More

    ಸರ್ಕಾರಿ ಕಚೇರಿಗಳಲ್ಲಿ ಭಾಷಾ ಜಾಗೃತಿ

    ಎನ್.ಆರ್.ಪುರ: ತಾಲೂಕು ಕನಡ ಸಾಹಿತ್ಯ ಪರಿಷತ್ ಸರ್ಕಾರಿ ಎಲ್ಲ ಕಚೇರಿಗಳಲ್ಲೂ ಕನ್ನಡ ಭಾಷಾ ಜಾಗೃತಿ ಮೂಡಿಸುತ್ತಿದೆ ಎಂದು ಕಸಾಪ ನಗರ ಘಟಕದ ಅಧ್ಯಕ್ಷ ಪ್ರಶಾಂತ್ ಎಲ್. ಶೆಟ್ಟಿ ಹೇಳಿದರು.

    ಪಪಂ ಸಭಾಗಣದಲ್ಲಿ ಬುಧವಾರ ತಾಲೂಕು ಕಸಾಪದಿಂದ ಉಸಿರಾಗಲಿ ಕನ್ನಡ, ಸದಾ ಹಸಿರಾಗಲಿ ಸಾಹಿತ್ಯ ಎಂಬ ಬ್ಯಾನರ್ ಬಿಡುಗಡೆಗೊಳಿಸಿ ಮಾತನಾಡಿದರು.
    ಪಪಂನಲ್ಲಿ ಮಹಿಳಾ ಸ್ವಸಹಾಯ ಸಂಘಗಳ ಮೂಲಕ ಕನ್ನಡ ಭಾಷೆ ಬೆಳವಣಿಗೆಗೆ ಕೆಲಸ ಮಾಡುತ್ತೇವೆ. ಸರ್ಕಾರದ ಆದೇಶದಂತೆ ಪಟ್ಟಣದ ಎಲ್ಲ ಅಂಗಡಿ, ವಾಣಿಜ್ಯ ಮಳಿಗೆಗಳ ನಾಮಲಕಗಳಲ್ಲಿ ಶೇ.60ರಷ್ಟು ಕನ್ನಡ ಭಾಷೆ ಇರಬೇಕು. ಕನ್ನಡ ನಾಮಲಕ ಹಾಕದಿದ್ದರೆ ಅಂತಹ ಅಂಗಡಿಗಳ ಪರವಾನಗಿ ರದ್ದು ಮಾಡುವ ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದರು.
    ತಾಲೂಕು ಕಸಾಪ ಖಜಾಂಚಿ ಕೆ.ಎಸ್.ರಾಜ್‌ಕುಮಾರ್ ಮಾತನಾಡಿ, ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಅವರು 1831ರಲ್ಲಿ ಮಹಾರಾಷ್ಟ್ರದಲ್ಲಿ ಜನಿಸಿದ್ದರು. ಹೆಣ್ಣುಮಕ್ಕಳಿಗಾಗಿ 18 ಶಾಲೆಗಳನ್ನು ತೆರೆದು ಶಿಕ್ಷಣ ಕ್ರಾಂತಿ ಮಾಡಿದರು. ಮೂಢನಂಬಿಕೆಗಳ ವಿರುದ್ಧ ಪತಿ ಜತೆ ಸೇರಿ ಹೋರಾಟ ಮಾಡಿದ್ದರು ಎಂದು ತಿಳಿಸಿದರು.
    ತಾಲೂಕು ಕಸಾಪ ಅಧ್ಯಕ್ಷ ಎಚ್.ಎಸ್.ಪೂರ್ಣೇಶ್ ಮಾತನಾಡಿ, ತಾಲೂಕಿನಲ್ಲಿ ಬೆಳಕಿಗೆ ಬಾರದಿರುವ ಹಲವಾರು ಪ್ರತಿಭೆಗಳನ್ನು ಗುರುತಿಸಿ ಗೌರವಿಸುತ್ತಿದ್ದೇವೆ. ಈಗಾಗಲೇ ಶಾಲೆಗಳು, ಸರ್ಕಾರಿ ಕಚೇರಿಗಳಲ್ಲಿ ಕನ್ನಡದ ಹಲವು ಕಾರ್ಯಕ್ರಮ ಮಾಡಿದ್ದೇವೆ. ಅಂಗಡಿ ಮುಂಗಟ್ಟುಗಳಲ್ಲಿ ಕನ್ನಡ ನಾಮಲಕ ಇರಬೇಕು ಎಂದು ಶಾಂತಿಯುತವಾಗಿ ಹೋರಾಟ ಮಾಡುತ್ತೇವೆ. ಇದೇ ಪ್ರಥಮವಾಗಿ ದೇಶದ ಪ್ರಥಮ ಮಹಿಳಾ ಶಿಕ್ಷಕಿ ಸಾವಿತ್ರಿಬಾಯಿ ಫುಲೆ ಜನ್ಮದಿನಾಚರಣೆ ಅಂಗವಾಗಿ ಶಿಕ್ಷಕಿಯೊಬ್ಬರನ್ನು ಸನ್ಮಾನಿಸುತ್ತಿದ್ದೇವೆ.
    ಪಪಂ ಮುಖ್ಯಾಧಿಕಾರಿ ಆರ್.ವಿ.ಮಂಜುನಾಥ್ ಮಾತನಾಡಿ, ಎನ್.ಆರ್.ಪುರದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಅದ್ದೂರಿಯಾಗಿ ನಡೆಸಬೇಕು. ಪಪಂನಿಂದ ಎಲ್ಲ ಸಹಕಾರ ನೀಡುತ್ತೇವೆ ಎಂದು ಭರವಸೆ ನೀಡಿದರು.
    ಬಸ್ತಿಮಠದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕಿ ಡೈಸಿ ಅವರಿಗೆ ಸಾವಿತ್ರಿಬಾಯಿ ಫುಲೆ ಪ್ರಶಸ್ತಿ, ಗೋಡೆಗಳ ಮೇಲೆ ಸುಂದರ ಕನ್ನಡ ಕೈಬರಹ ಮಾಡುತ್ತಿರುವ ಸತೀಶ್ ಹಾಗೂ ಉದಯೋನ್ಮುಖ ಗಾಯಕಿ ಮೆಣಸೂರು ವಿದ್ಯಾ ನಾಯಕ್ ಅವರನ್ನು ಸನ್ಮಾನಿಸಲಾಯಿತು. ಬಾಳೆಹೊನ್ನೂರಿನಲ್ಲಿ ಹಿರಿಯ ಛಾಯಾಗ್ರಾಹಕ, ಪತ್ರಕರ್ತ ಎಲ್.ಪಿ.ಜಗದೀಶ್ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು.
    ಪಪಂ ಸದಸ್ಯರಾದ ಸುರೈಯಾ ಬಾನು, ಎನ್.ಎಲ್.ಮುಕುಂದ, ಕಸಾಪ ಕಾರ್ಯದರ್ಶಿ ಮಂಜಪ್ಪ, ಕನ್ನಡ ಪರ ಹೋರಾಟಗಾರ ಪಿ.ಸಿ.ಮ್ಯಾಥ್ಯು, ಸುಚಿತ್ರಾ, ಸೈಯದ್ ಸಾದತ್ ಸಮೀರ್, ಚಕ್ರಪಾಣಿ, ಭಾನುಮತಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts