More

    ಮೂವರು ಉಗ್ರರನ್ನು ಹೊಡೆದುರುಳಿಸಿದ ಬೆನ್ನಲ್ಲೇ ಲಷ್ಕರ್​-ಇ-ತೊಯ್ಬಾ ಸಂಘಟನೆಗೆ ಸೇರಿದ ಉಗ್ರನ ಬಂಧನ

    ನವದೆಹಲಿ: ಲಷ್ಕರ್​-ಇ-ತೊಯ್ಬಾ ಉಗ್ರ ಸಂಘಟನೆಗೆ ಸೇರಿದ ಉಗ್ರನೊಬ್ಬನನ್ನು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಮಂಗಳವಾರ ಬಂಧಿಸಿದ್ದಾರೆ.

    ಬಂಧಿತನನ್ನು 19 ವರ್ಷದ ಸಾಜಿದ್​ ಫಾರೂಖ್​ ದಾರ್​ ಎಂದು ಗುರುತಿಸಲಾಗಿದ್ದು, ಬಾರಾಮುಲ್ಲ ಜಿಲ್ಲೆಯ ಅಂಡರ್ಗ್ಯಾಮ್​ ಪಠಾನ್​ ಏರಿಯದಲ್ಲಿ ಬಂಧಿಸಲಾಗಿದೆ ಈತ ಬಂಡಿಪೋರ ಜಿಲ್ಲೆಯ ಗುಂಡ್​ ಪ್ರಾಂಗ್​ ಮಾದ್ವನ್​ ಹಜಿನ್​​​ ನಿವಾಸಿಯಾಗಿದ್ದು, ಫಾರೂಖ್​ ಅಹ್​ ದಾರ್​ ಎಂಬಾತನ ಮಗನಾಗಿದ್ದಾನೆ. ಈತ ನಿರಂತರವಾಗಿ ಎಲ್​ಇಟಿಯೊಂದಿಗೆ ಸಂಪರ್ಕ ಹೊಂದಿದ್ದ ಎಂದು ಜಮ್ಮು ಮತ್ತು ಕಾಶ್ಮೀರ ಪೊಲೀಸರು ಟ್ವೀಟ್​ ಮಾಡಿ ತಿಳಿಸಿದ್ದಾರೆ.

    ಜೈಷ್​-ಎ-ಮೊಹಮ್ಮದ್​(ಜೆಇಎಂ) ಉಗ್ರ ಸಂಘಟನೆಯ ಬಹುಮುಖ್ಯ ಕಮಾಂಡರ್ ಸೇರಿದಂತೆ ಮೂವರು ಉಗ್ರರನ್ನು ಮೂರು ದಿನಗಳ ಹಿಂದೆ ಕಾಶ್ಮೀರದ ಅವಾಂತಿಪೋರ್​ನಲ್ಲಿ ಭದ್ರತಾ ಪಡೆ ಹೊಡೆದುರುಳಿಸಿದ ಬೆನ್ನಲ್ಲೇ ಮತ್ತೊಬ್ಬ ಉಗ್ರನನ್ನು ಜಮ್ಮು ಕಾಶ್ಮೀರ ಪೊಲೀಸರು ವಶಕ್ಕೆ ಪಡೆದಿದ್ದಾರೆ.​

    ಮೂರು ದಿನಗಳ ಹಿಂದೆ ಹೊಡೆದುರುಳಿಸಲಾದ ಉಗ್ರರನ್ನು ತ್ರಾಲ್​ನ ಬುರ್ಹಾನ್​ ಶೇಖ್​, ಮೂಸಾ ಅಲಿಯಾಸ್​ ಅಬು ಉಸ್ಮಾನ್​ ಮತ್ತು ಜೈಷ್​-ಎ-ಮೊಹಮ್ಮದ್​(ಜೆಇಎಂ) ಉಗ್ರ ಸಂಘಟನೆಯ ಬಹುಮುಖ್ಯ ಕಮಾಂಡರ್ ಖಾರಿ ಯಾಸಿರ್​ ಎಂದು ಗುರುತಿಸಲಾಗಿದೆ. ಸಾಕಷ್ಟು ಉಗ್ರ ಚಟುವಟಿಕೆ ಮತ್ತು ನಾಗರಿಕರ ಹತ್ಯೆಯಲ್ಲಿ ಇವರು ಭಾಗಿಯಾಗಿದ್ದರು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts