತರ ಸುಪ್ರಿಯಾ ಪೋಷಕರು ನ್ಯಾಯಾಲಯದ ಮೆಟ್ಟಿಲೇರಿದ್ದರು. ನ್ಯಾಯಾಲಯ ವಾರಂಟ್ ಜಾರಿ ಮಾಡಿದೆ. ನಂತರ ಮಧುಸೂದನ್ ಅವರ ಮನೆಯನ್ನು ಶೋಧಿಸಿ ಸುಪ್ರಿಯಾ ಅವರನ್ನು ಬಿಡುಗಡೆ ಮಾಡಲಾಗಿದೆ. ಸದ್ಯ ಸುಪ್ರಿಯಾಳ ಪತಿ ವಿರುದ್ಧ ಎಫ್‌ಐಆರ್ ದಾಖಲಾಗಿದೆ. (ಏಜೆನ್ಸೀಸ್)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts