More

    ಕೊಡಿಯಾಲದಲ್ಲಿ ಲಕ್ಷ್ಮೀನಾರಾಯಣಸ್ವಾಮಿ ರಥೋತ್ಸವ

    ಶ್ರೀರಂಗಪಟ್ಟಣ: ತಾಲೂಕಿನ ಕೊಡಿಯಾಲ ಗ್ರಾಮದಲ್ಲಿ ಸೋಮವಾರ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವರ ಬ್ರಹ್ಮ ರಥೋತ್ಸವ ಸಾಹಸ್ರಾರು ಭಕ್ತರ ಸಮ್ಮುಖದಲ್ಲಿ ವಿಜೃಂಭಣೆಯಿಂದ ನೆರವೇರಿತು.

    ಗ್ರಾಮದ ಹೃದಯಭಾಗದಲ್ಲಿರುವ ದೇವಾಲಯದಲ್ಲಿ ಶ್ರೀ ಲಕ್ಷ್ಮೀನಾರಾಯಣಸ್ವಾಮಿ ದೇವರಿಗೆ ಮುಂಜಾನೆಯಿಂದ ವಿಶೇಷ ಪೂಜಾರಾಧನೆಗಳನ್ನು ಸಲ್ಲಿಸಿ, ಹೋಮ-ಹವನಗಳನ್ನು ನಡೆಸಲಾಯಿತು. ವಿಶೇಷ ಪಲ್ಲಕ್ಕಿಯಲ್ಲಿ ಸ್ವಾಮಿಯ ಪಂಚಲೋಹದ ಉತ್ಸವ ಮೂರ್ತಿಯನ್ನು ಹೊತ್ತು ತಂದ ಭಕ್ತರು, ರಥದಲ್ಲಿ ಪ್ರತಿಷ್ಠಾಪಿಸಿದರು. ಶ್ರೀ ಲಕ್ಷ್ಮೀನಾರಾಯಣಸ್ವಾಮಿ ಕೈಂಕರ್ಯ ಪದ್ಮಶಾಲಿ ಟ್ರಸ್ಟ್‌ನ ಅಧ್ಯಕ್ಷ ವಿ.ರಾಮಕೃಷ್ಣಯ್ಯ ಅವರು ರಥೋತ್ಸವಕ್ಕೆ 12.45ರ ಶುಭ ಲಗ್ನದಲ್ಲಿ ಚಾಲನೆ ನೀಡಿದರು. ಬಳಿಕ ಗ್ರಾಮದ ಕಲ್ಯಾಣಿಯಿಂದ ಹಾಗೂ ದೇವಾಲಯ ಸುತ್ತಲು ಬ್ರಹ್ಮರಥವನ್ನು ಅಸಂಖ್ಯಾತ ಭಕ್ತರು ಗೋವಿಂದ, ನಾರಾಯಣ, ಮಹಾವಿಷ್ಣು ಎಂಬ ನಾಮಸ್ಮರಣೆಯಲ್ಲಿ ಮಿಂದು ಎಳೆದು ಸಂಭ್ರಮದಿಂದ ಸಂಪನ್ನಗೊಳಿಸಿದರು. ಈ ವೇಳೆ ಭಕ್ತರಿಗೆ ಮಜ್ಜಿಗೆ, ಪಾನಕ, ಕೋಸಂಬರಿ, ಕಲ್ಲಂಗಡಿ ಹಣ್ಣು ವಿತರಿಸಲಾಯಿತು.

    ಕೊಡಿಯಾಲ ಸುತ್ತಮುತ್ತಲ ಗ್ರಾಮಗಳಾದ ತಡಗವಾಡಿ, ಚಿಕ್ಕಹಾರೋಹಳ್ಳಿ, ದೊಡ್ಡ ಹಾರೋಹಳ್ಳಿ, ಹುಣಸನಹಳ್ಳಿ, ಮಾರಸಿಂಗನಹಳ್ಳಿ, ಗರಕಹಳ್ಳಿ, ಪೀಹಳ್ಳಿ, ಮೊಳ್ಳೆನಹಳ್ಳಿ ಗ್ರಾಮಸ್ಥರು ಸೇರಿದಂತೆ ಮಂಡ್ಯ, ಮೈಸೂರು ಹಾಗೂ ಬೆಂಗಳೂರು ಕಡೆಗಳಿಂದ ಭಕ್ತರು ಆಗಮಿಸಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts