More

    ಲೋಕೋಪಯೋಗಿ ಇಲಾಖೆ ಜಾಗಕ್ಕೆ ಕನ್ನ..!

    ಆಲೂರು: ರಸ್ತೆಗಾಗಿ ಮೀಸಲಿಟ್ಟ ಲಕ್ಷಾಂತರ ರೂ. ಬೆಲೆ ಬಾಳುವ ಲೋಕೋಪಯೋಗಿ ಇಲಾಖೆ ಜಾಗ ಒತ್ತುವರಿ ಮಾಡಿ ಕಟ್ಟಡ ಕಟ್ಟಿದರೂ ಇಲಾಖೆ ತನಗೇನು ಸಂಬಂಧವೇ ಇಲ್ಲ ಅಂತ ಸುಮ್ಮನಿದ್ದರೆ, ಕಚೇರಿ ಎದುರಲ್ಲೇ ಅಕ್ರಮ ನಡೆದರೂ ಆಲೂರು ಗ್ರಾಮ ಪಂಚಾಯಿತಿ ತನಗೂ ಕಟ್ಟಡಕ್ಕೂ ಸಂಬಂಧವೇ ಇಲ್ಲ ಎಂದು ಸುಮ್ಮನಿದೆ.

    ಬೈಂದೂರು ತಾಲೂಕಿನ ಆಲೂರು ಗ್ರಾಮ ಪಂಚಾಯಿತಿ ಮುಖ್ಯರಸ್ತೆ ಇಕ್ಕೆಲಗಳಲ್ಲಿ ರಸ್ತೆ ವಿಸ್ತರಣೆ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಜಾಗ ಮೀಸಲಿಟ್ಟಿದೆ. ರಸ್ತೆಗೆ ಕಾದಿರಿಸಿದ ಜಾಗದಲ್ಲೇ ಲಾಕ್‌ಡೌನ್ ಇದ್ದರೂ ಕಟ್ಟಡ ಎಬ್ಬಿಸಲಾಗಿದೆ. ಕಟ್ಟಡ ಕಟ್ಟದಂತೆ ಯಥಾಸ್ಥಿತಿ ಕಾಪಾಡುವಂತೆ ನ್ಯಾಯಾಲಯದ ಆದೇಶವಿದ್ದರೂ ಕಟ್ಟಡ ಕಾಮಗಾರಿ ಅಂತಿಮ ಹಂತಕ್ಕೆ ಬಂದಿದೆ.
    144 1ಪಿ, 2ರಲ್ಲಿ ಹತ್ತು ಸೆಂಟ್ಸ್ ಹಾಗೂ ಅದರ ಅಕ್ಕಪಕ್ಕ ಸೇರಿ 25ಸೆಂಟ್ಸ್ ಜಾಗ ಲೋಕೋಪಯೋಗಿ ಇಲಾಖೆ ಸೇರಿದೆ. ಪೇಟೆ ಆರಂಭದಿಂದ ಅಂತ್ಯದವರೆಗೆ ಎಕರೆಗೂ ಮಿಕ್ಕ ಜಾಗವಿದೆ. ನಿರ್ಮಾಣ ಆಗುತ್ತಿರುವ ಕಟ್ಟಡದಲ್ಲಿ ಅಂಗಡಿ ಕೋಣೆ ಕಟ್ಟಿ ಬಾಡಿಗೆಗೆ ನೀಡಲಾಗಿದೆ. ಜಾಗ ಒತ್ತುವರಿ ಮಾಡಿಕೊಂಡವರು ಆಲೂರು ಪೇಟೆಯಲ್ಲಿಲ್ಲದೆ ಗ್ರಾಮೀಣ ಭಾಗದಲ್ಲಿರುವವರು ಎನ್ನುವುದು ವಿಶೇಷ. ಎನ್‌ಒಸಿ ಇಲ್ಲದಿದ್ದರೂ ವಿದ್ಯುತ್ ಸಂಪರ್ಕ ನೀಡಲಾಗಿದೆ.

    ನಿರ್ಮಿಸುತ್ತಿರುವ ಕಟ್ಟಡ ಜಾಗ ಕಂದಾಯ ಇಲಾಖೆ ಅಥವಾ ಲೋಕೋಪಯೋಗಿ ಇಲಾಖೆಗೆ ಸೇರಿದ ಜಾಗವೋ ಎಂದು ಪರಿಶೀಲಿಸಲು ಅಳತೆ ಮಾಡಿಕೊಡುವಂತೆ ತಹಸೀಲ್ದಾರ್‌ಗೆ ಇಲಾಖೆಯಿಂದ ಪತ್ರ ಬರೆಯಲಾಗಿದೆ. ಲೋಕೋಪಯೋಗಿಗೆ ಸೇರಿದರೆ ಎಲ್ಲ ಕಟ್ಟಡಗಳನ್ನು ಕೆಡವಲಾಗುತ್ತದೆ. ಕಟ್ಟಡ ಕಟ್ಟುತ್ತಿರುವವರಿಗೆ ನಮ್ಮ ಇಲಾಖೆಯಿಂದ ಕೆಲಸ ಮಾಡದಂತೆ ತಾಕೀತು ಮಾಡಿದ್ದರೂ, ಕೆಲಸ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಲಾಗುತ್ತದೆ.
    ದುರ್ಗಾರಾಜ್ ಎಡಬ್ಲೂೃಇ ಲೋಕೋಪಯೋಗಿ ಇಲಾಖೆ, ಕುಂದಾಪುರ

    ಪಂಚಾಯಿತಿ ಎದುರು ಕಟ್ಟುತ್ತಿರುವ ಕಟ್ಟಡಕ್ಕೆ ಪರವಾನಗಿ ಕೊಟ್ಟಿಲ್ಲ, ವಿದ್ಯುತ್ ಸಂಪರ್ಕ ಇನ್ನಿತರ ವ್ಯವಸ್ಥೆಗೂ ಗ್ರಾಮ ಪಂಚಾಯಿತಿ ಯಾವುದೇ ಒಪ್ಪಿಗೆ ಕೊಟ್ಟಿಲ್ಲ. ಹಿಂದಿನ ಕಟ್ಟಡದ ಲೈಸೆನ್ಸ್ ಇಟ್ಟುಕೊಂಡು ಕಟ್ಟಡ ಕಟ್ಟುತ್ತಿದ್ದು, ಕಟ್ಟದಂತೆ ಸೂಚಿಸಿದರೂ ನಿಲ್ಲಿಸಿಲ್ಲ. ಈ ಬಗ್ಗೆ ಪೊಲೀಸರಿಗೂ ಮಾಹಿತಿ ನೀಡಲಾಗಿದೆ.
    ಸುಶೀಲಾ ಪಿಡಿಒ, ಗ್ರಾಮ ಪಂಚಾಯಿತಿ ಆಲೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts