More

    ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆಶಾಸಕ ಕೆ.ಎಂ.ಉದಯ್ ಚಾಲನೆ

    ಮದ್ದೂರು: ಐದು ವರ್ಷದೊಳಗಿನ ಮಕ್ಕಳಿಗೆ 2 ಹನಿ ಪೋಲಿಯೋ ಲಸಿಕೆ ಹಾಕಿಸುವ ಮೂಲಕ ಮುಂದಾಗುವ ತೊಂದರೆಗಳಿಂದ ಮಕ್ಕಳನ್ನು ರಕ್ಷಣೆ ಮಾಡಬೇಕೆಂದು ಶಾಸಕ ಕೆ.ಎಂ.ಉದಯ್ ತಿಳಿಸಿದರು.

    ಪಟ್ಟಣದ ಸರ್ಕಾರಿ ಬಸ್ ನಿಲ್ದಾಣ ಬಳಿ ಭಾನುವಾರ ರೋಟರಿ ಸಂಸ್ಥೆ, ಆರೋಗ್ಯ ಇಲಾಖೆ ವತಿಯಿಂದ ಆಯೋಜಿಸಿದ್ದ ಪೋಲಿಯೋ ಲಸಿಕೆ ಹಾಕುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

    2 ಹನಿ ಲಸಿಕೆಯಿಂದ ಜೀವನ ಪೂರ್ತಿ ಪೋಲಿಯೋ ವಿರುದ್ಧ ವಿಜಯ ಸಾಧಿಸಬಹುದು. ಆದ್ದರಿಂದ 5 ವರ್ಷದೊಳಗಿನ ಮಕ್ಕಳಿಗೆ ಕಡ್ಡಾಯವಾಗಿ ಲಸಿಕೆ ಹಾಕಿಸಬೇಕು ಎಂದು ಸಲಹೆ ನೀಡಿದರು.

    ತಾಲೂಕು ಆರೋಗ್ಯಾಧಿಕಾರಿ ಡಾ.ರವೀಂದ್ರ ಬಿ.ಗೌಡ ಮಾತನಾಡಿ, ತಾಲೂಕಿನಲ್ಲಿ 15,562 ಮಕ್ಕಳಿಗೆ ಲಸಿಕೆ ಹಾಕುವ ಗುರಿ ಇದೆ. ಗ್ರಾಮಾಂತರ ಪ್ರದೇಶಗಳಲ್ಲಿ ಮಾ.5 ರವರೆಗೆ, ಪಟ್ಟಣದ ವ್ಯಾಪ್ತಿಯಲ್ಲಿ ಮಾ.6 ರವರೆಗೆ ಲಸಿಕೆ ಹಾಕಲಾಗುತ್ತದೆ. ಜತೆಗೆ ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ವ್ಯವಸ್ಥೆ ಮಾಡಲಾಗಿದೆಎ ಎಂದರು.

    ತಹಸೀಲ್ದಾರ್ ಸೋಮಶೇಖರ್, ಸಿಪಿಐ ಪ್ರಸಾದ್, ಪುರಸಭೆ ಮುಖ್ಯಾಧಿಕಾರಿಯಾಗಿ ಕರಿಬಸವಯ್ಯ, ರೋಟರಿ ಅಧ್ಯಕ್ಷ ಎಂ.ಸಿ.ಶಶಿಗೌಡ, ಕಾರ್ಯದರ್ಶಿ ಎಚ್.ಪಿ.ಚನ್ನಂಕೇಗೌಡ, ಪೋಲಿಯೋ ಚೇರ್ಮನ್ ಡಾ. ಎಸ್.ಎಂ.ದರ್ಶನ್ ರೋಟರಿ ಪದಾಧಿಕಾರಿಗಳಾದ ಪ್ರವೀಣ್, ರವೀಶ್, ಹೊನ್ನೇಗೌಡ, ತಿಪ್ಪೂರುರಾಜೇಶ್, ಬಸವರಾಜು, ಕುಮಾರ್, ಪ್ರಕಾಶ್, ಇನ್ನರ್ ವ್ಹೀಲ್ ಅಧ್ಯಕ್ಷೆ ಚಂದ್ರಕಲಾ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts