More

    ಕಾನೂನು ಜ್ಞಾನ ಹೆಚ್ಚಿಸಲು ಕಾರ್ಯಗಾರ ಸಹಾಯ

    ಮಾನ್ವಿ: ಕಾನೂನು ಕಾರ್ಯಗಾರಗಳಲ್ಲಿ ಹಿರಿಯ ನ್ಯಾಯವಾದಿಗಳು ಯುವ ವಕೀಲರಗೆ ಕಾಯ್ದೆಗಳ ಬಗ್ಗೆ ಅರಿವು ಮೂಡಿಸುವುದರಿಂದ ಕಾನೂನು ಜ್ಞಾನ ಹೆಚ್ಚಳಕ್ಕೆ ಸಹಕಾರಿ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರಾದ ಶಿವರಾಜ ವಿ.ಸಿದ್ದೇಶ್ವರ ತಿಳಿಸಿದರು.

    ಇದನ್ನೂ ಓದಿ: ಸಾಮರ್ಥ್ಯ ಅಭಿವೃದ್ಧಿ, ಕಾನೂನು ತರಬೇತಿ ಕಾರ್ಯಗಾರ

    ಪಟ್ಟಣದ ಸಿವಿಲ್ ಮತ್ತು ಜೆ.ಎಂ.ಎಫ್ ನ್ಯಾಯಾಲಯದ ಸಭಾಂಗಣದಲ್ಲಿ ಗುರು ಅರವಿಂದ ಮಳೆಬೆನ್ನೂರು ವಕೀಲರ ಚಾರೀಟೇಬಲ್ ಟ್ರಸ್ಟ್ ರಾಯಚೂರು, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತಾಲೂಕು ಕಾನೂನು ಸೇವಾ ಸಮಿತಿ, ನ್ಯಾಯಾವಾದಿಗಳ ಸಂಘ ಸಂಯುಕ್ತಾಶ್ರಯದಲ್ಲಿ ಭಾನುವಾರ ನಡೆದ ಯುವ ವಕೀಲರಿಗೆ ಕಾನೂನು ಕಾರ್ಯಗಾರದಲ್ಲಿ ಮಾತನಾಡಿದರು.

    ಯುವ ವಕೀಲರು ಹಿರಿಯ ನ್ಯಾಯವಾಧಿಗಳಲ್ಲಿ ಹಾಗೂ ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳ ಮೂಲಕ ಕಾನೂನಿನ ಬಗ್ಗೆ ತಿಳಿಯಲು ಸಾಧ್ಯ ಎಂದರು.

    ಸಿವಿಲ್ ನ್ಯಾಯಾಧೀಶರಾದ ಆಶಪ್ಪ ಸಣ್ಣಮನಿ ಮಾತನಾಡಿ, ಕಲ್ಯಾಣ ಕರ್ನಾಟಕ ಭಾಗದಲ್ಲಿನ ವಕೀಲರಿಗೆ ನ್ಯಾಯಾಧೀಶರ ಹುದ್ದೆಗೆ ನಡೆಯುವ ಪರೀಕ್ಷೆಗಳಿಗೆ ತರಬೇತಿ ದೊರೆಯದೆ ಆಯ್ಕೆಯಾಗುವುದಕ್ಕೆ ಸಾಧ್ಯವಾಗುತ್ತಿಲ್ಲ, ಕಾನೂನು ಕಾರ್ಯಗಾರಗಳನ್ನು ಅಯೋಜನೆ ಮಾಡುವುದು ಅಗತ್ಯ.

    ವಕೀಲ ವೃತ್ತಿಯಲ್ಲಿ ಯಶಸ್ಸ ಪಡೆಯಲು ವಿವಿಧ ಕಾಯ್ದೆಗಳ ಬಗ್ಗೆ ತಿಳಿದುಕೊಳ್ಳಬೇಕು ಎಂದು ತಿಳಿಸಿದರು.ಶ್ರೀ ಗುರು ಅರವಿಂದ ಮಳೆಬೆನ್ನೂರು ವಕೀಲರ ಚಾರೀಟೇಬಲ್ ಟ್ರಸ್ಟ್ ಅಧ್ಯಕ್ಷ ಶಶಿಧರಗೌಡ ಕೆಲೂರ, ಸಹಾಯಕ ಸರಕಾರಿ ಅಭಿಯೋಜಕಿ ಅರ್ಚನಾ ಯಾದವ್,

    ನ್ಯಾಯಾವಾದಿಗಳ ಸಂಘದ ಅಧ್ಯಕ್ಷ ರವಿಕುಮಾರ ಪಾಟೀಲ್, ಉಪಾಧ್ಯಕ್ಷ ಮನೋಹರ್ ವಿಶ್ವಕರ್ಮ, ಚನ್ನಬಸವ ನಾಯಕ, ಕೊರವಯ್ಯ, ದತ್ತಾತ್ರೆಯ, ಮಲ್ಲೇಶ ಮಾಚನೂರು, ಈಶಪ್ಪ ಬೈಲ್ ಮರ್ಚೆಡ್, ಹಿರಿಯ ನ್ಯಾಯವಾದಿಗಳಾದ ಎ.ಬಿ.ಉಪಳಮಠ, ಮಲ್ಲಿಕಾರ್ಜುನ ಪಾಟೀಲ್, ಗುಮ್ಮಬಸವರಾಜ, ಶಿವರಾಜನಾಯಕ, ಲಕ್ಷ್ಮೀದೇವಿನಾಯಕ, ಗುಂಡಮ್ಮ, ದೂಮಣ್ಣನಾಯಕ, ಎಂ.ಸತ್ಯನಾರಯಣ ಇತರೆ ವಕೀಲರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts