More

    ರಣಘಟ್ಟ ಯೋಜನೆಗೆ ಸಂಪುಟ ಅನುಮೋದನೆ

    ಚಿಕ್ಕಮಗಳೂರು: ಬೇಲೂರಿನ ಯಗಚಿ ನದಿಯ ರಣಘಟ್ಟ ಪಿಕಪ್​ನಿಂದ ಬೇಲೂರು ತಾಲೂಕಿನ ಕೆರೆಗಳ ಮೂಲಕ ಚಿಕ್ಕಮಗಳೂರು ತಾಲೂಕಿನ ಲಕ್ಯಾ ಹೋಬಳಿಯ ಬೆಳವಾಡಿ ಹಾಗೂ ಇತರ ಸರಣಿ ಕೆರೆಗಳಿಗೆ ಗುರುತ್ವ ನಾಲೆ ಮೂಲಕ ನೀರು ತುಂಬಿಸುವ ಅಂದಾಜು 125.46 ಕೋಟಿ ರೂ. ವೆಚ್ಚದ ಯೋಜನೆಗೆ ರಾಜ್ಯ ಸಚಿವ ಸಂಪುಟ ಸೋಮವಾರ ಅನುಮೋದನೆ ನೀಡಿದೆ.

    ಈ ಕುರಿತು ಮಾಹಿತಿ ನೀಡಿದ ಶಾಸಕ ಸಿ.ಟಿ.ರವಿ, ರಣಘಟ್ಟ ನೀರಾವರಿ ಯೋಜನೆಯಲ್ಲಿ ಒಟ್ಟು 8 ಕೆರೆಗಳು ಹಾಗೂ ಯಗಚಿ ನದಿಯಲ್ಲಿ ಹೆಚ್ಚುವರಿ ನೀರು ಲಭ್ಯವಿರುವಾಗ ಇತರ ಕೆರೆಗಳಿಗೂ ನೀರು ತುಂಬಿಸಲು ಚಿಂತಿಸಲಾಗಿದೆ ಎಂದು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.

    ರಣಘಟ್ಟ ಪಿಕಪ್​ನಿಂದ 2.40 ಕಿಮೀ ಉದ್ದದ ತೆರೆದ ಕಾಲುವೆ, 4.20 ಕಿಮೀ ಉದ್ದದ ಸುರಂಗ ನಾಲೆ ಮತ್ತು 1.70 ಕಿಮೀ ನಿರ್ಗಮನದ ತೆರೆದ ನಾಲೆ ಸೇರಿ ಒಟ್ಟಾರೆ 8.30 ಕಿಮೀ ಉದ್ದದ ಗುರುತ್ವ ನಾಲೆ ಮೂಲಕ ಕೆರೆಗಳನ್ನು ತುಂಬಿಸಲಾಗುತ್ತದೆ. ಈ ಯೋಜನೆ ಕಾವೇರಿ ನೀರಾವರಿ ನಿಗಮದಿಂದ ಅನುಷ್ಠಾನವಾಗಲಿದೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಎರಡು ಬಾರಿ ಸಚಿವ ಸಂಪುಟದ ಮುಂದೆ ಮಂಡನೆಯಾದರೂ ಅನುಮೋದನೆ ಸಿಕ್ಕಿರಲಿಲ್ಲ. ಬಳಿಕ ನಾನು ಮುಖ್ಯಮಂತ್ರಿಯನ್ನು ಖುದ್ದು ಭೇಟಿ ಮಾಡಿ ಯೋಜನೆ ಅಗತ್ಯದ ಬಗ್ಗೆ ಮನವರಿಕೆ ಮಾಡಿಕೊಟ್ಟೆ. ಪುನಃ ಯೋಜನೆಯ ಕಡತವನ್ನು ಸಚಿವ ಸಂಪುಟದ ಮುಂದೆ ತರಿಸಿ ಅನುಮೋದನೆ ನೀಡುವಂತೆ ಕೋರಿದ್ದು, ಇದೀಗ ಸ್ಪಂದನೆ ಸಿಕ್ಕಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts