More

    ಅವಕಾಶಕ್ಕಾಗಿ ಮಂಚ ಹಂಚಿಕೊಳ್ಳುವಂತೆ ಒತ್ತಾಯ! ಸಿನಿ ಇಂಡಸ್ಟ್ರಿಯ ಕರಾಳತೆ ಬಿಚ್ಚಿಟ್ಟ ನಟಿ ಲತಾ ರಾವ್​

    ಚೆನ್ನೈ: ಈಗಾಗಲೇ ಸಾಕಷ್ಟು ನಟಿಯರು ಸಿನಿಮಾ ಇಂಡಸ್ಟ್ರಿಯಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ ಬಗ್ಗೆ ಮಾತನಾಡಿದ್ದಾರೆ. ನಿರ್ದೇಶಕರು, ನಟರು ಹಾಗೂ ನಿರ್ಮಾಪಕರು ಅವಕಾಶದ ಹೆಸರಿನಲ್ಲಿ ತಮ್ಮ ಬಯಕೆಗಳನ್ನು ಈಡೇರಿಸುವಂತೆ ನಟಿಯರನ್ನು ಕೇಳುವುದು ಸಿನಿ ಇಂಡಸ್ಟ್ರಿಗೆ ಅಂಟಿಕೊಂಡಿರುವ ಶಾಪವಾಗಿದೆ. ಬಾಲಿವುಡ್​, ಟಾಲಿವುಡ್​, ಕಾಲಿವುಡ್​, ಸ್ಯಾಂಡಲ್​ವುಡ್​ ಮತ್ತು ಮಾಲಿವುಡ್​ನಲ್ಲಿ ನಡೆಯುವ ಕಾಸ್ಟಿಂಗ್​ ಕೌಚ್​ಗೆ ಅನೇಕ ಕಲಾವಿದೆಯರು ಸಂತ್ರಸ್ತೆಯರಾಗಿದ್ದಾರೆ. ಇನ್ನು ಕೆಲವರು ಅದನ್ನು ಎದುರಿಸಿದ್ದಾರೆ. ಸಾಕಷ್ಟು ನಟಿಯರು ತಮ್ಮ ಕಹಿ ಅನುಭವಗಳನ್ನು ಧೈರ್ಯವಾಗಿ ಹೇಳಿಕೊಂಡಿದ್ದು, ಇದೀಗ ಆ ಸಾಲಿಗೆ ಮತ್ತೊಬ್ಬ ನಟಿ ಲತಾ ರಾವ್​ ಸೇರಿಕೊಂಡಿದ್ದಾರೆ.

    ಸಿನಿ ಇಂಡಸ್ಟ್ರಿಯ ಕರಾಳತೆ 

    ತಮಿಳು, ತೆಲುಗು, ಮಲಯಾಳಂ ಮತ್ತು ಕನ್ನಡ ಸೀರಿಯಲ್ಸ್​ನಲ್ಲಿ ನಟಿಸಿರುವ ನಟಿ ಲತಾ ರಾವ್​ ಅವರು ಮನರಂಜನಾ ಉದ್ಯಮದಲ್ಲಿ ಎದುರಿಸಿದ ಅನೇಕ ಸವಾಲುಗಳನ್ನು ಇತ್ತೀಚಿನ ಮಾಧ್ಯಮ ಸಂದರ್ಶನವೊಂದರಲ್ಲಿ ಹಂಚಿಕೊಂಡಿದ್ದಾರೆ. ಲತಾ ಅವರು ಸೀರಿಯಲ್ಸ್​ ಮಾತ್ರವಲ್ಲದೆ, ಕೆಲವು ಸಿನಿಮಾಗಳಲ್ಲಿಯೂ ನಟಿಸಿದ್ದಾರೆ. ಕನ್ನಡ ಕೋಟಿಗೊಬ್ಬ 2 ಹಾಗೂ ತಮಿಳಿನಲ್ಲಿ ಜಯಂ ರವಿ ಅಭಿನಯದ ಥಿಲ್ಲಾಲಂಗಡಿ ಸೇರಿದಂತೆ ಕೆಲವು ಸಿನಿಮಾಗಳಲ್ಲಿ ನಟನೆ ಮಾಡಿದ್ದಾರೆ. ಒಂದು ಕಾಲದಲ್ಲಿ ಅನೇಕ ಅವಕಾಶಗಳನ್ನು ಹೊಂದಿದ್ದ ಲತಾ ಅವರು ಇದೀಗ ಅವಕಾಶಗಳಿಂದ ವಂಚಿತರಾಗಿದ್ದು, ತೆರೆಮರೆಗೆ ಸರಿದಿದ್ದಾರೆ. ಅದಕ್ಕೆ ಕಾರಣ ಏನೆಂಬುದನ್ನು ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ತಿಳಿಸಿದ್ದು, ಸಿನಿ ಇಂಡಸ್ಟ್ರಿಯ ಕರಾಳತೆ ಮತ್ತೊಮ್ಮೆ ಬಯಲಾಗಿದೆ.

    ಇದನ್ನೂ ಓದಿ: ನೀವು ನಿತ್ಯ ಸೇವಿಸುವ ಈ ಆಹಾರಗಳು ನಿಮ್ಮ ಮೂಳೆಗಳನ್ನು ದುರ್ಬಲಗೊಳಿಸಬಹುದು ಎಚ್ಚರ!

    ಕಳವಳಕಾರಿಯಾಗಿದೆ

    ಸಂದರ್ಶನದಲ್ಲಿ ಪಾತ್ರಕ್ಕಾಗಿ ಪಲ್ಲಂಗ, ಅವಕಾಶಗಳಿಗಾಗಿ ಹೊಂದಾಣಿಕೆ ಸೇರಿದಂತೆ ಸಿನಿ ಇಂಡಸ್ಟ್ರಿಯಲ್ಲಿರುವ ಅನಿಷ್ಟ ಪದ್ಧತಿಯ ಬಗ್ಗೆ ಮಾತನಾಡಿದ್ದಾರೆ. ಕೆಲವು ನಟಿಯರು ಅವಕಾಶವನ್ನು ಗಿಟ್ಟಿಸಿಕೊಳ್ಳಲು ಮಂಚವನ್ನು ಹಂಚಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಸಿನಿ ಲೋಕದಲ್ಲಿ ಇದು ಹೊಸದೇನಲ್ಲ. ಬಹಳ ಹಿಂದಿನಿಂದಲೂ ನಡೆದುಕೊಂಡು ಬಂದಿದೆ. ಆದರೆ, ಈ ಅನಿಷ್ಟ ಪದ್ಧತಿ ಇತರೆ ಕ್ಷೇತ್ರಗಳಿಗೂ ಆವರಿಸುತ್ತಿರುವುದು ಕಳವಳಕಾರಿಯಾಗಿದೆ. ಇಂತಹ ರಾಜಿಗಳನ್ನು ಕೆಲವು ವ್ಯಕ್ತಿಗಳು ಒಂದು ಹೆಗ್ಗುರುತನ್ನು ಪಡೆಯಲು ಅಥವಾ ತಮ್ಮ ವೃತ್ತಿಜೀವನದ ಉತ್ತುಂಗಕ್ಕೆ ಏರಲು ಮಾಡುತ್ತಾರೆ ಎಂದಿದ್ದಾರೆ.

    ನನಗೂ ಒತ್ತಾಯ ಮಾಡಿದ್ದರು

    ಇಂತಹ ಕೆಟ್ಟ ಆಚರಣೆಯ ಭಾಗವಾಗದಿರುವ ನನ್ನ ನಿರ್ಧಾರದಿಂದ ನಾನು ಅನೇಕ ಅವಕಾಶಗಳನ್ನು ಕಳೆದುಕೊಂಡಿದೆ. ಮಂಚ ಹಂಚಿಕೊಳ್ಳುವಂತೆ ನನಗೂ ಒತ್ತಾಯ ಮಾಡಿದ್ದರು. ಆದರೆ, ನಾನು ಯಾವ ಆಮಿಷಕ್ಕೂ ಬಲಿಯಾಗಲಿಲ್ಲ ಎಂದು ಹೇಳಿದರು. ಆದರೆ, ನಿರ್ದೇಶಕರು, ನಿರ್ಮಾಪಕರು ಅಥವಾ ಯಾವು ಸಿನಿಮಾ ಎಂದು ಖಚಿತವಾಗಿ ಹೇಳಲಿಲ್ಲ. ಲತಾ ಅವರ ಈ ಮಾತುಗಳು ಸಿನಿ ಉದ್ಯಮದಲ್ಲಿ ತತ್ವ ಮತ್ತು ಮೌಲ್ಯಗಳನ್ನು ಎತ್ತಿಹಿಡಿಯುವ ನಟಿಯರು ಎದುರಿಸುವ ಸವಾಲುಗಳನ್ನು ಎತ್ತಿ ತೋರಿಸುತ್ತದೆ. ರಾಜಿಯಾದರೆ ಅವಕಾಶ ಮತ್ತು ಹಣ ಎಂಬಂತಾಗಿದೆ.

    ಇದನ್ನೂ ಓದಿ: ಹೆಂಡತಿ-ಮಕ್ಕಳನ್ನು ನೋಡಿಕೊಳ್ಳುವುದು ಗಂಡನ ಕರ್ತವ್ಯ: ಕುರಾನ್ ಉಲ್ಲೇಖಿಸಿ ಪತಿಯ ಅರ್ಜಿ ವಜಾಗೊಳಿಸಿದ ಹೈಕೋರ್ಟ್

    ಪಾತ್ರಗಳಿಗಾಗಿ ಪಲ್ಲಂಗ ಹಂಚಿಕೊಳ್ಳದಿರಲು ನಿರ್ಧಾರ ಮಾಡುವ ನಟಿಯರು ಕೆಲವು ಪ್ರಾಜೆಕ್ಟ್‌ಗಳನ್ನು ಪಡೆದುಕೊಳ್ಳುವಲ್ಲಿ ಅಡಚಣೆಗಳನ್ನು ಎದುರಿಸಬಹುದು. ಅದು ಅವರ ವೃತ್ತಿಪರ ಬೆಳವಣಿಗೆಯ ಮೇಲೆ ಪರಿಣಾಮ ಬೀರುತ್ತದೆ. ಆದಾಗ್ಯೂ, ಅಂತಹ ನಿರ್ಧಾರಗಳು ಮನಸ್ಸಿನ ಶಾಂತಿಯನ್ನು ನೀಡುತ್ತವೆ ಮತ್ತು ಅವರ ಆತ್ಮಗೌರವವನ್ನು ಎತ್ತಿಹಿಡಿದಂತಾಗುತ್ತದೆ. ಆದರೆ, ಕೆಲವರು ಅನಿವಾರ್ಯ ಕಾರಣಗಳಿಂದ ಮೋಸದ ಬಲೆಗೆ ಬಿದ್ದವರೂ ಇದ್ದಾರೆ. ಇಂತಹ ಘಟನೆಗಳಿಗೆ ಕಡಿವಾಣ ಹಾಕಲೇಬೇಕಿದೆ. (ಏಜೆನ್ಸೀಸ್​)

    10 ವರ್ಷದ ಬಳಿಕ ಗಂಡ ಮರಳಿ ಸಿಕ್ಕನೆಂಬ ಖುಷಿಯಲ್ಲಿದ್ದ ಮಹಿಳೆಗೆ ಮರುಕ್ಷಣವೇ ಕಾದಿತ್ತು ಬಿಗ್​ ಶಾಕ್!

    VIDEO | ವಿದ್ಯಾರ್ಥಿನಿಯೊಂದಿಗೆ ಅಸಭ್ಯವಾಗಿ ವರ್ತಿಸಿದ ಧರ್ಮಗುರು..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts