More

    ಎಟಿಎಂ ಹಾನಿ ರಹಸ್ಯ ಬಯಲು, ಇದನ್ನು ಓದಿದ್ರೆ ಗ್ಯಾರಂಟಿ ನಗ್ತೀರಿ!

    ದೆಹಲಿ: ರಾಷ್ಟ್ರ ರಾಜಧಾನಿಯಲ್ಲಿ ಬುಧವಾರ ಹಾನಿಗೊಳಗಾಗಿದ್ದ ಎಟಿಎಂ ರಹಸ್ಯ ಸಿಸಿಟಿವಿ ದೃಶ್ಯಾವಳಿಯಲ್ಲಿ ಬಯಲಾಗಿದ್ದು, ಅದನ್ನು ನೋಡಿದ ಪೊಲೀಸರೇ ಆಶ್ಚರ್ಯಗೊಂಡಿದ್ದಾರೆ. ಈ ವಿಡಿಯೋ ತುಣುಕು ವೈರಲ್​ ಆಗಿದ್ದು, ನೋಡುಗರಿಗೂ ಬಿಟ್ಟಿ ಮನರಂಜನೆ ನೀಡುತ್ತಿದೆ. ಅಂದಹಾಗೆ ಇಷ್ಟಕ್ಕೆಲ್ಲ ಕಾರಣ ಯಾರು ಗೊತ್ತಾ?

    ರಾಷ್ಟ್ರ ರಾಜಧಾನಿಯ ಸೌತ್ ಅವೆನ್ಯೂ ಪ್ರದೇಶದಲ್ಲಿ ಸ್ಟೇಟ್​ ಬ್ಯಾಂಕ್​ ಆಫ್​ ಇಂಡಿಯಾ ಎಟಿಎಂ ಕೇಂದ್ರದಲ್ಲಿ ಮಷಿನ್​ ಮುಂಭಾಗದ ಫಲಕ ಸೇರಿ ಕೆಲ ಭಾಗ ಕಿತ್ತು ಕೆಳಗೆ ಬಿದ್ದಿತ್ತು. ಪ್ರಕರಣ ದಾಖಲಿಕೊಂಡಿದ್ದ ಪೊಲೀಸರು ತನಿಖೆ ಕೈಗೊಂಡಿದ್ದರು. ಆರಂಭದಲ್ಲಿ ಇದು ಕಳ್ಳರ ಕೈಚಳಕವೇ ಇರಬೇಕು. ಹಣ ಕದಿಯಲು ವಿಫಲ ಯತ್ನ ನಡೆಸಿದ್ದಾರೆ ಎಂದೇ ಅಂದಾಜಿಸಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಎಟಿಎಂ ಕೇಂದ್ರದೊಳಗಿನ ಸಿಸಿಟಿವಿ ದೃಶ್ಯಾವಳಿ ಪರಿಶೀಲಿಸಿದ್ದಾರೆ. ಆದರೆ, ಅವರ ಅಂದಾಜು ತಪ್ಪಾಗಿತ್ತು.

    ಇದನ್ನೂ ಓದಿರಿ ಮುಂಬೈ ಆಸ್ಪತ್ರೆಯಲ್ಲಿ ಶವಗಳ ಪಕ್ಕದಲ್ಲೇ ಕರೊನಾ ಸೋಂಕಿತರಿಗೆ ಚಿಕಿತ್ಸೆ

    ಎಟಿಎಂಗೆ ನುಗ್ಗಿದ್ದು ಬೇರೆ ಯಾರೂ ಅಲ್ಲ, ಮಂಗ. ಎಟಿಎಂ ಒಳಗೆ ಸೇರಿಕೊಂಡಿದ್ದ ಮಂಗವೊಂದು ಹೊರ ಹೋಗಲು ಚಡಪಡಿಸುತ್ತ, ಮಷಿನ್​ ಮುಂಭಾಗದ ಸ್ಕ್ರೀನ್ ಕೀಳಲು ಹೋಗಿ ಕೆಳಕ್ಕೆ ಬೀಳುತ್ತದೆ. ಮತ್ತೆ ಯಂತ್ರದ ಮೇಲೇರುವ ಕೋತಿ ತನ್ನ ಛೇಷ್ಟೆ ಮುಂದುವರಿಸುತ್ತದೆ. ಕೆಲ ಸಮಯ ಎಟಿಎಂ ಯಂತ್ರವನ್ನು ದಿಟ್ಟಿಸಿ ನೋಡುತ್ತದೆ. ಬಾಗಿಲು ಮತ್ತು ಮಷಿನ್​ ಬಳಿಗೆ ಓಡಾಡುವ ಕೋತಿ, ಕೊನೆಗೆ ಬಾಗಿಲತ್ತ ನಡೆಯುತ್ತದೆ. ಇದೆಲ್ಲವೂ ಕ್ಯಾಮರಾ ಕಣ್ಗಾವಲಲ್ಲಿ ಸೆರೆಯಾಗಿದೆ.

    ಎಟಿಎಂ ಒಳಗೆ ಮಂಗನಾಟ, ಛೇಷ್ಟೆಯ ವಿಡಿಯೋ ತುಣುಕು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದ್ದು, ನೋಡುಗರಿಗೆ ಸಖತ್ ಮನರಂಜನೆ ನೀಡುತ್ತಿದೆ. “ಮಂಕಿ ಹೀಸ್ಟ್”, “..ಇದನ್ನು ನಂಬಲಾಗುತ್ತಿಲ್ಲ” … ಎಂದೆಲ್ಲ ಕಮೆಂಟ್​ ಮಾಡುತ್ತಿದ್ದಾರೆ. (ಏಜೆನ್ಸೀಸ್​)

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts