More

    ಆಶಿಷ್​ ಮಿಶ್ರಾಗಿಲ್ಲ ಜಾಮೀನು, ವಾರದೊಳಗೆ ಹಾಜರಾಗಲು ಸುಪ್ರೀಂ ಸೂಚನೆ

    ನವದೆಹಲಿ: ಕೇಂದ್ರ ಸಚಿವ ಅಜಯ್​ ಮಿಶ್ರಾ ತೆನಿ ಅವರ ಪುತ್ರ ಆಶಿಷ್​​ ಮಿಶ್ರಾಗೆ ನೀಡಲಾಗಿದ್ದ ಜಾಮೀನನ್ನು ಸೋಮವಾರ ಹಿಂಪಡೆದಿರುವ ಸುಪ್ರೀಂಕೋರ್ಟ್ ವಾರದೊಳಗೆ ಶರಣಾಗುವಂತೆ ಸೂಚಿಸಿದೆ.

    ಲಖಿಂಪುರ ಹಿಂಸೆ ಪ್ರಕರಣದಲ್ಲಿ ಆಶಿಷ್ ಮಿಶ್ರಾ ಅವರನ್ನು ಬಂಧಿಸಲಾಗಿತ್ತು. 4 ತಿಂಗಳ ಜೈಲುವಾಸ ಬಳಿಕ ಫೆ.10ರಂದು ಅಲಹಾಬಾದ್​ ಹೈಕೋರ್ಟ್​ ಜಾಮೀನು ಮಂಜೂರು ಮಾಡಿತ್ತು.

    ಆಶಿಷ್​ ಮಿಶ್ರಾ ಅವರ ತಂದೆ ಅಜಯ್​ ಮಿಶ್ರಾ ಕೇಂದ್ರ ಸಚಿವರಾಗಿದ್ದು, ಉತ್ತರ ಪ್ರದೇಶದ ಬಿಜೆಪಿಯ ಪ್ರಭಾವಿ ರಾಜಕಾರಣಿ. ಕಳೆದ ವರ್ಷ ಅಕ್ಟೋಬರ್​ 3 ರಂದು ಬಿಜೆಪಿ ಮುಖಂಡ ಕೇಶವ್​ ಪ್ರಸಾದ್ ಮೌರ್ಯ ಅವರ ವಿರುದ್ಧ ರೈತರ ಗುಂಪೊಂದು ಪ್ರತಿಭಟನೆ ನಡೆಸಿತ್ತು. ಈ ವೇಳೆ ಕಾರೊಂದು ಪ್ರತಿಭಟನಾಕಾರರ ಮೇಲೆ ಹರಿದ ಪರಿಣಾಮ ನಾಲ್ವರು ರೈತರು ಮೃತಪಟ್ಟಿದ್ದರು. ಆಕ್ರೋಶಗೊಂಡ ರೈತರು ಕಾರು ಚಾಲಕನನ್ನು ಹಿಡಿದು ಥಳಿಸಿದ್ದರು. ತೀವ್ರ ಗಾಯಗೊಂಡಿದ್ದ ಚಾಲಕ ಕೂಡ ಮೃತಪಟ್ಟಿದ್ದ ಈ ನಂತರ ಗಲಭೆ ಉಂಟಾಗಿತ್ತು.

    ಪ್ರೀತಿಸಿದವಳ ಜೊತೆ ಜಗಳ, ಮೊಬೈಲ್‌ ಟವರ್‌ ಏರಿದ ಪ್ರೇಮಿ

    ಹುಬ್ಬಳ್ಳಿ ಗಲಾಟೆ ಸಂಬಂಧ ಅಮಾಯಕರಿಗೆ ತೊಂದರೆ ಕೊಡಬೇಡಿ: ಪೊಲೀಸರಿಗೆ ಎಚ್​ಡಿಕೆ ಮನವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts