More

    ಆಧಾರ್​-ಪ್ಯಾನ್​ ಲಿಂಕ್​ ಮಾಡಲು ಇನ್ನೊಂದೇ ತಿಂಗಳು ಗಡುವು; ಇಲ್ಲಾಂದ್ರೆ ನಿಷ್ಕ್ರಿಯವಾಗುತ್ತೆ ಪ್ಯಾನ್​ ಕಾರ್ಡ್​

    ನವದೆಹಲಿ: ಪ್ಯಾನ್ ಕಾರ್ಡ್ ಅನ್ನು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವ ಗಡುವನ್ನು ಆದಾಯ ತೆರಿಗೆ ಇಲಾಖೆ ಕಳೆದೆರಡು ತಿಂಗಳುಗಳಲ್ಲಿ ಹಲವು ಬಾರಿ ವಿಸ್ತರಿಸಿದೆ. ಆಧಾರ್​-ಪ್ಯಾನ್​ ಕಾರ್ಡ್​ ಲಿಂಕ್ ಮಾಡಲು ಈಗ ಮಾರ್ಚ್​ 31 ಕೊನೆಯ ದಿನಾಂಕ ಎಂದು ಘೋಷಿಸಲಾಗಿದೆ.

    ಮಾರ್ಚ್ 31, 2023ರ ಒಳಗೆ ಪ್ಯಾನ್​ಕಾರ್ಡ್ ಹೊಂದಿರುವವರು ಆಧಾರ್ ಕಾರ್ಡ್‌ನೊಂದಿಗೆ ಲಿಂಕ್ ಮಾಡಲು ವಿಫಲವಾದರೆ ಪ್ಯಾನ್​ ಕಾರ್ಡ್​ಅನ್ನು ನಿಷ್ಕ್ರಿಯಗೊಳಿಸಲಾಗುವುದು ಎಂದು ಆದಾಯ ತೆರಿಗೆ ಇಲಾಖೆ ಹೇಳಿದೆ. 1 ಏಪ್ರಿಲ್ 2022 ಮತ್ತು 30 ಜೂನ್ 2022ರ ನಡುವೆ ಲಿಂಕ್​ ಮಾಡಿದ್ದರೆ 500 ರೂ ದಂಡವನ್ನು ಪಾವತಿಸಬೇಕಾಗಿತ್ತು. ಈಗ ಆಧಾರ್ ಮತ್ತು ಪ್ಯಾನ್ ಅನ್ನು ಲಿಂಕ್ ಮಾಡಲು 1,000 ರೂ ದಂಡ ಕಟ್ಟಬೇಕು ಎಂದು ಐಟಿ ಇಲಾಖೆ ಹೇಳಿದೆ.

    ನೀವು ಇನ್ನೂ ನಿಮ್ಮ ಆಧಾರ್ ಕಾರ್ಡ್ ಅನ್ನು ನಿಮ್ಮ ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡದಿದ್ದರೆ ಬೇಗನೇ ಮಾಡಿಸಿಕೊಳ್ಳಿ. ನಿಮ್ಮ ಪ್ಯಾನ್ ನಿಷ್ಕ್ರಿಯಗೊಳ್ಳುವ ಮೊದಲು, ರೂ 1,000 ದಂಡವನ್ನು ಪಾವತಿಸುವ ಮೂಲಕ ನೀವು ಆಧಾರ್​-ಪ್ಯಾನ್​ ಲಿಂಕ್​ ಮಾಡಬಹುದು.

    ನಿಮ್ಮ ಆಧಾರ್-ಪ್ಯಾನ್ ಅನ್ನು ಆನ್‌ಲೈನ್‌ನಲ್ಲಿ ಲಿಂಕ್ ಮಾಡಲು ಹೀಗೆ ಮಾಡಿ:
    1. www.incometax.gov.in ನಲ್ಲಿ ಅಧಿಕೃತ ಆದಾಯ ತೆರಿಗೆ ಇ-ಫೈಲಿಂಗ್ ವೆಬ್‌ಸೈಟ್‌ಗೆ ಭೇಟಿ ನೀಡಿ.
    2. ನಿಮ್ಮ ಲಾಗಿನ್ ಮಾಹಿತಿಯನ್ನು ಬಳಸಿಕೊಂಡು ಆದಾಯ ತೆರಿಗೆ ಪೋರ್ಟಲ್‌ಗೆ ಲಾಗ್ ಇನ್ ಮಾಡಿ.
    3. ಪಾಪ್-ಅಪ್ ವಿಂಡೋ ಹೊರಹೊಮ್ಮುತ್ತದೆ
    4. ಇಲ್ಲದಿದ್ದರೆ, ಮೆನು ಬಾರ್‌ನಿಂದ ಪ್ರೊಫೈಲ್ ಸೆಟ್ಟಿಂಗ್‌ಗಳಲ್ಲಿ ಹುಡುಕಿ ‘ಲಿಂಕ್ ಆಧಾರ್’ ಆಯ್ಕೆಯನ್ನು ಆರಿಸಿ.
    5. ಹೊಸ ವಿಂಡೋ ಕಾಣಿಸುತ್ತದೆ.
    6. ನಿಮ್ಮ ಪ್ಯಾನ್ ಸಂಖ್ಯೆ, ಆಧಾರ್ ವಿವರಗಳು, ಹೆಸರು ಮತ್ತು ಮೊಬೈಲ್ ಸಂಖ್ಯೆಯನ್ನು ನಮೂದಿಸಿ.
    7. ಮಾಹಿತಿಯನ್ನು ಫೀಡ್​ ಮಾಡಿದ ನಂತರ, ‘ನನ್ನ ಆಧಾರ್ ವಿವರಗಳನ್ನು ವ್ಯಾಲಿಡೇಟ್​ ಮಾಡಲು ನಾನು ಒಪ್ಪುತ್ತೇನೆ’ ಎನ್ನುವ ಆಯ್ಕೆಯನ್ನು ಆರಿಸಿ.
    8. ಈಗ ‘ಮುಂದುವರಿಸಿ’ ಬಟನ್ ಕ್ಲಿಕ್ ಮಾಡಿ.
    9. ನಿಮ್ಮ ರಿಜಿಸ್ಟರ್ಡ್ ಮೊಬೈಲ್ ಸಂಖ್ಯೆಗೆ OTP ಕಳುಹಿಸಲಾಗುತ್ತದೆ.
    10. ಪರದೆಯ ಮೇಲಿನ ಖಾಲಿ ಜಾಗಗಳನ್ನು ಭರ್ತಿ ಮಾಡಿ ಮತ್ತು ‘ವ್ಯಾಲಿಡೇಟ್’ ಬಟನ್ ಒತ್ತಿರಿ.
    11. ನೀವು ದಂಡವನ್ನು ಪಾವತಿಸಿದ ನಂತರ, ನಿಮ್ಮ ಪ್ಯಾನ್-ಆಧಾರ್ ಲಿಂಕ್ ಸಂಪನ್ನವಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts