More

    ಆನ್​ಲೈನ್​ನಲ್ಲಿ ಚಿಣ್ಣರೊಂದಿಗೆ ಕಣ್ಣನ್ ಮಾಮ

    ಚಿಕ್ಕಮಗಳೂರು: ಬಾಲ್ಯದಿಂದಲೇ ಕನ್ನಡ ಭಾಷಾಭಿಮಾನ ಬೆಳೆಯಬೇಕೆನ್ನುವ ಪರಿಕಲ್ಪನೆ ಹೊಂದಿರುವ ಹಿರೇಮಗಳೂರು ಕಣ್ಣನ್ ಇದೀಗ ಆನ್​ಲೈನ್ ಮೂಲಕ ಹೊಸ ಪರಿಕಲ್ಪನೆ ಇರಿಸಿಕೊಂಡು ಮಕ್ಕಳ ಮನಸ್ಸಿನ ಆಳಕ್ಕೆ ಇಳಿಯುವ ಪ್ರಯತ್ನದಲ್ಲಿ ಹೊಸ ಭಾಷ್ಯ ಬರೆದಿದ್ದಾರೆ.

    ‘ಚಿಣ್ಣರೊಂದಿಗೆ ಕಣ್ಣನ್ ಮಾಮ’ ಎನ್ನುವ ಈ ಕಾರ್ಯಕ್ರಮ ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್ ಸಾರಥ್ಯದಲ್ಲಿ ಆರಂಭಗೊಂಡಿದೆ. ಈ ಪರಿಕಲ್ಪನೆ ಮಕ್ಕಳ ದಿನಾಚರಣೆ ಸಂದರ್ಭದಲ್ಲೇ ಹುಟ್ಟಿದ್ದು ವಿಶೇಷ. ಹೋರಾಟ, ಪ್ರತಿಭಟನೆ, ಪ್ರಾಧಿಕಾರಗಳ ರಚನೆಯಿಂದ, ಸಂಘರ್ಷದ ಹಾದಿಯಿಂದ ಕನ್ನಡ ಉಳಿಸಲು, ಬೆಳೆಸಲು ಸಾಧ್ಯವಾಗುವುದಿಲ್ಲ. ಕನ್ನಡದ ಹೊಸ ಪರಂಪರೆ ಬೆಳೆಸಿ ಪೀಳಿಗೆಗೆ ದಾಟಿಸುವ ಹೊಸ ಆಶಯ ಇದು.

    ಈ ಯೋಜನೆಗೆ ಉಪನ್ಯಾಸಕ ದಂಪತಿ ತ್ಯಾಗರಾಜ್ ಮತ್ತು ನಾಗಶ್ರೀ ತ್ಯಾಗರಾಜ್, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕಿ ಡಾ. ಮಂಜುಳಾ ಹುಲ್ಲಹಳ್ಳಿ ಮತ್ತು ಕಿರಣ್ ಅವರ ತಂಡ ಕಾರ್ಯಕ್ರಮಕ್ಕೆ ವಿನ್ಯಾಸ ರೂಪಿಸಿದ್ದಾರೆ.

    ಕಾರ್ಯಕ್ರಮದಲ್ಲಿ ಪ್ರತಿ ಬಾರಿ ಮಕ್ಕಳನ್ನು ಕೂರಿಸಿಕೊಂಡು ಅವರಿಗೆ ಪುಟ್ಟ ಪುಟ್ಟ ಕವನ, ಚುಟುಕು, ಪ್ರಾರ್ಥನೆ, ಕವಿಗಳ ಪರಿಚಯಿಸಲಾಗುತ್ತಿದೆ. ಸಾಹಿತ್ಯ, ವಿಜ್ಞಾನ ವಿಚಾರ, ದೇಶದ ಸಾಂಸ್ಕೃತಿಕ, ಜಗತ್ತಿನ ಐತಿಹಾಸಿಕ ಸಂಗತಿ, ರಹಸ್ಯಗಳ ಜತೆಗೆ ಗದ್ಯ-ಪದ್ಯಗಳು, ಗಾದೆಗಳ ಗಮ್ಮತ್ತು, ಒಗಟುಗಳ ಕಸರತ್ತಿನ ಅರಿವಾಗುತ್ತದೆ. ಜತೆಗೆ ತಿಳಿಹಾಸ್ಯ ಬೆರೆಸಿ ಮಕ್ಕಳ ಮನಸಿನ ಭಾವವರಳಿಸುವ ಈ ಪ್ರಯತ್ನ ಹೊಸ ಹಾದಿಯಲ್ಲಿ ಹೆಜ್ಜೆ ಹಾಕುತ್ತಿದೆ. ಮಕ್ಕಳಲ್ಲಿ ಕನ್ನಡ ಪ್ರೇಮ ಬೆಳೆಸು ಕನ್ನಡ ಪೂಜಾರಿ ಅವರ ಈ ಕಾರ್ಯಕ್ರಮ ಭಾಷೆ ಬೆಳವಣಿಗೆಗೆ ಭದ್ರ ಬುನಾದಿ ಹಾಕಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts