More

    VIDEO: ರಭಸದಲಿ ಮುನ್ನುಗ್ಗುತಿದೆ ನಿಸರ್ಗ: ಮುಂಬೈನಲ್ಲಿ ಭೂಕುಸಿತದ ಭೀತಿ!

    ಮುಂಬೈ: ಕಳೆದ ಏಳು ದಶಕಗಳಲ್ಲಿ ಕಂಡರಿಯದಂಥ ಚಂಡಮಾರುತ ಮುಂಬೈ ನಗರಿಯನ್ನು ಬಡಿದಪ್ಪಳಿಸಿದೆ. ಕರೊನಾ ಸೋಂಕಿನಲ್ಲಿ ಮೊದಲೇ ಬೆಚ್ಚಿ ಬಿದ್ದಿರುವ ಮುಂಬೈ ನಗರಿ ಇದೀಗ ನಿಸರ್ಗ ಚಂಡಮಾರುತದಿಂದ ತತ್ತರಿಸಿ ಹೋಗಿದೆ.

    ಮುಂಬೈನಿಂದ 50 ಕಿಲೋ ಮೀಟರ್ ದೂರದಲ್ಲಿರುವ ಅಲಿಭಾಗ್ ಪ್ರದೇಶಕ್ಕೆ ನಿರೀಕ್ಷೆಯಂತೆ ನಿಸರ್ಗ ಚಂಡಮಾರುತ ಅಪ್ಪಳಿಸಿದ್ದು ಹೈ ಅಲರ್ಟ್​ ಘೋಷಿಸಲಾಗಿದೆ. ಈ ಹಿನ್ನೆಲೆಯಲ್ಲಿ ಮುಂಜಾಗರೂಕತಾ ಕ್ರಮವಾಗಿ ಕರೊನಾ ವೈರಸ್​ ರೋಗಿಗಳು ಸೇರಿದಂತೆ ಕನಿಷ್ಠ ಒಂದು ಲಕ್ಷ ಜನರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಲಾಯಿತು.

    ಇದನ್ನೂ ಓದಿ: VIDEO: ಮುಂಬೈಯನ್ನು ನಲುಗಿಸುತ್ತಿದೆ ‘ನಿಸರ್ಗ’; ಎಲ್ಲ ಕಡೆ ಕಟ್ಟೆಚ್ಚರ, ಸೆಕ್ಷನ್​ 144 ಜಾರಿ, ವಿಪತ್ತು ಎದುರಿಸಲು ಸಿದ್ಧತೆ

    ಅಲಿಬಾಗ್‌ನ ದಕ್ಷಿಣ ಭಾಗದಲ್ಲಿ 120-140 ಕಿ.ಮೀ ವೇಗದಲ್ಲಿ ಚಂಡಮಾರುತ ಬೀಸುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿ ಭೂಕುಸಿತದ ಭೀತಿಯೂ ಉಂಟಾಗಿದೆ. ಇದರಿಂದಾಗಿ ಮುಂಬೈ ನಗರಿ ಅಕ್ಷರಶಃ ನಲುಗಿ ಹೋಗಿದೆ. ಈಗಾಗಲೇ ಸಾಕಷ್ಟು ಮುನ್ನೆಚ್ಚರಿಕೆ ತೆಗೆದುಕೊಳ್ಳಲಾಗಿದ್ದರೂ, ಭೂಕಸಿತದ ಭೀತಿ ಸರ್ಕಾರವನ್ನು ಕಂಗೆಡಿಸಿದೆ.

    ಈಗಾಗಲೇ ಮುಂಬೈನಲ್ಲಿ ಬುಧವಾರ ಮಧ್ಯರಾತ್ರಿಯಿಂದ ಗುರುವಾರ ಮಧ್ಯಾಹ್ನದವರೆಗೆ ಇಡೀ ನಗರದಲ್ಲಿ ಸೆಕ್ಷನ್ 144 ಅನ್ನು (ನಿಷೇಧಾಜ್ಞೆ ) ವಿಧಿಸಿದ್ದಾರೆ.

    ಮುಂದಿನ ಮೂರು ಗಂಟೆಗಳಲ್ಲಿ ಚಂಡಮಾರುತ ಕ್ರಮೇಣ ಮುಂಬೈ ಮತ್ತು ಥಾಣೆ ಜಿಲ್ಲೆಗೆ ಪ್ರವೇಶಿಸಲಿದೆ ಎಂದು ಹವಾಮಾನ ಕಚೇರಿ ತಿಳಿಸಿದೆ. ಚಂಡಮಾರುತ ಕರಾವಳಿಯಿಂದ ಇನ್ನೂ 130 ಕಿ.ಮೀ. ದೂರದಲ್ಲಿರುವಾಗಲೇ ಇಷ್ಟೊಂದು ಪ್ರಭಾವ ಬೀರಿದ್ದು ಕರಾವಳಿಗೆ ಅಪ್ಪಳಿಸಿದ ಮೇಲೆ ಪರಿಸ್ಥಿತಿ ಮತ್ತಷ್ಟು ಭೀಕರವಾಗಿರಲಿದೆ ಎಂದು ಅಂದಾಜಿಸಲಾಗಿದೆ.

    ಇದನ್ನೂ ಓದಿ: ವರುಣನ ಆರ್ಭಟಕ್ಕೆ ಕಾರವಾರ ತತ್ತರ

    ಎರಡು ರಾಜ್ಯಗಳಲ್ಲಿ ಸುಮಾರು 43 ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‌ಡಿಆರ್‌ಎಫ್) ತಂಡಗಳನ್ನು ನಿಯೋಜಿಸಲಾಗಿದೆ; ಅದರಲ್ಲಿ 21 ಮಹಾರಾಷ್ಟ್ರ ಮತ್ತು 16 ಗುಜರಾತ್‌ನಲ್ಲಿವೆ. ಚಂಡಮಾರುತದ ಸ್ಥಳದಿಂದ ಸುಮಾರು 1 ಲಕ್ಷ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ಎನ್‌ಡಿಆರ್‌ಎಫ್ ಮುಖ್ಯಸ್ಥ ಎಸ್ ಎನ್ ಪ್ರಧಾನ್ ಹೇಳಿದ್ದಾರೆ.

    20-40 ಕಿಲೋಮೀಟರ್ ವೇಗದಲ್ಲಿ ಮಳೆ ಮತ್ತು ಗಾಳಿ ಬೀಸಲಿರುವ ಹಿನ್ನೆಲೆಯಲ್ಲಿ ಮುಂದಿನ ಎರಡು ಗಂಟೆಗಳಲ್ಲಿ ನರ್ನಾಲ್, ಬಾವಲ್, ರೇವಾರಿ, ಪೂರ್ವ, ಈಶಾನ್ಯ ದೆಹಲಿಯ ಮಾನೇಸರ್ ಭಾಗಗಳಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಅನೇಕ ಕಾರ್ಯಯೋಜನೆಗಳನ್ನು ರೂಪಿಸಲಾಗಿದೆ. (ಏಜೆನ್ಸೀಸ್​)

    ನಿಸರ್ಗದ ವಿಕೋಪದ ವಿಡಿಯೋ ಇಲ್ಲಿದೆ ನೋಡಿ:

    ವಿವಿಧೆಡೆ ಭೂಕುಸಿತ; 20 ಮಂದಿ ದಾರುಣ ಸಾವು, ಜೀವಂತ ಸಮಾಧಿಯಾದ ಪುಟ್ಟ ಮಕ್ಕಳು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts