More

    ಭೂಮಿ ಕಳಕೊಂಡವರ ಗೋಳು ಕೇಳೋರಿಲ್ಲ!: ಬೆಂಗ್ಳೂರು-ಚೆನ್ನೈ ಕಾರಿಡಾರ್ ಎಕ್ಸ್‌ಪ್ರೆಸ್ ಹೈವೇ, ಭೂಮಿ ಕೊಟ್ಟವರಿಗೆ ಕೊಟ್ಟಿಲ್ಲ ಸಮರ್ಪಕ ಪರಿಹಾರ

    ಕೋಲಾರ: ದಕ್ಷಿಣ ಭಾರತದ ಪ್ರಥಮ ಎಕ್ಸ್‌ಪ್ರೆಸ್ ಹೈವೇ ಎಂಬ ಹೆಗ್ಗಳಿಕೆಯ ಯೋಜನೆಯಾಗಿರುವ ಬೆಂಗಳೂರು-ಚೆನ್ನೈ ಎಕ್ಸ್‌ಪ್ರೆಸ್ ಕಾರಿಡಾರ್ ಹೈವೇ ಕಾಮಗಾರಿಯಿಂದ ರೈತರು ನಲುಗುವಂತಾಗಿದೆ. ಯೋಜನೆಗಾಗಿ ಸ್ವಾಧೀನಪಡಿಸಿಕೊಂಡಿರುವ ಭೂಮಿಗೆ ಪರಿಹಾರ ಕೊಟ್ಟಿಲ್ಲ. ಭೂಮಿ ಕಳಕೊಂಡ ರೈತರ ಗೋಳು ಕೇಳುವವರಿಲ್ಲದಂತಾಗಿದೆ.

    ಬೆಂಗಳೂರು ಗ್ರಾವಾಂತರ ಜಿಲ್ಲೆಯ ಹೊಸಕೋಟೆ, ಕೋಲಾರ ಜಿಲ್ಲೆಯ ಮೂಲಕ ಸಾಗುವ ಈ ರಸ್ತೆಯ ಉದ್ದ 72 ಕಿಲೋ ಮೀಟರ್. 2013 ರಿಂದ ರಸ್ತೆ ಅಭಿವೃದ್ಧಿಪಡಿಸಲು ಅಗತ್ಯವಿರುವ 817 ಹೆಕ್ಟೇರ್ ಭೂಮಿಯ ಸ್ವಾದೀನ ಪ್ರಕ್ರಿಯೆ ನಡೆಯುತ್ತಿದೆ.

    ಅಂದಾಜು 18 ಸಾವಿರ ಕೋಟಿ ರೂ. ವೆಚ್ಚದ ಯೋಜನೆಯಲ್ಲಿ 1564.04 ಕೋಟಿ ರೂ. ಭೂ ಸ್ವಾಧೀನಕ್ಕಾಗಿ ಹಾಗೂ 186.13 ಕೋಟಿ ರೂಪಾಯಿ ಜಮೀನಿನಲ್ಲಿರುವ ಮರ ಮತ್ತಿತರ ಆಸ್ತಿಗಳಿಗೆ ಪರಿಹಾರ ನೀಡಲು ನಿಗದಿ ವಾಡಲಾಗಿದೆ. ಹಣ ನಿಗದಿಪಡಿಸಿದ್ದರೂ ಸಂತ್ರಸ್ತರಿಗೆ ನ್ಯಾಯಯುತ ಪರಿಹಾರ ದೊರೆತಿಲ್ಲ.

    ಪರಿಹಾರದ ಮೊತ್ತದ ಬಗ್ಗೆ ಪ್ರಶ್ನಿಸಿದರೆ ಕಾರಿಡಾರ್ ನಿರ್ವಾಣದ ಮೇಲ್ವಿಚಾರಣೆ ವಹಿಸಿಕೊಂಡಿರುವ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಉತ್ತರಿಸುತ್ತಿಲ್ಲ. ಇಂಟರ್‌ನೆಟ್ ಆಧರಿಸಿ ನಕ್ಷೆಗಳನ್ನು ಅನುಸರಿಸಿ ಕಾಮಗಾರಿ ನಡೆಸುತ್ತಿರುವ ದಿಲೀಪ್ ಬಿಲ್ಡ್‌ಕಾನ್ ಗುತ್ತಿಗೆ ಸಂಸ್ಥೆ ಸಿಬ್ಬಂದಿ, ರೈತರ ಜಮೀನುಗಳನ್ನು ಅವೈಜ್ಞಾನಿಕವಾಗಿ ಒತ್ತುವರಿ ವಾಡಿಕೊಳ್ಳುತ್ತಿರುವ ಆರೋಪವೂ ಕೇಳಿಬಂದಿದೆ.

    ರಸ್ತೆ ಕಾಮಗಾರಿಗೆ ಅಧಿಸೂಚನೆ ಹೊರಡಿಸಿರುವ ಜಮೀನು ಹೊರತುಪಡಿಸಿ ನೆರೆಯ ಜಮೀನುಗಳಲ್ಲಿ ಕಾಮಗಾರಿ ಕೈಗೊಳ್ಳುತ್ತಿರುವ ಬಗ್ಗೆ ಪ್ರಶ್ನಿಸುವ ರೈತರ ಮೇಲೆ ಹಲ್ಲೆಗೆ ಯತ್ನಿಸಿರುವ ದೂರುಗಳೂ ಠಾಣೆಗಳಲ್ಲಿ ದಾಖಲಾಗಿವೆ. ಈ ಬಗ್ಗೆ ಕೋಲಾರ ಮತ್ತು ಬೆಂಗಳೂರು ಗ್ರಾವಾಂತರ ಜಿಲ್ಲಾಡಳಿತಗಳು ಕಣ್ಮುಚ್ಚಿ ಕುಳಿತಿವೆ.

    ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ನಡೆಸಿದ ಕಾರಿಡಾರ್ ರಸ್ತೆಯ ಸರ್ವೇಯಲ್ಲಿ ಹಲವಾರು ತಿರುವುಗಳು ಬರಲಿವೆ. ತಿರುವುಗಳನ್ನು ನೇರ ವಾಡುವ ಸಂದರ್ಭದಲ್ಲಿ ನಿಗದಿಗಿಂತ ಹೆಚ್ಚು ಭೂಮಿಯ ಅಗತ್ಯವಿದೆ. ಅದಕ್ಕಾಗಿ ಸೇರ್ಪಡೆ ವಾಡಿಕೊಂಡಿರುವ ಹೆಚ್ಚುವರಿ ಜಮೀನುಗಳ ನೋಟಿಫಿಕೇಷನ್‌ಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಕಳಿಸಲಾಗಿದೆ. ಇದರ ಜೊತೆಗೆ ಸದರಿ ಜಮೀನುಗಳಲ್ಲಿರುವ ಸ್ವತ್ತುಗಳ ಪರಿಹಾರಕ್ಕಾಗಿಯೂ ಕ್ರಮ ಜರುಗಿಸಲಾಗಿದೆ ಎಂದು ಕೋಲಾರದಲ್ಲಿನ ಎಕ್ಸ್‌ಪ್ರೆಸ್ ಹೈವೇ ಕಾರಿಡಾರ್ ಕಚೇರಿಯ ಅಧಿಕಾರಿಗಳು ಹೇಳುತ್ತಾರೆ.

    ರಸ್ತೆ ವಾಡಲು ಬಿಟ್ಟಿಲ್ಲ: ಭೂಮಿ ಮತ್ತು ಅದರಲ್ಲಿನ ಸ್ವತ್ತುಗಳಿಗೆ ಸೂಕ್ತ ಪರಿಹಾರ ನೀಡಿದ ನಂತರ ವಾರ್ಗ ನಿರ್ವಾಣಕ್ಕೆ ಮುಂದಾಗಿ ಎಂದು ಬಂಗಾರಪೇಟೆ ತಾಲೂಕು ಐತಾಂಡಹಳ್ಳಿ, ಕಲ್ಕೆರೆ ಗ್ರಾಮಸ್ಥರು ತಡೆ ಒಡ್ಡಿದ್ದಾರೆ. ಕಾರಿಡಾರ್ ರಸ್ತೆ ನಿರ್ವಾಣದ ಗುತ್ತಿಗೆ ಸಂಸ್ಥೆಯ ಸಿಬ್ಬಂದಿ ಮತ್ತು ಯಂತ್ರಗಳನ್ನು ಗ್ರಾಮಗಳ ಒಳಕ್ಕೆ ಬಿಟ್ಟುಕೊಂಡಿಲ್ಲ. ಈ ಗ್ರಾಮಗಳಲ್ಲಿ 41.63 ಹೆಕ್ಟೇರ್ ಸ್ವಾಧೀನಕ್ಕೆ ಆದೇಶಿಸಲಾಗಿದ್ದು, ಎಕರೆಗೆ ಕೇವಲ 3.75 ಲಕ್ಷ ರೂಪಾಯಿ ಪರಿಹಾರ ೋಷಿಸಲಾಗಿದೆ. ಇದು ವಾರುಕಟ್ಟೆ ಬೆಲೆಯ ಶೇಕಡಾ 10ರಷ್ಟೂ ಇಲ್ಲ, ನಾವ್ಯಾಕೆ ಜಮೀನು ಬಿಡಬೇಕು ಎಂಬುದು ಸಂತ್ರಸ್ಥರ ವಾದ.

    ಎಲ್ಲಿ ಎಷ್ಟು ಪರಿಹಾರ?: ಹೊಸಕೋಟೆಯ ಹರಳೂರು ಗ್ರಾಮದಲ್ಲಿ ಎಕರೆಗೆ 69 ಲಕ್ಷ ನಿಗದಿಯಾಗಿದ್ದರೆ, (ಅದರ ನಾಲ್ಕು ಪಟ್ಟು ಎರಡೂವರೆ ಕೋಟಿ ರೂ. ನೀಡಬೇಕಾಗುತ್ತದೆ), ಬಂಗಾರಪೇಟೆ ತಾಲೂಕು ನಾಗಲಾಪುರದಲ್ಲಿ ಅತಿ ಕಡಿಮೆ ಅಂದರೆ 1.5 ಲಕ್ಷ ರೂ. ನಿಗದಿ ವಾಡಲಾಗಿದೆ. ವಾಲೂರಿನ ಅಬ್ಬೇನಹಳ್ಳಿಯಲ್ಲಿ 39.41 ಲಕ್ಷ ರೂ. ಇದ್ದರೆ, ಅತಿ ಕಡಿಮೆ ಎಂದರೆ ಕಾರಂಗುಟ್ಟೆ ಭೂಮಿಗಳಿಗೆ 3.92 ಲಕ್ಷ ರೂ. ನಿಗದಿಪಡಿಸಲಾಗಿದೆ. ಪಕ್ಕದ ಆನೇಪುರದಲ್ಲಿ 8 ಲಕ್ಷ ರೂ. ನೀಡಲಾಗಿದೆ. ಕೋಲಾರ, ಮುಳಬಾಗಿಲು ತಾಲೂಕುಗಳ ತಲಾ ಎರಡು ಗ್ರಾಮಗಳ ಭೂಮಿ ರಸ್ತೆಗೆ ಹೋಗಿದ್ದು, ಎಕರೆಗೆ 3 ರಿಂದ 4 ಲಕ್ಷ ರೂ. ೋಷಿಸಲಾಗಿದೆ.

    ಮೂರು ರಾಜ್ಯಗಳಿಗೆ ಪ್ರಮುಖ: ಚೆನ್ನೈ- ಬೆಂಗಳೂರು ನಡುವೆ ಸಂಚಾರದ ಅಂತರ ಮತ್ತು ಸಮಯ ಕಡಿಮೆ ವಾಡುವ ಮಹತ್ವಾಕಾಂಕ್ಷಿ ಯೋಜನೆ ಇದು. ಪ್ರಸ್ತುತ 326 ಕಿಲೋ ಮೀಟರ್ ಅಂತರವನ್ನು 262 ಕಿಲೋ ಮೀಟರ್‌ಗೆ ತಗ್ಗಿಸುತ್ತದೆ. ಅಂದರೆ 64 ಕಿಮೀ ದೂರ ಉಳಿತಾಯವಾಗುತ್ತದೆ. ಹಾಗೆಯೇ, ಪ್ರತಿ ಗಂಟೆಗೆ 120 ಕಿಲೋ ಮೀಟರ್ ವೇಗದಲ್ಲಿ ಕಾರಿಡಾರ್ ರಸ್ತೆಯಲ್ಲಿ ಚಲಿಸಿದರೆ ಈಗಿನ ಅವಧಿಗಿಂತಲೂ ಮೂರೂವರೆ ಗಂಟೆ ಪ್ರಯಾಣದ ಅವಧಿ ಕಡಿಮೆಯಾಗುತ್ತದೆ. ನೂತನ ಕಾರಿಡಾರ್ ವಾರ್ಗವು ಆಂಧ್ರದ ಪಲಮನೇರ್ ಮೂಲಕ ಹಾದು ಹೋಗುವುದರಿಂದ ಮೂರೂ ರಾಜ್ಯಗಳಿಗೆ ಪ್ರಮುಖವೆನಿಸಲಿದೆ. ಪ್ರಸ್ತುತ ಅಭಿವೃದ್ಧಿಯಾಗುತ್ತಿರುವ ಹೈವೆಯಿಂದಾಗಿ ವಾಲೂರು, ನರಸಾಪುರ, ವೇಮಗಲ್, ಬಂಗಾರಪೇಟೆ, ಕೆಜಿಎಫ್, ಕೋಲಾರ ಕೈಗಾರಿಕಾ ಪ್ರದೇಶಗಳು ಶರವೇಗದಲ್ಲಿ ಅಭಿವದ್ಧಿ ಹೊಂದುವ ನಿರೀಕ್ಷೆಯಿದೆ.

    ರಾತ್ರಿ ಪಾಳಿಯಲ್ಲೂ ಕೆಲಸ: ವಾರ್ಗದ ಉದ್ದಕ್ಕೂ ನೂರಾರು ಹಿಟಾಚಿ, ಟಿಪ್ಪರ್, ಬುಲ್ಡೋಜರ್ ಮತ್ತಿತರ ವಾಹನಗಳೊಂದಿಗೆ ಡಿಬಿಎಸ್ ಕಂಪನಿ ಕಾರ್ಮಿಕರು ನೆಲ ಸಮತಟ್ಟು, ಬ್ರಿಡ್ಜ್ ನಿರ್ವಾಣದಂತಹ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಮಳೆಯಿಂದ ಅಡಚಣೆಯಾದರೂ ಮುಂದಿನ 2 ವರ್ಷದಲ್ಲಿ ರಸ್ತೆ ನಿರ್ವಾಣ ಪೂರ್ಣಗೊಳಿಸಲಾಗುತ್ತದೆ ಎಂದು ಅಧಿಕಾರಿಗಳು ಹೇಳುತ್ತಿದ್ದಾರೆ.

    ಮರಗಲ್‌ನಲ್ಲಿ ಎಕರೆಗೆ 12.15 ಲಕ್ಷ ರೂ. ನೀಡಿದ್ದಾರೆ. ಆದರೆ ನಮ್ಮ ಜಮೀನುಗಳಿಗೆ 3.5 ಲಕ್ಷ ರೂಪಾಯಿ ಬೆಲೆ ಕಟ್ಟಿದ್ದಾರೆ. ಇದು ಅವೈಜ್ಞಾನಿಕವಾಗಿದ್ದು. ಜಮೀನುಗಳಲ್ಲಿನ ಮರ ಮತ್ತಿತರ ಸ್ವತ್ತುಗಳಿಗೆ ಸರಿಯಾಗಿ ಬೆಲೆ ನಿಗದಿಪಡಿಸಿಲ್ಲ. ಕೆಲವು ಜಮೀನುಗಳಲ್ಲಿನ ಸ್ವತ್ತುಗಳನ್ನು ಕೈಬಿಡಲಾಗಿದೆ. ಪಿ.ನಂಬರ್ ಜಮೀನುಗಳಿಗೆ ಪರಿಹಾರ ನೀಡುತ್ತಿಲ್ಲ. ಎಲ್ಲ ಸರಿಪಡಿಸಿ ಪೂರ್ತಿ ಪರಿಹಾರ ನೀಡುವ ತನಕ ರಸ್ತೆ ವಾಡಲು ಬಿಡುವುದಿಲ್ಲ.
    ಎಂ.ಬಾಬು, ಕಲ್ಕೆರೆ

    ನಮ್ಮೂರಿನ ಭೂಮಿ ಪೌತಿ ಖಾತೆ ಮೂಲಕ ಬದಲಾವಣೆಯಾಗಿದ್ದು, ಉಪನೋಂದಣಿ ಕಚೇರಿಯಲ್ಲಿ ಅವೈಜ್ಞಾನಿಕ ವಾನದಂಡ ಬಳಸಿ ಬೆಲೆ ನಿಗದಿಪಡಿಸಲಾಗಿದೆ. ಕೋಲಾರ ಜಿಲ್ಲಾಧಿಕಾರಿ ಕಚೇರಿಗೆ ಪಾದಯಾತ್ರೆ ಹೊರಟಾಗ ಸಮರ್ಪಕ ಪರಿಹಾರ ದೊರಕಿಸಿಕೊಡುವುದಾಗಿ ಶಾಸಕ ಕೆ.ಎಂ.ನಾರಾಯಣಸ್ವಾಮಿ ತಿಳಿಸಿದ್ದು, ಅವರ ಗಡುವು ಮುಗಿಯುತ್ತಾ ಬಂದಿದೆ. ಈ ಬಾರಿ ಉಗ್ರ ಹೋರಾಟ ನಡೆಸುತ್ತೇವೆ. ನಮ್ಮ ಜೀವ ಹೋದರೂ ಜಮೀನುಗಳನ್ನು ಬಿಡುವುದಿಲ್ಲ.
    ಡಿ.ಶಂಕರ್, ಕಲ್ಕೆರೆ.

    ಸರ್ಕಾರ ಜಮೀನುಗಳಿಗೆ ಗ್ರಾಮವಾರು ದರ ನಿಗದಿಪಡಿಸಿದಂತೆ ಪರಿಹಾರ ನೀಡಲಾಗುತ್ತಿದೆ. ಮರ, ಇತರ ಸ್ವತ್ತುಗಳು ಕೈಬಿಟ್ಟುಹೋಗಿದ್ದರೆ ನಮ್ಮ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಶೀಲಿಸುತ್ತಾರೆ. ಮರಗಳಿಗೆ ತೋಟಗಾರಿಕೆ, ಅರಣ್ಯ ಅಧಿಕಾರಿಗಳು ಬೆಲೆ ಕಟ್ಟುತ್ತಾರೆ. ಪೋಡಿ ಮುಗಿಯುವ ತನಕ ಪರಿಹಾರ ತಡೆಯಲು ಕಂದಾಯ ಇಲಾಖೆ ಪ್ರಾದೇಶಿಕ ಆಯುಕ್ತರು ಆದೇಶಿಸಿರುವುದರಿಂದ 40 ಪಿ ನಂಬರ್ ಖಾತೆದಾರರಿಗೆ ಪರಿಹಾರ ನೀಡಿಲ್ಲ.
    ಜಯರಾಮರೆಡ್ಡಿ, ವ್ಯವಸ್ಥಾಪಕರು, ಬೆಂಚೆ ಎಕ್ಸ್‌ಪ್ರೆಸ್ ವೇ ಕಚೇರಿ, ಕೋಲಾರ

    ಅಧಿಕಾರಿಗಳು ಕಾಸು ಕೊಟ್ಟವರಿಗೆ ಹೆಚ್ಚು ಸ್ವತ್ತು ನಮೂದಿಸಿ ಪರಿಹಾರ ವಿತರಿಸಿದ್ದಾರೆ. ಲಂಚ ಕೊಡದವರನ್ನು ಅಲೆದಾಡಿಸುತ್ತಿದ್ದಾರೆ. ಜಿಲ್ಲಾಧಿಕಾರಿ ಮನಸು ವಾಡಿದ್ದರೆ, ಅದಾಲತ್ ರೀತಿ ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಪರಿಹಾರ ಸ್ಥಳದಲ್ಲೇ ಕೊಡಿಸಬಹುದಿತ್ತು. ಹೊಸಕೋಟೆಯಿಮದ ವಿ ಕೋಟೆ ತನಕ ಸವಾನ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳಬಹುದಿತ್ತು.
    ರಾಮಚಂದ್ರಪ್ಪ ಕಲ್ಕೆರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts