More

    ಕಲ್ಲು ಗಣಿಗಾರಿಕೆಯಲ್ಲಿ ಶಾಸಕರೂ ಪಾಲುದಾರ : ಕೋಳಘಟ್ಟದಲ್ಲಿ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಆರೋಪ

    ತುರುವೇಕೆರೆ: ಕೋಳಘಟ್ಟ ಹೊರವಲಯದ ಕಲ್ಲು ಗಣಿಗಾರಿಕೆ ನಡೆಯುತ್ತಿರುವ ಸ್ಥಳಕ್ಕೆ ಬುಧವಾರ ನೂರಾರು ರೈತರೊಂದಿಗೆ ಆಗಮಿಸಿದ ಮಾಜಿ ಶಾಸಕ ಎಂ.ಟಿ.ಕೃಷ್ಣಪ್ಪ ಗಣಿಗಾರಿಕೆ ನಿಲ್ಲಿಸುವಂತೆ ಬುಧವಾರ ಪ್ರತಿಭಟನೆ ನಡೆಸಿದರು.

    ಕಲ್ಲು ಗಣಿಗಾರಿಕೆಗೆ ಶಾಸಕ ಮಸಾಲಾ ಜಯರಾಂ ಅವಕಾಶ ಕಲ್ಪಿಸಿ, ಪಾಲುದಾರರಾಗಿದ್ದಾರೆ ಎಂದು ಎಂ.ಟಿ.ಕೃಷ್ಣಪ್ಪ ಆರೋಪಿಸಿದರು.
    ನನ್ನ 15 ವರ್ಷ ಆಡಳಿತದಲ್ಲಿ ಇಂತಹ ಕಲ್ಲುಗಣಿಗಾರಿಕೆ ಅವಕಾಶ ನೀಡಿರಲಿಲ್ಲ. ಜನಪ್ರತಿನಿಧಿಗಳು ಯಾವತ್ತೂ ರೈತರ ಪರವಾಗಿರಬೇಕು. ಅದನ್ನು ಬಿಟ್ಟು ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆದಾದರಿಗೆ ಬೆಂಬಲಿಸುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು. ಶಾಸಕ ಮಸಾಲಾ ಜಯರಾಂಗೆ ಅತೀ ಹೆಚ್ಚು ಮತ ನೀಡಿದ್ದ ಗ್ರಾಮಗಳ ಜನರಿಗೆ ಶಾಸಕರೇ ಅನ್ಯಾಯ ಮಾಡುತ್ತಿದ್ದಾರೆ ಎಂದು ದೂರಿದರು.

    ರಸ್ತೆ ಅಭಿವೃದ್ಧಿಗೆ ಜಲ್ಲಿ ಬೇಕಾದರೆ ಸರ್ಕಾರ ಬರಡಾಗಿರುವ ಪ್ರದೇಶದಲ್ಲಿ ಬೇರೆ ಕಡೆ ಕಲ್ಲುಗಣಿಗಾರಿಕೆ ಮಾಡಲಿ. ಆದರೆ ಸದಾ ಹಚ್ಚ ಹರಿಸಿನಿಂದ ಗಂಗೊಳಿಸುತ್ತಿರುವ ಪ್ರದೇಶದಲ್ಲಿ ಕಲ್ಲುಗಣಿಗಾರಿಕೆ ಮಾಡುವುದನ್ನು ಸ್ಥಳೀಯ ಹತ್ತು ಹಳ್ಳಿಯ ರೈತರು ವಿರೋಧಿಸುತ್ತಿದ್ದಾರೆ. ಕಲ್ಲು ಗಣಿಗಾರಿಕೆಯಿಂದ ಜನ, ಜಾನುವಾರುಗಳಿಗೆ ಹೆಚ್ಚಿನ ತೊಂದರೆಯಾಗುತ್ತಿದೆ. ತೋಟ, ಹೊಲ-ಗದ್ದೆಗಳಿಗೆ ತೊಂದರೆಯಾಗುತ್ತಿದೆ. ಕಲ್ಲು ಸಿಡಿಸಲು ಬಳಸುವ ಸ್ಫೋಟಕದಿಂದ ಹಲವು ಜಾನುವಾರುಗಳು, ಇಬ್ಬರು ವೃದ್ದರು ಸಾವನ್ನಪ್ಪಿದ್ದಾರೆ. ಹಲವು ಹಳ್ಳಿಗಳ ಮನೆಗಳು, ದೇವಸ್ಥಾನಗಳು ಬಿರುಕು ಬಿಟ್ಟಿವೆ. ರೈತರಿಗೆ, ಪರಿಸರಕ್ಕೆ, ಬೆಳೆಗಳಿಗೆ ಹಾನಿಯಾದರೇ ಕೂಡಲೇ ನಿಲ್ಲಿಸುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ಸ್ಪಷ್ಟವಾಗಿ ಹೇಳಿದ್ದಾರೆ. ಆದರೂ ರೈತರ ವಿರೋಧ ಕಟ್ಟಿಕೊಂಡು ಪೊಲೀಸರನ್ನು ಬಳಸಿಕೊಂಡು ಗಣಿಗಾರಿಕೆ ಮಾಡುತ್ತಿದ್ದಾರೆ. ಪೊಲೀಸರು ರೈತರಿಗೆ ರಕ್ಷಣೆ ಕೊಡುವ ಬದಲು ಕಲ್ಲು ಗಣಿಗಾರಿಕೆ ಕಂಪನಿ ಜತೆ ಶಾಮೀಲಾಗಿದ್ದು, ಗುತ್ತಿಗೆದಾರರ ಪರವಾಗಿ ಬರುತ್ತಿರುವುದು ನಾಚಿಕೆಗೇಡಿನ ಸಂಗತಿ. ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕು. ಇಲ್ಲವಾದರೆ ಡಿಸಿ ಕಚೇರಿ ಮುಂಭಾಗ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

    ಪ್ರತಿಭಟನೆಯಲ್ಲಿ ಮುಖಂಡರಾದ ಮಾವಿನಹಳ್ಳಿರೇಣಕಪ್ಪ, ಬಾಣಸಂದ್ರರಮೇಶ್, ವೆಂಕಟಾಪುರದ ಯೋಗೀಶ್, ಶಂಕರಪ್ಪ, ಮಲ್ಲಿಕಾರ್ಜುನ್, ಸತೀಶ್, ಓಂಕಾರಮೂರ್ತಿ, ರೇಣಕಪ್ರಸಾದ್, ರಾಜಶೇಖರಯ್ಯ, ಗುರುಲಿಂಗಯ್ಯ, ಶಿಲ್ಪ, ಶ್ವೇತಾ, ಕಮಲಮ್ಮ, ಲಕ್ಷ್ಮೀದೇವಮ್ಮ, ಸುಕನ್ಯಾ, ಚನ್ನಮ್ಮ, ವೀಣಾ, ಸುಜಾತಾ, ಆಶಾ, ಪ್ರೇಮಾ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts