More

    ಎಟಿಎಂ ಒಳಗೆ ಹಾವಿದೆ… ಜೋಕೆ!

    ಗಾಜಿಯಾಬಾದ್: ಹಣ ಪಡೆಯುವ ಧಾವಂತದಲ್ಲಿ ಎಟಿಎಂ ಒಳ ಹೋಗುವ ಮುನ್ನ ಜಾಗ್ರತೆ..! ಇತ್ತೀಚೆಗೆ ವೈರಲ್​ ಆಗಿರುವ ವಿಡಿಯೋ ತುಣುಕೊಂದು ಗ್ರಾಹಕರಿಗೆ ಎಟಿಎಂ ಪ್ರವೇಶಿಸುವ ಮುನ್ನ ಕಳ್ಳರಷ್ಟೇ ಅಲ್ಲ, ಹಾವು ಇದೆಯಾ? ಎಂದೂ ಪರಿಶೀಲಿಸಿಕೊಂಡು ಹೋಗಬೇಕು ಅನ್ನಿಸುವಷ್ಟರಮಟ್ಟಿಗೆ ಭೀತಿ ತರಿಸಿದೆ.

    ಇದನ್ನೂ ಓದಿ VIDEO/ ಕೈಯಲ್ಲಿ ಕೆಲಸ ಇದ್ದರೂ ಬೆಂಗಳೂರು ತೊರೆಯಲು ಸಜ್ಜು

    ಇತ್ತೀಚೆಗೆ ರಾಷ್ಟ್ರ ರಾಜಧಾನಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾದ ಎಟಿಎಂ ಕೇಂದ್ರಕ್ಕೆ ನುಗ್ಗಿದ ಕೋತಿಯೊಂದು ಮಷಿನ್​ ಹಾನಿ ಮಾಡಿ ಹೋಗಿತ್ತು. ಆರಂಭದಲ್ಲಿ ಇದನ್ನು ಖದೀಮರ ಕೈಚಳಕವೆಂದೇ ಭಾವಿಸಿ ತನಿಖೆ ಕೈಗೊಂಡು, ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ ಪೊಲೀಸರೇ ಆಶ್ಚರ್ಯಗೊಂಡಿದ್ದರು. ಎಟಿಎಂ ಒಳಗೆ ಮಂಗನ ಛೇಷ್ಟೆ ಸೆರೆಯಾಗಿದ್ದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿ ನೋಡುಗರಿಗೆ ಮನರಂಜನೆ ನೀಡಿತ್ತು. “ಮಂಕಿ ಹೀಸ್ಟ್” ಎಂದೇ ಕಮೆಂಟ್ಸ್​ ಮಾಡಿದ್ದರು. ಇಂತಹದ್ದೇ ಅವಾಂತರ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಐಸಿಐಸಿಐ ಬ್ಯಾಂಕ್ ಎಟಿಎಂನಲ್ಲಿ ನಡೆದಿದೆ. ಆದರಿಲ್ಲಿ ಎಟಿಎಂ ಒಳ ನುಗ್ಗಿದ್ದು ಹಾವು!

    ಇದನ್ನೂ ಓದಿ ಇಂದು ವಿಜಯ್‌ಪ್ರಕಾಶ್ ಬಾಳಲ್ಲಿ ಸ್ಪೆಷಲ್ ದಿನ!

    ಗಾಜಿಯಾಬಾದ್‌ನ ಗೋವಿಂದಪುರಿ ಪ್ರದೇಶದಲ್ಲಿನ ಎಟಿಎಂ ಕೇಂದ್ರದ ಒಳಹೊಕ್ಕಿದ ಸುಮಾರು ಒಂದು ಮಾರು ಉದ್ದವಿರುವ ಹಾವೊಂದು ಕೆಲ ಕ್ಷಣ ಅಲ್ಲೇ ಹರಿದಾಡಿದೆ. ಕೊನೆಗೆ ಎಟಿಎಂ ಮಷಿನ್​ ಮೇಲೇರಿದ ಹಾವು ಸ್ಕ್ರೀನ್​ ಮೇಲ್ಭಾಗದಲ್ಲಿರುವ ರಂಧ್ರದೊಳಗೆ ಹೋಗಿದೆ. ಇದೆಲ್ಲವನ್ನೂ ಬಾಗಿಲ ಹೊರಗೆ ನಿಂತಿದ್ದ ಗ್ರಾಹಕರು ಮೊಬೈಲ್​ನಲ್ಲಿ ವಿಡಿಯೋ ಮಾಡಿಕೊಂಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​ ಮಾಡಿದ್ದಾರೆ. ಎಟಿಎಂ ಒಳಗೆ ಹಾವು ಕಾಣಿಸಿಕೊಳ್ಳುತ್ತಿದ್ದಂತೆ ಕಾವಲುಗಾರ ಬಾಗಿಲು ಹಾಕಿ ಒಳ ಪ್ರವೇಶಿಸದಂತೆ ಗ್ರಾಹಕರನ್ನು ತಡೆದಿದ್ದ.

    ಹಣ ಪಡೆಯಲೆಂದು ಬಂದ ಗ್ರಾಹಕರು, ಹಾವಿನ ಇರುವಿಕೆ ಕಂಡು ಭಯಗೊಂಡಿದ್ದರು. ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಎಟಿಎಂ ಮಷಿನ್​ನೊಳಗಿದ್ದ ಹಾವನ್ನು ಸುರಕ್ಷಿತವಾಗಿ ಹಿಡಿದು ಬೇರೆಡೆಗೆ ಕೊಂಡೊಯ್ದಿದ್ದಾರೆ. ಇದು ವಿಷಕಾರಿ ಹಾವಲ್ಲ ಎಂದು ಜಿಲ್ಲಾ ಅರಣ್ಯ ಅಧಿಕಾರಿ ದೀಕ್ಷಾ ಭಂಡಾರಿ ತಿಳಿಸಿದ್ದಾರೆ.

    ಇದನ್ನೂ ಓದಿ ಎಟಿಎಂ ಹಾನಿ ರಹಸ್ಯ ಬಯಲು, ಇದನ್ನು ಓದಿದ್ರೆ ಗ್ಯಾರಂಟಿ ನಗ್ತೀರಿ!

    ಒಟ್ಟಾರೆ ಈ ಹಾವು ಎಟಿಎಂ ಮಷಿನ್​ ಒಳಗೆ ಹೋಗುತ್ತಿರುವ ವಿಡಿಯೋ ತುಣುಕು ಜಾಲತಾಣದಲ್ಲಿ ವೈರಲ್​ ಆಗಿದ್ದು, ನೋಡುಗರಿಗೆ ಭೀತಿ ಜತೆಗೆ, ಆಶ್ಚರ್ಯವನ್ನೂ ತರಿಸಿದೆ. ‘ನಾಗಿಣಿ ಚಿತ್ರ ನೆನಪಿಸುತ್ತಿದೆ’, ‘ಬ್ಯಾಂಕಿನ ಗ್ರಾಹಕ ಹಾವು ಹಣ ಪಡೆಯಲು ಬಂದಿರಬೇಕು’, ‘ಹಣ ಹಿಂಪಡೆಯಲು ಬಂದಿದ್ದ ಹಾವನ್ನು ಜನರು ಗಾಬರಿಗೊಳಿಸಿದರು’, ‘ಭಯಾನಕವಾಗಿದೆ’, ‘ಬ್ಯಾಂಕ್​ಗಳ ಬೋರ್ಡ್ ರೂಂಗಳಲ್ಲಿ ಹಾವುಗಳಿದ್ದವು. ಆದರೆ, ಹಾವು ಎಟಿಎಂ ಮಷಿನ್​ ಒಳಗೆ ಹೋಗುವುದನ್ನು ಎಂದೂ ನೋಡಿರಲಿಲ್ಲ’, ‘ಮೊಬೈಲ್​ ಬ್ಯಾಂಕಿಂಗ್ ಮೂಲಕ ಸಾಲ ವಿತರಣಾ ಸೇವೆ ನಿಲ್ಲಿಸಿದ್ದಕ್ಕೆ ನಮ್ಮ ವ್ಯವಸ್ಥೆಯಲ್ಲಿನ ಹಾವುಗಳು ಹಣ ಪಡೆಯಲು ಈ ಮಾರ್ಗ ಕಂಡುಕೊಂಡಿವೆ’… ಹೀಗೆ ಸಾವಿರಾರು ಕಮೆಂಟ್ಸ್​ ಬರುತ್ತಿವೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts