More

    ಚೊಚ್ಚಲ ಲಂಕಾ ಪ್ರೀಮಿಯರ್ ಲೀಗ್‌ಗೆ ಮಾರಕವಾಗುತ್ತಿದೆ ಕೋವಿಡ್-19..?

    ಕೊಲಂಬೊ: ಚೊಚ್ಚಲ ಆವೃತ್ತಿಯ ಲಂಕಾ ಪ್ರೀಮಿಯರ್ ಲೀಗ್‌ಗೆ (ಎಲ್‌ಪಿಎಲ್) ದಿನಗಣನೆ ಆರಂಭಗೊಂಡಿದೆ. ಆದರೆ, ಲೀಗ್‌ಗೆ ಒಂದಿಲ್ಲೊಂದು ಹೊಡೆತ ಬೀಳುತ್ತಲೇ ಇದೆ. ಕ್ರಿಸ್ ಗೇಲ್, ಲಿಸಿತ್ ಮಾಲಿಂಗ ಸೇರಿದಂತೆ ಈಗಾಗಲೇ ಕೆಲ ಸ್ಟಾರ್ ಕ್ರಿಕೆಟಿಗರು ಹೊರಬಿದ್ದಿದ್ದರೆ, ಕರೊನಾ ವೈರಸ್‌ನಿಂದ ಪಾಕಿಸ್ತಾನದ ವೇಗಿ ಸೊಹೈಲ್ ತನ್ವೀರ್, ಕೆನಡದ ಬ್ಯಾಟ್ಸ್‌ಮನ್ ರವೀಂದರ್‌ಪಾಲ್ ಸಿಂಗ್ ಲೀಗ್‌ನಿಂದ ಹೊರಬಿದ್ದಿದ್ದಾರೆ. ನವೆಂಬರ್ 26 ರಿಂದ ಆರಂಭಗೊಳ್ಳಬೇಕಿರುವ ಎಲ್‌ಪಿಎಲ್‌ಗೆ ಭಾರಿ ಹಿನ್ನಡೆಯಾದಂತಾಗಿದೆ.

    ತನ್ವೀರ್ ಕ್ಯಾಂಡಿ ಟಸ್ಕರ್ಸ್‌ ಪರ ಹಾಗೂ ರವೀಂದರ್‌ಪಾಲ್ ಸಿಂಗ್ ಕೊಲಂಬೊ ಕಿಂಗ್ಸ್ ಪರ ಕಣಕ್ಕಿಳಿಯಬೇಕಿತ್ತು. ಪಾಕಿಸ್ತಾನದ ವಾಹಬ್ ರಿಯಾಜ್, ಇಂಗ್ಲೆಂಡ್‌ನ ಲಿಯಾಮ್ ಪ್ಲಂಕೆಟ್ ಲೀಗ್‌ನಿಂದ ಹೊರಬಿದ್ದ ಹಿನ್ನೆಲೆಯಲ್ಲಿ ಸೊಹೈಲ್ ತನ್ವೀರ್ ತಂಡ ಸೇರಿಕೊಂಡಿದ್ದರು. ತನ್ವೀರ್ ಹಾಗೂ ಸಿಂಗ್ ಕನಿಷ್ಠ ಎರಡು ವಾರಗಳ ಕಾಲ ಲೀಗ್‌ನಿಂದ ಹೊರಗುಳಿಯಬೇಕಿದೆ. ತನ್ವೀರ್ ಬದಲಿಗೆ ಮತ್ತೋರ್ವ ಆಟಗಾರನ ಆಯ್ಕೆ ಕುರಿತು ಫ್ರಾಂಚೈಸಿ ಜತೆ ಮಾತುಕತೆ ನಡೆಸುವುದಾಗಿ ಟಸ್ಕರ್ಸ್‌ ಕೋಚ್ ಹಸನ್ ತಿಲಕರತ್ನೆ ಹೇಳಿದ್ದಾರೆ. ಭಾರತ ತಂಡದ ಮಾಜಿ ವೇಗಿ ಇರ್ಫಾನ್ ಪಠಾಣ್ ಲೀಗ್‌ನಲ್ಲಿ ಆಡುತ್ತಿರುವ ಭಾರತದ ಏಕೈಕ ಆಟಗಾರ.

    ಮೊದಲ ಆವೃತ್ತಿಯ ಐಪಿಎಲ್ ನವೆಂಬರ್ 26 ರಿಂದ ಆರಂಭಗೊಳ್ಳಬೇಕಿದ್ದು, ಹಂಬಂಟೊಟಾದಲ್ಲಿ ಕೊಲಂಬೊ ಕಿಂಗ್ಸ್ ಹಾಗೂ ಕ್ಯಾಂಡಿ ಟಸ್ಕರ್ಸ್‌ ನಡುವಿನ ಉದ್ಘಾಟನಾ ಪಂದ್ಯ ನಡೆಯಲಿದ್ದು, ಡಿಸೆಂಬರ್ 16 ರಂದು ಫೈನಲ್ ಪಂದ್ಯ ನಡೆಯಲಿದೆ. ಕೊಲಂಬೊ, ಕ್ಯಾಂಡಿ, ಗಾಲೆ, ದಾಂಬುಲಾ ಹಾಗೂ ಜಾಫ್ನಾ ಫ್ರಾಂಚೈಸಿಗಳು ಲೀಗ್‌ನಲ್ಲಿ ಆಡುತ್ತಿರುವ 5 ತಂಡಗಳು. ಬಾಲಿವುಡ್ ನಟ ಸಲ್ಮಾನ್ ಖಾನ್ ಸಹೋದರ ಸೊಹೈಲ್ ಖಾನ್, ಕ್ಯಾಂಡಿ ಫ್ರಾಂಚೈಸಿಯ ಮಾಲೀಕರಾಗಿದ್ದಾರೆ. ಶ್ರೀಲಂಕಾದ ಮಾಜಿ ಬ್ಯಾಟ್ಸ್‌ಮನ್ ಹಸನ್ ತಿಲಕರತ್ನೆ ತಂಡದ ಕೋಚ್ ಆಗಿದ್ದಾರೆ.

    ಭಾರತ ಹಾಗೂ ಆಸ್ಟ್ರೇಲಿಯಾ ಸರಣಿಗೆ ಬರಲಿದೆ ಎಕ್ಸ್‌ಟ್ರಾ ಇನಿಂಗ್ಸ್…..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts