More

    3 ವರ್ಷಗಳ ಬಳಿಕ ನಿಸರಾಣಿಯಲ್ಲಿ ಕೆರೆ ಬೇಟೆ

    ಸೊರಬ: ಮಲೆನಾಡಿನ ಸಾಂಪ್ರದಾಯಿಕ ಮೀನು ಬೇಟೆ ಅಪ್ಪಟ ಗ್ರಾಮೀಣ ಕ್ರೀಡೆಗಳಲ್ಲಿ ಒಂದಾಗಿದೆ. ತಾಲೂಕಿನ ನಿಸರಾಣಿ ಗ್ರಾಮದಲ್ಲಿನ ಕೆರೆಯಲ್ಲಿ ಮಂಗಳವಾರ ಕೆರೆಬೇಟೆ ನಡೆಯಿತು.

    ಏಷ್ಯಾ ಖಂಡದಲ್ಲೇ ಅತಿ ಹೆಚ್ಚು ಕೆರೆಗಳನ್ನು ಸೊರಬ ತಾಲೂಲು ಹೊಂದಿದೆ. ಸುಮಾರು 1,200 ಕೆರೆಗಳಿವೆ. ಬೇಸಿಗೆ ಆರಂಭವಾಗುತ್ತಿದ್ದಂತೆ ಕೆರೆಗಳು ಬತ್ತುತ್ತವೆ. ಇದೇ ವೇಳೆ ರೈತರ ಜಾನಪದ ಕ್ರೀಡೆ ಕೆರೆಬೇಟೆ ಎಲ್ಲೆಡೆ ರಂಗೇರುತ್ತದೆ. ಆದರೆ ಈ ಬಾರಿ ಮಳೆ ಇನ್ನೂ ಸಮರ್ಪಕವಾಗಿಲ್ಲ. ನೀರು ಬತ್ತಿರುವ ಕೆರೆಗಳಲ್ಲಿ ಮೀನುಗಳ ಬೇಟೆ ತಾಲೂಕಿನಲ್ಲಿ ಸದ್ದಿಲ್ಲದೆ ನಡೆಯುತ್ತಿವೆ. ಅದರಲ್ಲಿ ನಿಸರಾಣಿ ಕೆರೆಕೂಡ ಒಂದು. ಪುನರ್ವಸು ಮಳೆ ಬಂದರೂ ಕೆರೆಯಲ್ಲಿ ನೀರು ತುಂಬದ ಕಾರಣ ಮಂಗಳವಾರ ಕೆರಬೇಟೆ ಮಾಡಲಾಯಿತು. ಒಂದು ಕೂಣಿಗೆ 600 ರೂ. ದರ ನಿಗದಿ ಮಾಡಲಾಗಿತ್ತು. ಕಳೆದ ಮೂರು ವರ್ಷದಿಂದ ಕೆರೆಬೇಟೆ ಆಗದ ಕಾರಣ 25 ಕೆ.ಜಿ. ತೂಕದ ದೊಡ್ಡ ಗಾತ್ರದ ಮೀನುಗಳೂ ಸಿಕ್ಕಿವೆ.
    ಕೆರೆಯಲ್ಲಿ ಕೆಲವರು ದೊಡ್ಡ ದೊಡ್ಡ ಮೀನುಗಳನ್ನು ಹಿಡಿದು ಸಂಭ್ರಮಿಸಿದರೆ, ಮೀನು ಸೀಗದೆ ಕೇಲವರು ಬೇಸರದಿಂದ ಮನೆ ಕಡೆಗೆ ಹೊರಟರು. ತಾಲೂಕಿನ ವಿವಿಧ ಭಾಗಗಳ ಜನತೆ ಕೆರೆಬೇಟೆಯಲ್ಲಿ ಪಾಲ್ಗೊಂಡಿದ್ದರು. ಜಿಟಿ ಜಿಟಿ ಮಳೆಯಲ್ಲೇ ಕೆರೆಬೇಟೆ ನೋಡಲು ಅಕ್ಕ ಪಕ್ಕದ ಗ್ರಾಮದ ನೂರಾರು ಜನ ಸೇರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts