ಪ್ರೀತಿಸಿದವಳ ಜೊತೆ ಜಗಳ, ಮೊಬೈಲ್‌ ಟವರ್‌ ಏರಿದ ಪ್ರೇಮಿ

ಮಂಗಳೂರು: ಪ್ರೀತಿಸಿದ ಹುಡುಗಿ ಜೊತೆ ಮನಸ್ತಾಪದ ಕಾರಣಕ್ಕೆ ಯುವಕನೊಬ್ಬ ಮೊಬೈಲ್‌ ಟವರ್‌ ಏರಿ ಕುಳಿತು ಕೆಲ ಕಾಲ ಫಜೀತಿ ಸೃಷ್ಟಿಸಿದ್ದಾನೆ.ಮಂಗಳೂರು ಹೊರವಲಯದ ಅಡ್ಯಾರ್‌ ಎಂಬಲ್ಲಿ ಈ ಘಟನೆ ಸೋಮವಾರ ನಡೆದಿದೆ. ಕೊಡ್ಮಾಣ್‌ ಕಂಜಾರ ಎಂಬಲ್ಲಿನ ನಿವಾಸಿ ಸುಧೀರ್‌ ಅದೇ ಊರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವರಿಬ್ಬರ ನಡುವೆ ಯಾವುದೋ ವಿಚಾರಕ್ಕೆ ಮನಸ್ತಾಪ ಉಂಟಾಗಿದ್ದರಿಂದ ಅಡ್ಯಾರ್‌ ಬಳಿಯ ಆರ್‌ಕೆ ಬಿಲ್ಡಿಂಗ್‌ನ ಮೇಲಿದ್ದ ಮೊಬೈಲ್‌ ಟವರ್‌ ಏರಿ ಕುಳಿತಿದ್ದಾನೆ.ಪೊಲೀಸರು, ಸ್ಥಳೀಯರು ಆತನ ಮನವೊಲಿಕೆಗೆ ಯತ್ನಿಸಿದ್ದರೂ ಫಲಕಾರಿಯಾಗಲಿಲ್ಲ. ಬಳಿಕ ಆತನ ಪ್ರೇಮಿ ಬಂದ … Continue reading ಪ್ರೀತಿಸಿದವಳ ಜೊತೆ ಜಗಳ, ಮೊಬೈಲ್‌ ಟವರ್‌ ಏರಿದ ಪ್ರೇಮಿ