More

    ಎಂಇಎಸ್‌ನಿಂದ ಮುಗಿಯದ ಉದ್ಧಟತನ

    ಬೆಳಗಾವಿ: ಮಹಾನಗರ ಪಾಲಿಕೆ ಆವರಣದಲ್ಲಿ ಕನ್ನಡಪರ ಹೋರಾಟಗಾರರು ಸ್ಥಾಪಿಸಿರುವ ಕನ್ನಡ ಧ್ವಜಸ್ತಂಭ ತೆರವು ಗೊಳಿಸದಿದ್ದರೆ
    ಭಗವಾ ಧ್ವಜ ಹಾರಿಸುತ್ತೇವೆ ಎನ್ನುವ ಮೂಲಕ ಮಹಾರಾಷ್ಟ್ರ ಏಕೀಕರಣ ಸಮಿತಿ (ಎಂಇಎಸ್)ಮತ್ತೆ ಉದ್ಧಟತನ ಪ್ರದರ್ಶಿಸಿದೆ.

    ನಾಡದ್ರೋಹಿ ಘೋಷಣೆ ಕೂಗುವ ಮೂಲಕ ಎಂಇಎಸ್ ಕಾರ್ಯಕರ್ತರು ನಗರದಲ್ಲಿ ಬುಧವಾರ ಮತ್ತೆ ತಮ್ಮ ಕಿರಿಕ್ ಮಾಡಿದ್ದಾರೆ. ಬೆಳಗಾವಿ ಡಿಸಿ ಕಚೇರಿಗೆ ನುಗ್ಗಲು ಯತ್ನಿಸುವ ಜತೆಗೆ ಕನ್ನಡ ಧ್ವಜಸ್ತಂಭ ತೆರವಿಗೆ 15 ದಿನಗಳ ಗಡುವು ನೀಡುವ ಮೂಲಕ ಕನ್ನಡಿಗರ ಆಕ್ರೋಶಕ್ಕೆ ಕಾರಣರಾಗಿದ್ದಾರೆ. ಬೆಳಗಾವಿ ಮಹಾನಗರ ಪಾಲಿಕೆ ಎದುರು ಕನ್ನಡ ಹೋರಾಟಗಾರರು ವಾರದ ಹಿಂದೆಯಷ್ಟೇ ಕನ್ನಡ ಧ್ವಜಸ್ತಂಭ ಸ್ಥಾಪಿಸಿದ್ದರು.

    ಇದನ್ನು ಸಹಿಸಿಕೊಳ್ಳದ ಎಂಇಎಸ್ ಕಾರ್ಯಕರ್ತರು ಧ್ವಜಸ್ತಂಭ ತೆರವಿಗೆ ಪಟ್ಟು ಹಿಡಿದು, ನಾಡದ್ರೋಹತನ ಮುಂದುವರಿಸಿದ್ದಾರೆ. ಬುಧವಾರ ಬೆಳಗ್ಗೆ ಬೆಳಗಾವಿ ಜಿಲ್ಲಾಧಿಕಾರಿ ಕಚೇರಿ ಎದುರು ಎಂಇಎಸ್ ಕಾರ್ಯಕರ್ತರು ಪ್ರತಿಭಟಿಸಿದರು. ಜಿಲ್ಲಾಧಿಕಾರಿ ವಿಡಿಯೋ ಕಾನ್ಫರೆನ್ಸ್ ನಲ್ಲಿದ್ದ ಹಿನ್ನೆಲೆಯಲ್ಲಿ ಮನವಿ ಸ್ವೀಕರಿಸಲು ಬರಲು ಸ್ವಲ್ಪ ವಿಳಂಬವಾಗಿತ್ತು. ಹೀಗಾಗಿ ಎಂಎಇಎಸ್ ಪುಂಡರು ಬ್ಯಾರಿಕೇಡ್ ತಳ್ಳಿ ಡಿಸಿ ಕಚೇರಿಯೊಳಗೆ ನುಗ್ಗಲು ಯತ್ನಿಸಿದರು. ಈ ವೇಳೆ ಪೊಲೀಸರು ತಡೆದರು.

    ಬಳಿಕ ಸ್ಥಳಕ್ಕೆ ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಆಗಮಿಸುತ್ತಿದ್ದಂತೆ ಮತ್ತೆ ನಾಡದ್ರೋಹಿ ಘೋಷಣೆ ಕೂಗಿದರು. ಅಲ್ಲದೆ, ಜಿಲ್ಲಾಧಿಕಾರಿ ಎಂ.ಜಿ.
    ಹಿರೇಮಠ ಅವರ ಎದುರೇ ಏರುಧ್ವನಿಯಲ್ಲಿ ಮಾತನಾಡುತ್ತ, ಪಾಲಿಕೆ ಎದುರು ಅಳವಡಿಸಿರುವ ಕನ್ನಡ ಧ್ವಜಸ್ತಂಭ ತೆರವಿಗೆ 15 ದಿನಗಳ
    ಗುಡುವು ಕೊಟ್ಟು ಮನವಿ ಸಲ್ಲಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts