More

    ಬಾಯ್​ಫ್ರೆಂಡ್​ ಅನ್ನು ಮನೆಗೆ ಕರೆದುಕೊಂಡು ಬಂದಳೆಂದು 6ನೇ ಮಹಡಿಯಿಂದ ಮಹಿಳೆಯನ್ನು ದೂಡಿ ಕೊಲೆ ಮಾಡಿದ ಮಾಲೀಕ!

    ಸೈರೊ: ವೃತ್ತಿಯಲ್ಲಿ ವೈದ್ಯೆಯಾಗಿರುವ ಮಹಿಳೆಯೊಬ್ಬಳು ಮನೆಗೆ ಬಾಯ್​ಫ್ರೆಂಡ್​ನನ್ನು ಕರೆದುಕೊಂಡು ಬಂದಳೆಂದು ಮನೆಯ ಮಾಲೀಕನೇ ಆಕೆಯನ್ನು ಆರನೇ ಮಹಡಿಯಿಂದ ತಳ್ಳಿ ಕೊಲೆ ಮಾಡಿರುವ ಘಟನೆ ಈಜಿಪ್ಟ್​ನಲ್ಲಿ ನಡೆದಿದೆ.

    ಆ ಮಹಿಳೆ ತನ್ನ ಕೆಲಸ ಮುಗಿಸಿ ಮನೆಗೆ ಬರುವಾಗ ಬಾಯ್​ಫ್ರೆಂಡ್​ನನ್ನು ಕರೆದುಕೊಂಡು ಬಂದಿದ್ದಳಂತೆ. ಆದರೆ ಈಜಿಪ್ಟ್​ನಲ್ಲಿ ಕೆಲವು ವಿಚಿತ್ರ ನಿಯಮಗಳಿವೆ. ಯಾವುದೇ ಹೆಣ್ಣು ಮಗಳು ಮದುವೆಗೂ ಮೊದಲು ಬೇರೊಬ್ಬ ಗಂಡಸಿನ ಜತೆ ಇರುವಂತಿಲ್ಲ, ಮನೆಯಿಂದ ಹೊರಗೆ ಹೋಗುವಾಗ ಗಂಡಸಿನ ಅನುಮತಿ ಪಡೆದೇ ಹೋಗಬೇಕು ಎನ್ನುವ ಕಟ್ಟಪಾಡುಗಳಿವೆ. ಆದರೆ ನಿಯಮಗಳನ್ನೆಲ್ಲ ಗಾಳಿಗೆ ತೂರಿ ಬಾಯ್​ಫ್ರೆಂಡ್​ನ್ನು ಮನೆಗೆ ಕರೆದುಕೊಂಡ ಬಂದ ಮಹಿಳೆಯನ್ನು ತರಾಟೆಗೆ ತೆಗೆದುಕೊಳ್ಳಲೆಂದು ಮನೆಗೆ ಮಾಲೀಕ ಆ ಮನೆಗೆ ತೆರಳಿದ್ದಾನೆ. ಬಹುಮಹಡಿಯ ಕಟ್ಟಡದ ಆರನೇ ಮಹಡಿಯ ಮನೆಯ ಮಹಿಳೆ ವಾಸವಿದ್ದು, ಮಾಲೀಕ ಅಲ್ಲೇ ಆಕೆಯೊಂದಿಗೆ ಜಗಳವಾಡಿದ್ದಾನೆ. ಸಿಟ್ಟಿನಿಂದ ಆಕೆಯನ್ನು ಬಾಲ್ಕನಿಯಿಂದ ಹೊರಗೆ ನೂಕಿದ್ದಾನೆ. ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ.

    ಈ ವಿಚಾರ ತಿಳಿದುಬರುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಪೊಲೀಸರು ಮನೆ ಮಾಲೀಕನನ್ನು ವಶಕ್ಕೆ ಪಡೆದಿದ್ದಾರೆ. ಆದರೆ ಆತ ಕೊಲೆ ಮಾಡಿಲ್ಲವೆಂದು ವಾದ ಮಾಡಲಾರಂಭಿಸಿದ್ದಾನೆ. ಮಹಿಳೆಗೆ ಮಾನಸಿಕ ಅಸ್ವಸ್ಥತೆಯಿದ್ದು, ಅದೇ ಕಾರಣಕ್ಕೆ ಆಕೆ ಮಹಡಿಯಿಂದ ಹಾರಿ ಸಾವನ್ನಪ್ಪಿದ್ದಾಳೆ ಎಂದಿದ್ದಾನೆ. ಸದ್ಯ ಈ ಪ್ರಕರಣದ ತನಿಖೆ ನಡೆಯುತ್ತಿದೆ. ಈ ಕೃತ್ಯವನ್ನು ಖಂಡಿಸಿ ಮಹಿಳಾ ಸಂಸ್ಥೆಗಳು ಹೋರಾಟ ಆರಂಭಿಸಿವೆ. (ಏಜೆನ್ಸೀಸ್​)

    ಆಮೆಗಳನ್ನೇ ತಿನ್ನುತ್ತವೆ ಏಡಿಗಳು! ಏಡಿ ಹುಟ್ಟಿದ್ದು ಜೇಡದಿಂದ..! ಏಡಿ ಬಗ್ಗೆ ನಿಮಗೆ ಗೊತ್ತಿಲ್ಲದ ವಿಚಾರಗಳಿವು..

    ಪೆಟ್ರೋಲ್​, ಡೀಸೆಲ್​ ಬೆಲೆಯಲ್ಲಿ ಇಳಿಕೆ! ಇನ್ನಷ್ಟು ಇಳಿಯುವ ಸಾಧ್ಯತೆ..!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts