More

    ಉಗ್ರರಿಗೆ ಚೀನಾ ಶಸ್ತ್ರಾಸ್ತ್ರ ನೆರವು?: ಕಾಶ್ಮೀರದ ಎನ್​ಕೌಂಟರ್​ನಲ್ಲಿ 3 ಉಗ್ರರು ಬಲಿ

    ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಕಾಶ್ಮೀರದಲ್ಲಿ ಬುಧವಾರ ನಡೆದ ಕಾರ್ಯಾಚರಣೆ ವೇಳೆ ಲಷ್ಕರ್ ಏ ತೊಯ್ಬಾ ಕಮಾಂಡರ್ ಸೇರಿ ಮೂವರು ಉಗ್ರರು ಭದ್ರತಾ ಪಡೆಗಳ ಗುಂಡಿಗೆ ಬಲಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಒಬ್ಬ ಉಗ್ರ ಶೋಪಿಯಾನ್​ನಲ್ಲಿ ಬಲಿಯಾದರೆ, ಇನ್ನಿಬ್ಬರು ಉಗ್ರರು ಕುಪ್ವಾರಾದಲ್ಲಿ ಎನ್​ಕೌಂಟರ್​ಗೆ ಬಲಿಯಾಗಿದ್ದಾರೆ.

    ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಚಿತ್ರಗ್ರಾಮ ಎಂಬಲ್ಲಿ ಭದ್ರತಾ ಪಡೆಗಳು ಶೋಧ ಕಾರ್ಯ ನಡೆಸುತ್ತಿದ್ದ ವೇಳೆ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಭದ್ರತಾ ಪಡೆಯ ಯೋಧರು ಪ್ರತಿದಾಳಿ ಆರಂಭಿಸಿದಾಗ ಉಗ್ರನೊಬ್ಬ ಬಲಿಯಾಗಿದ್ದಾನೆ. ಆತನ ಗುರುತು ಪತ್ತೆಯಾಗಿಲ್ಲ. ಘಟನಾ ಸ್ಥಳದಿಂದ ಆರು ರೌಂಡ್ ಬುಲೆಟ್ ಹೊಂದಿದ ಒಂದು ಪಿಸ್ತೂಲ್​, ಅಂಡರ್ ಬ್ಯಾರೆಲ್ ಗ್ರೆನೇಡ್ ಲಾಂಚರ್ ಮತ್ತು ನಾಲ್ಕು ಚೀನೀ ನಿರ್ಮಿತ ಗ್ರೆನೇಡ್ ಗಳು ಪತ್ತೆಯಾಗಿವೆ.

    ಇದನ್ನೂ ಓದಿ: VIDEO: ಹತ್ತು ಮಕ್ಕಳ ತಾಯಿಯಾಗು, ಹನ್ನೊಂದನೆಯ ಮಗು ನಿನ್ನ ಪತಿಯಾಗಲಿ!

    ಇನ್ನೊಂದು ಎನ್​ಕೌಂಟರ್​ ಉತ್ತರ ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಹಂದ್ವಾರದ ಗಣಿಪೋರಾ ಕ್ರಾಲ್​ಗುಂಡ್​ ಎಂಬಲ್ಲಿ ನಡೆದಿತ್ತು. ಅಲ್ಲಿ ಲಷ್ಕರ್ ಏ ತೊಯ್ಬಾದ ಕಮಾಂಡರ್ ನಸೀರ್ ಉ ದಿನ್ ಲೋನ್ ಮತ್ತು ಇನ್ನೊಬ್ಬ ಉಗ್ರ ಬಲಿಯಾಗಿದ್ದಾರೆ. ನಸೀರ್ ಉ ದಿನ್​ ಏಪ್ರಿಲ್ 18ರಂದು ಮೂವರು ಸಿಆರ್​ಪಿಎಫ್​ ಯೋಧರ ಹತ್ಯೆ ಮಾಡಿದ ಪ್ರಕರಣದ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)

    ಸುಶಾಂತ್ ಸಾವಿನ ಪ್ರಕರಣ: ಶಿವಸೇನೆಯಲ್ಲಿ ಶುರುವಾಗಿದೆ ನಡುಕ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts